ಬೆಂಗಳೂರು: ದೇಶದಲ್ಲಿ ತಿಂಗಳಿಗೆ 20 ಲಕ್ಷದಿಂದ 25 ಲಕ್ಷದವರೆಗೆ ಬಿಎಸ್ಎನ್ಎಲ್ ಚಂದಾದಾರರ ಸಂಖ್ಯೆ ಹೆಚ್ಚಾಗುತ್ತಿದೆ. ದೂರಸಂಪರ್ಕ ಮಾರುಕಟ್ಟೆಯಲ್ಲಿ ಬಿಎಸ್ಎನ್ಎಲ್ ಪಾಲು ಶೇ 9ರಿಂದ ಶೇ 12ಕ್ಕೆ ಏರಿಕೆ ಕಂಡಿದೆ. ಆದರೂ, 10 ತಿಂಗಳಿನಿಂದ ವೇತನ ನೀಡುತ್ತಿಲ್ಲ ಎಂದು ಕಂಪನಿಯ ಗುತ್ತಿಗೆ ಕಾರ್ಮಿಕರು ದೂರಿದ್ದಾರೆ.

‘ದೇಶದಲ್ಲಿ 50 ಸಾವಿರ, ರಾಜ್ಯದಲ್ಲಿ 2,500 ಗುತ್ತಿಗೆ ಕಾರ್ಮಿಕರಿದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೆಲಸ ಮಾಡುವವರಿಗೆ ಎಂಟು ತಿಂಗಳಿಂದ, ಬೀದರ್, ರಾಯಚೂರು, ಕಲಬುರ್ಗಿಯಲ್ಲಿ ಕೆಲಸ ಮಾಡುವವರಿಗೆ 15 ತಿಂಗಳುಗಳಿಂದ ವೇತನ ನೀಡಿಲ್ಲ’ ಎಂದು ಬಿಎಸ್ಎನ್ಎಲ್ ಗುತ್ತಿಗೆ ನೌಕರರ ಸಂಘದ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶದಲ್ಲಿ ಕಾಯಂ ನೌಕರರ ಸಂಖ್ಯೆ ಈಗ 65 ಸಾವಿರ ಮಾತ್ರ ಇದೆ. ಟೆಲಿಫೋನ್ ದುರಸ್ತಿ, ಬ್ರಾಡ್ಬ್ಯಾಂಡ್ ಸಂಪರ್ಕ, ಒಎಫ್ಸಿ ಕೇಬಲ್ ಅಳವಡಿಕೆ, ಕಂಬಗಳನ್ನು ಹತ್ತಿಳಿಯುವುದು ಸೇರಿದಂತೆ ಬಹುತೇಕ ಕೆಲಸಗಳನ್ನು ಗುತ್ತಿಗೆ ನೌಕರರೇ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಎಂಟು ತಿಂಗಳಿನಿಂದ ವೇತನ ನೀಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ಗುತ್ತಿಗೆದಾರರನ್ನು ಕೇಳಿ ಎನ್ನುತ್ತಾರೆ. ಗುತ್ತಿಗೆದಾರರನ್ನು ಕೇಳಿದರೆ, ದೆಹಲಿಯಿಂದ ಬಿಲ್ ಆಗಿಲ್ಲ ಎನ್ನುತ್ತಾರೆ’ ಎಂದು ಸಹಕಾರನಗರದ ಬಿಎಸ್ಎನ್ಎಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಪಾಲಕೃಷ್ಣ ಅಳಲುತೋಡಿಕೊಳ್ಳುತ್ತಾರೆ.

‘ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅಧಿಕಾರಿಗಳಿಗೆ ವಿಆರ್ಎಸ್ ನೀಡಲಾಗಿದೆ. ಇರುವ ಅಧಿಕಾರಿಗಳು ಕೆಲಸ ಮಾತ್ರ ಹೇಳುತ್ತಾರೆ. ವೇತನ ಕೇಳಿದರೆ, ನಮಗೇ ಸಂಬಳ ಬಂದಿಲ್ಲ ಎಂದು ತಮ್ಮ ವ್ಯಥೆ ಮುಂದಿಡುತ್ತಾರೆ’ ಎಂದು ಅವರು ದೂರಿದರು.

‘ಬೆಂಗಳೂರು ಸುತ್ತ–ಮುತ್ತ ಜಿಲ್ಲೆಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ₹13,485 ಸಂಬಳವಿದೆ. ಉತ್ತರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ₹7,380 ಕೊಡುತ್ತಾರೆ. ಅಲ್ಲಿನವರಿಗೆ ಒಂದೂವರೆ ವರ್ಷಗಳಿಂದ ವೇತನ ನೀಡಿಲ್ಲ. ಹಳೆಯ ಗುತ್ತಿಗೆದಾರರ ಜೊತೆಗಿನ ಟೆಂಡರ್ ರದ್ದು ಮಾಡಲಾಗಿದೆ. ಈಗ ಒಂದೊಂದು ಸ್ವರೂಪದ ಕೆಲಸಕ್ಕೆ, ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ’ ಎಂದರು.

‘ತಿಂಗಳಿಗೆ ₹1,300 ಕೋಟಿ ವಹಿವಾಟು’:‘ಬಿಎಸ್ಎನ್ಎಲ್ ಈಗಲೂ ತಿಂಗಳಿಗೆ ₹1,300 ಕೋಟಿಯಷ್ಟು ವಹಿವಾಟು ನಡೆಸುತ್ತಿದೆ. 4ಜಿ ಸ್ಪೆಕ್ಟ್ರಂ ಸೇವೆಗೆ ಅವಕಾಶ ಇಲ್ಲದಿದ್ದರೂ ಕಂಪನಿ ಉತ್ತಮ ನಿರ್ವಹಣೆ ತೋರಿದೆ. ಆದರೂ, ಸಂಸ್ಥೆಯನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ’ ಎಂದು ಬಿಎಸ್ಎನ್ಎಲ್ ನೌಕರರ ಒಕ್ಕೂಟದ ರಾಜ್ಯ ಘಟಕದ ವಲಯ ಕಾರ್ಯದರ್ಶಿಎಚ್.ವಿ. ಸುದರ್ಶನ್ ದೂರುತ್ತಾರೆ.

‘ವೊಡಾಫೋನ್, ಐಡಿಯಾ, ಏರ್ಟೆಲ್ ಸಂಸ್ಥೆಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಬಿಎಸ್ಎನ್ಎಲ್ ಚಂದಾದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ’ ಎಂದರು.

‘ಖಾಸಗಿ ಮೊಬೈಲ್ ಕಂಪನಿಗಳ ಸಾಲ ₹3.9 ಲಕ್ಷ ಕೋಟಿ ಇದೆ. ಅದನ್ನು ತೀರಿಸಲು 10 ವರ್ಷ ಕಾಲಾವಕಾಶ ನೀಡಲಾಗಿದೆ. ಆದರೆ, ಬಿಎಸ್ಎನ್ಎಲ್ ಸಾಲ ₹18 ಸಾವಿರ ಕೋಟಿ ಇದ್ದು, ಅದರಲ್ಲಿ ₹15 ಸಾವಿರ ಕೋಟಿ ಕೇಂದ್ರದಿಂದ ಬರಬೇಕಾಗಿದೆ’ ಎಂದರು.

‘ಉದ್ಯೋಗಿಗಳಿಗೆ ವಿಆರ್ಎಸ್ ನೀಡಿ ಮನೆಗೆ ಕಳಿಸಲು ಸರ್ಕಾರ ₹20 ಸಾವಿರ ಕೋಟಿ ಖರ್ಚು ಮಾಡುತ್ತದೆ. ಆದರೆ, ಸಂಸ್ಥೆಯ ಉನ್ನತಿಗೆ ಹಣ ನೀಡುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.