ಗುರುವಾರ , ಅಕ್ಟೋಬರ್ 21, 2021
24 °C

‘ಕನ್ನಡದಲ್ಲಿ ಯುಪಿಎಸ್‌ಸಿ’ ಟ್ವಿಟರ್ ಅಭಿಯಾನ ನಾಳೆ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯುಪಿಎಸ್‌ಸಿ ಪರೀಕ್ಷೆಗಳನ್ನು ಈ ಬಾರಿಯೂ ಕನ್ನಡದಲ್ಲಿ ಬರೆಯಲು ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ಅ.10ರಂದು ಬೆಳಿಗ್ಗೆ 10.10ರಿಂದ ‘ಕನ್ನಡದಲ್ಲಿ ಯುಪಿಎಸ್‌ಸಿ’ ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಕ್ಷಣಾ‌ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.

‘ಅ.10ರಂದು ಯುಪಿಎಸ್‌ಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯಲ್ಲಿ ಕನ್ನಡಕ್ಕೆ ಮಾನ್ಯತೆ ನೀಡದೆ, ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡಲಾಗುತ್ತಿದೆ. ಇದನ್ನು ಖಂಡಿಸಿ ಕನ್ನಡಿಗರ ಹಕ್ಕೊತ್ತಾಯದ ಸರಣಿ ಅಭಿಯಾನ ಆರಂಭಿಸಿದ್ದೇವೆ. ಈ ಮೂಲಕ‌ ಕರ್ನಾಟಕದ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲಿದ್ದೇವೆ’ ಎಂದರು.

‘ಅಭಿಯಾನದ ಭಾಗವಾಗಿ ಅ.10ರಂದು #ಕನ್ನಡದಲ್ಲಿUPSC, #UPSCInKannada ಎಂಬ ಹ್ಯಾಶ್ ಟ್ಯಾಗ್‌ ಬಳಸುವ ಮೂಲಕ ಟ್ವಿಟರ್‌ನಲ್ಲಿ ದನಿ ಎತ್ತಲಿದ್ದೇವೆ. ಅಭಿಯಾನದಲ್ಲಿ ರಾಜ್ಯದ ಜನ ಭಾಗವಹಿಸಬಹುದು. ಕೇಂದ್ರ ಸರ್ಕಾರದ ಎಲ್ಲ ಹಂತದ ಪರೀಕ್ಷೆಗಳೂ ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ವಿಚಾರ ಸಂಕಿರಣ, ಚಿತ್ರ ಚಳವಳಿ, ಪತ್ರ ಚಳವಳಿಗಳನ್ನೂ ಹಮ್ಮಿಕೊಳ್ಳಲಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.