ಮಂಗಳವಾರ, ಆಗಸ್ಟ್ 16, 2022
29 °C

ಚಕ್ರತೀರ್ಥರಿಂದ ‘ಬರಗೂರು ಗ್ಯಾಂಗ್‌’ ಪದ ಬಳಕೆ: ಡಾ.ಬಿ.ವಿ. ವಸಂತ ಕುಮಾರ್‌ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಸಾಹಿತಿ ಬರಗೂರು ರಾಮಚಂದ್ರಪ್ಪ ‘ಎಡ’ವೂ ಅಲ್ಲ, ‘ಬಲ’ವೂ ಅಲ್ಲದ ‘ಮಾನವೀಯ’ ಪಂಥದವರು. ಅವರ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಳಸಿರುವ ‘ಬರಗೂರು ಗ್ಯಾಂಗ್‌’ ಪದ ತಪ್ಪು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್‌ ಭಾನುವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಠ್ಯಪುಸ್ತಕ ಕುರಿತು ಊಹಾಪೋಹದ ಮೇಲೆ ವ್ಯಕ್ತಿ, ಜಾತಿ ನಿಂದನೆ ಚರ್ಚೆ ನಡೆದಿರುವುದು ಒಳ್ಳೆ ಬೆಳವಣಿಗೆಯಲ್ಲ. ಈಗ ತತ್ವ ವಿಚಾರದ ಮೇಲೆ ನಡೆಯಬೇಕಿದ್ದ ಚರ್ಚೆ ಪಂಥ, ರಾಜಕೀಯ ಸ್ವರೂಪ ಪಡೆದಿದೆ’ ಎಂದರು.

‘ಪಠ್ಯಪುಸ್ತಕಗಳಲ್ಲಿ ಒಂದೇ ಜಾತಿಯ ಲೇಖಕರ ಲೇಖನಗಳನ್ನು ಸೇರಿಸಿರುವುದು ಸರ್ವಥಾ ಸರಿಯಲ್ಲ. ಆ ಕಾರಣಕ್ಕಾಗಿ ಇಡೀ ಪಠ್ಯವನ್ನು ಬ್ರಾಹ್ಮಣ ಪಠ್ಯ, ಆರ್‌ಎಸ್‌ಎಸ್‌ ಪಠ್ಯ ಎನ್ನುತ್ತಿರುವುದು ಬೌದ್ಧಿಕ ದಾರಿದ್ರ್ಯದ ಪ್ರತೀಕ’ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು