ಶನಿವಾರ, ಮೇ 21, 2022
23 °C
ಭಟ್ರಹಳ್ಳಿ ಗೂಳಪ್ಪ, ಗೌರಿ ಕೊರಗ, ಲಕ್ಷ್ಮಿ ಸಿದ್ದಿಗೆ ಪ್ರಶಸ್ತಿ

11 ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ನೀಡುವ ‘ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಗೆ 2020 ರ ಸಾಲಿಗೆ ಐದು ಸಾಧಕರು ಮತ್ತು 2021 ನೇ ಸಾಲಿಗೆ ಆರು ಸಾಧಕರು ಸೇರಿ ಒಟ್ಟು 11 ಜನರನ್ನು ಆಯ್ಕೆ ಮಾಡಲಾಗಿದೆ.

ಪರಿಶಿಷ್ಟ ಕಲ್ಯಾಣ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ಬೆಳಿಗ್ಗೆ 11 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪುರಸ್ಕೃತರಿಗೆ ₹5 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕದ ಜೊತೆಗೆ ಫಲಕವನ್ನು ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡುವರು.

 2021 ನೇ ಸಾಲಿನ ಪ್ರಶಸ್ತಿ

lಕೆ. ಸಿ ನಾಗರಾಜು (ಸಮಾಜ ಸೇವೆ), ಮಧುಗಿರಿ ತಾಲ್ಲೂಕಿನ ಇವರು ಸಂಘ–ಸಂಸ್ಥೆಗಳ ಮೂಲಕ ಜನಪರ ಕಾರ್ಯಕ್ರಮ ಮತ್ತು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.
*ಲಕ್ಷ್ಮಿ ಗಣಪತಿ ಸಿದ್ದಿ ( ಸಮಾಜ ಸೇವೆ), ಉತ್ತರಕನ್ನಡ ಜಿಲ್ಲೆಯ ಇವರು 35 ವರ್ಷಗಳಿಂದ ನಾಟಿ ವೈದ್ಯೆಯಾಗಿ 300 ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ.

lಪ್ರೊ.ಎಸ್‌.ಆರ್‌.ನಿರಂಜನ (ಶಿಕ್ಷಣ ಕ್ಷೇತ್ರ), ಮೈಸೂರಿನ ಇವರು ವಿಜ್ಞಾನ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳನ್ನು ನಡೆಸಿ, ಹಕ್ಕುಸ್ವಾಮ್ಯಗಳನ್ನು ಪಡೆದಿದ್ದಾರೆ.

lಭಟ್ರಹಳ್ಳಿ ಗೂಳಪ್ಪ (ಸಮಾಜ ಸೇವೆ) ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕಿನವರಾದ ಇವರು, 35 ವರ್ಷಗಳಿಂದ 75 ಎಕರೆಯಲ್ಲಿ ಅರಣ್ಯ ಬೆಳೆಸಿದ್ದಾರೆ.

lಅಶ್ವತ್ಥರಾಮಯ್ಯ (ಸಮಾಜ ಸೇವೆ) ಬೆಂಗಳೂರಿನ ಇವರು ವಾಲ್ಮೀಕಿ ಸಮಾಜದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

lಜಂಬಯ್ಯ ನಾಯಕ (ಸಮಾಜ ಸೇವೆ), ಹೊಸಪೇಟೆಯವರಾದ ಇವರು, ಪರಿಶಿಷ್ಟ ಪಂಗಡಗಳ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದಾರೆ.

2020 ನೇ ಸಾಲಿನ ಪ್ರಶಸ್ತಿ:

lಡಾ.ಕೆ.ಆರ್.ಪಾಟೀಲ, ಹುಬ್ಬಳ್ಳಿಯ ಇವರು ಬುಡಕಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವಾಗಿದ್ದಾರೆ. ಧಾರವಾಡ ಮತ್ತು ವಿಜಯನಗರದಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

lಬಿ.ಎಲ್‌.ವೇಣು (ಸಾಹಿತ್ಯ), ಇವರು ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ.

lಗೌರಿ ಕೊರಗ (ಸಮಾಜ ಸೇವೆ), ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಇವರು, ಕೊರಗ ಜನಾಂಗದ ಅಭ್ಯುದಯಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಚಳವಳಿಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

lಮಾರಪ್ಪ ನಾಯಕ (ಸಂಘಟನೆ) ಇವರು ಪರಿಶಿಷ್ಟ ಪಂಗಡದ ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಪ್ರಮುಖ ಯೋಜನೆಗಳಾದ ಗಂಗಾ ಕಲ್ಯಾಣ, ಭೂ ಒಡೆತನ, ಏತ ನೀರಾವರಿ ಯೋಜನೆಗಳ ಸಮರ್ಪಕ ಜಾರಿ ತರಲು ಶ್ರಮಿಸಿದ್ದಾರೆ.

lತಿಪ್ಪೇಸ್ವಾಮಿ ಎಚ್. (ಸಿರಿಗೆರೆ ತಿಪ್ಪೇಶ್), (ಸಮಾಜ ಸೇವೆ), ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಲು ಅನೇಕ ಹೋರಾಟಗಳನ್ನು ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು