ಗುರುವಾರ , ಮೇ 13, 2021
39 °C

ವೆಂಟಿಲೇಟರ್ ಪೂರೈಕೆ ವಿಳಂಬವಿಲ್ಲ: ಕೆ.ಎಸ್. ಲತಾಕುಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ವೆಂಟಿಲೇಟರ್‌ಗಳ ಕೊರತೆ ಉಂಟಾಗಿದೆ. ಕೇಂದ್ರ ಸರ್ಕಾರದಿಂದ ವೆಂಟಿಲೇಟರ್‌ಗಳು ಪೂರೈಕೆಯಾಗಿದ್ದರೂ ಸಕಾಲಕ್ಕೆ ಇವುಗಳನ್ನು ಪೂರೈಸಲಾಗುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ವೈದ್ಯಕೀಯ ಪೂರೈಕೆಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಸ್. ಲತಾಕುಮಾರಿ, ‘ಕೇಂದ್ರ ಸರ್ಕಾರದಿಂದ ವೆಂಟಿಲೇಟರ್‌ ಪೂರೈಸಲಾಗಿದ್ದರೂ ಅವುಗಳನ್ನು ಸರಿಯಾಗಿ ವಿತರಿಸಿಲ್ಲ ಎಂಬ ಆರೋಪ ಸುಳ್ಳು. ಕೇಂದ್ರದಿಂದ ಉಪಕರಣಗಳು ಬರುತ್ತಿದ್ದಂತೆ ಅಗತ್ಯ ಇರುವೆಡೆ ಕಳುಹಿಸಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲು ನಮ್ಮ ಬಳಿ 96 ವೆಂಟಿಲೇಟರ್‌ಗಳು ಇದ್ದವು. 26ರಿಂದ 30 ದಿನಗಳ ಅವಧಿಯಲ್ಲಿ ದಿನಕ್ಕೆ 20–30ರಂತೆ 788 ವೆಂಟಿಲೇಟರ್‌ಗಳು ಕೇಂದ್ರ ಸರ್ಕಾರದಿಂದ ಪೂರೈಕೆಯಾಗಿವೆ. ಅವು ಬಂದಂತೆ ರಾಜ್ಯದ ವಿವಿಧೆಡೆ ಕಳುಹಿಸಲಾಗಿದೆ. ಈವರೆಗೆ 145 ವೆಂಟಲೇಟರ್‌ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಕಳುಹಿಸಲಾಗಿದ್ದು, ಹಂತ–ಹಂತವಾಗಿ ವಿತರಣೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಸರ್ಕಾರಿ ಕೋಟಾದ ಅಡಿ ದಾಖಲಾಗುತ್ತಿರುವ ರೋಗಿಗಳಿಗೆ ಮೀಸಲಾಗಿರುವ ಹಾಸಿಗೆಗಳಿಗೆ ಮೊದಲು ಇವುಗಳನ್ನು ಪೂರೈಸಲು ಆದ್ಯತೆ ನೀಡಲಾಗುತ್ತಿದೆ’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು