ಬುಧವಾರ, ಮಾರ್ಚ್ 29, 2023
30 °C

ಶೇ 25ರ ದರದಲ್ಲಿ ಹೆಣ್ಣು ಕರುಗಳ ವಿತರಣೆ: ಪ್ರಭು ಚವ್ಹಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಶು ಸಂಗೋಪನಾ ಇಲಾಖೆಯ ತಳಿ ಸಂವರ್ಧನಾ ಕೇಂದ್ರಗಳಲ್ಲಿ ಜನಿಸುವ ದೇಶೀಯ ತಳಿಗಳ ಹೆಣ್ಣು ಕರುಗಳನ್ನು ‘ಅಮೃತ ಸಿರಿ’ ಯೋಜನೆಯಡಿ ಮಾರುಕಟ್ಟೆ ದರದ ಶೇಕಡ 25ರಷ್ಟು ದರದಲ್ಲಿ ವಿವಿಧ ವರ್ಗದ ಜನರಿಗೆ ವಿತರಣೆ ಮಾಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

‘ರಾಜ್ಯದಲ್ಲಿರುವ 19 ತಳಿ ಸಂವರ್ಧನಾ ಕೇಂದ್ರಗಳಲ್ಲಿರುವ 927ಕ್ಕೂ ಹೆಚ್ಚು ಹೆಣ್ಣು ಕರುಗಳನ್ನು ಅಮೃತ ಸಿರಿ ಯೋಜನೆಯಡಿ ವಿತರಿಸಲಾಗುವುದು. ಹಳ್ಳಿಕಾರ್‌, ಅಮೃತ್‌ ಮಹಲ್‌, ಮಲೆನಾಡು ಗಿಡ್ಡ, ಖಿಲಾರಿ ಮತ್ತು ಕೃಷ್ಣವ್ಯಾಲಿ ತಳಿಯ ಈ ಕರುಗಳನ್ನು ದೇಶೀಯ ತಳಿಯ ಜಾನುವಾರುಗಳ ಅಭಿವೃದ್ಧಿ ಉದ್ದೇಶದಿಂದ ವಿತರಣೆ ಮಾಡಲು ನಿರ್ಧರಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಯೋಜನೆಯಡಿ ಕರುಗಳ ಹಂಚಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಹುತಾತ್ಮ ಯೋಧರ ಪತ್ನಿಯರು, ಶವಸಂಸ್ಕಾರ ನಡೆಸುವ ಕಾರ್ಮಿಕರು, ವಿಧವೆಯರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು