ಶುಕ್ರವಾರ, ಅಕ್ಟೋಬರ್ 7, 2022
24 °C

ವಿಕ್ರಮ ವಿಸಾಜಿ ಕೃತಿಗೆ ‘ಡಾ. ಗಿರಡ್ಡಿ ಪ್ರತಿಷ್ಠಾನ’ದ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಡಾ.ಗಿರಡ್ಡಿ ಗೋವಿಂದರಾಜ ಅವರ ಹೆಸರಿನಲ್ಲಿ, ನಗರದ ಗಿರಡ್ಡಿ ಗೋವಿಂದರಾಜ ಫೌಂಡೇಷನ್ ಪ್ರಸಕ್ತ ಸಾಲಿನಿಂದ ನೀಡುತ್ತಿರುವ ರಾಜ್ಯ ಮಟ್ಟದ ‘ಅತ್ಯುತ್ತಮ ವಿಮರ್ಶಾ ಕೃತಿ’ ಪ್ರಶಸ್ತಿಗೆ ಬೆಂಗ ಳೂರಿನ ಅಭಿನವ ಪ್ರಕಾಶನ ಪ್ರಕಟಿಸಿರುವ, ಕಲಬುರಗಿಯ ಡಾ.ವಿಕ್ರಮ ವಿಸಾಜಿ ಅವರ ‘ಪಠ್ಯದ ಭವಾವಳಿ’ ಕೃತಿ ಆಯ್ಕೆಯಾಗಿದೆ.

ಈ ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಇದು ಗಿರಡ್ಡಿ ಗೋವಿಂದರಾಜ ಫೌಂಡೇಷನ್ ವಿಮರ್ಶಾ ಕೃತಿಗೆ ನೀಡುತ್ತಿರುವ ಮೊದಲ ಪ್ರಶಸ್ತಿಯಾಗಿದೆ.

‘ಪ್ರಶಸ್ತಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಕೃತಿಗಳನ್ನು ಆಹ್ವಾನಿಸ ಲಾಗಿತ್ತು. ಡಾ.ರಾಜೇಂದ್ರ ಚೆನ್ನಿ, ಪ್ರೊ.ಟಿ.ಪಿ.ಅಶೋಕ ಮತ್ತು ಪ್ರೊ. ರಾಘವೇಂದ್ರ ಪಾಟೀಲ ಅವರಿದ್ದ ಆಯ್ಕೆ ಸಮಿತಿ ಡಾ.ವಿಕ್ರಮ ವಿಸಾಜಿ ಅವರ ವಿಮರ್ಶಾ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಶ ಮಾಚಕನೂರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು