ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನೂ ತಿಳಿಯದೇ ಗೊಂದಲದಲ್ಲಿದ್ದೇವೆ: ಮೀಸಲಾತಿ ಬಗ್ಗೆ ಕೂಡಲಸಂಗಮ ಶ್ರೀ ಅಸಮಧಾನ

Last Updated 31 ಡಿಸೆಂಬರ್ 2022, 13:54 IST
ಅಕ್ಷರ ಗಾತ್ರ

ವಿಜಯಪುರ: ‘ಮೀಸಲಾತಿ ತುಪ್ಪವನ್ನು ಸರ್ಕಾರ ಮೂಗಿಗೆ ಸವರಿದ್ದರೇ ವಾಸನೆಯಾದರೂ ನೋಡಬಹುದಿತ್ತು. ಆದರೆ, ಸರ್ಕಾರ ತಲೆಗೆ ತುಪ್ಪ ಸುರಿದಿದೆ. ಹಾಗಾಗಿ ಏನೂ ತಿಳಿಯದೇ ಗೊಂದಲದಲಿದ್ದೇವೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮದಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಡಿ.29ಕ್ಕೆ ಮೀಸಲಾತಿ ನೀಡಿದೆ. ಎಲ್ಲ ಲಿಂಗಾಯತರನ್ನು 2ಡಿ ಗೆ ಸೇರಿಸಿರುವುದು ಬಹಳ ಸಂತೋಷ. ನಮ್ಮ ಹೋರಾಟದಿಂದ ಎಲ್ಲ ಲಿಂಗಾಯರಿಗೂ ಒಳ್ಳೆಯದಾಗಿದ್ದು, ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ. ನಿಜವಾದ ಹೋರಾಟ ಮಾಡಿದವರು ಪಂಚಮಸಾಲಿಗಳು. ಕಳದೆ 2 ವರ್ಷದಿಂದ ಮನೆ-ಮಠಗಳನ್ನು ಬಿಟ್ಟು ಹೋರಾಟ ಮಾಡಿದ್ದೇವೆ. ನಮ್ಮ ಪಾಲು ಎಷ್ಟು ಎಂದು ಸ್ಪಷ್ಟತೆ ಇಲ್ಲ. ನಾವು ದುಡಿದಿದ್ದಕ್ಕೆ ಸರ್ಕಾರ ಪ್ರತಿಫಲ ಕೊಡಲಿಲ್ಲ ಎಂದು ಹೇಳಿದರು.

ಬೆಳಗಾವಿಯಲ್ಲಿ ಎರಡು ದಿನಗಳಲ್ಲಿ ರಾಜ್ಯ ಮಟ್ಟದ ಪಂಚಮಸಾಲಿ ಕಾರ್ಯಕಾರಣಿ ಸಭೆಯನ್ನು ಕರೆಯುತ್ತೇವೆ. ಈ ಮೀಸಲಾತಿ ಸ್ವೀಕರಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಅಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT