ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಅತಿ ಹೆಚ್ಚು ಮಹಿಳಾ ಮತದಾರರು

ರಾಜ್ಯದಲ್ಲೇ ಉಡುಪಿ ಜಿಲ್ಲೆ ಮೊದಲ ಸ್ಥಾನ: ಕರಾವಳಿಯಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್
Last Updated 8 ಜನವರಿ 2023, 12:18 IST
ಅಕ್ಷರ ಗಾತ್ರ

ಉಡುಪಿ: 2023ರ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಯ ನಂತರ ಉಡುಪಿ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆ ಎನಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತ್ಯಂತ ಕಡಿಮೆ ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ.

ರಾಜ್ಯದಲ್ಲಿ ಈಚೆಗೆ ಮುಕ್ತಾಯಗೊಂಡ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ನಂತರ ರಾಜ್ಯದಲ್ಲಿ 5,05,48,553 ಮತದಾರರಿದ್ದು ಅವರಲ್ಲಿ 2,54,49,725 ಪುರುಷರು ಮತ್ತು 2,50,94,326 ಮಹಿಳಾ ಮತದಾರರು ಇದ್ದಾರೆ.

ರಾಜ್ಯದ ಒಟ್ಟಾರೆ ಮತದಾರರ ಅಂಕಿ ಅಂಶಗಳ ಪ್ರಕಾರ ಮಹಿಳೆಯರಿಗಿಂತ ಪುರುಷ ಮತದಾರರ ಸಂಖ್ಯೆ ಹೆಚ್ಚಾಗಿದೆ. ಆದರೆ, ಉಡುಪಿಯಲ್ಲಿ ಮಾತ್ರ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಾಗಿರುವುದು ವಿಶೇಷ.

ಉಡುಪಿ ಜಿಲ್ಲೆಯಲ್ಲಿರುವ 10,16,245 ಮತದಾರರಲ್ಲಿ 4,90,060 ಪುರುಷರು, 5,26,173 ಮಹಿಳಾ ಮತದಾರರು ಹಾಗೂ 12 ಲಿಂಗತ್ವ ಅಲ್ಪ ಸಂಖ್ಯಾತರು ಇದ್ದಾರೆ.

ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರನ್ನು ನೋಡುವುದಾದರೆ ಬೈಂದೂರಿನಲ್ಲಿ 2,29,550 ಮತದಾರರಿದ್ದು 1,12,126 ಪುರುಷರು, 1,17,421 ಮಹಿಳಾ ಮತದಾರರು, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 2,04,525 ಮತದಾರರ ಪೈಕಿ 98,224 ಪುರುಷರು, 1,06,298 ಮಹಿಳಾ ಮತದಾರರು ಇದ್ದಾರೆ.

ಉಡುಪಿಯ 2,11,631 ಮತದಾರರ ಪೈಕಿ 1,02,192 ಪುರುಷರು, 1,09,439 ಮಹಿಳಾ ಮತದಾರರು, ಕಾಪುವಿನ 1,84,088 ಮತದಾರರಲ್ಲಿ 88,114 ಪುರುಷರು ಮತ್ತು 95,968 ಮಹಿಳೆಯರು, ಕಾರ್ಕಳದ 1,86,451 ಮತದಾರರಲ್ಲಿ 89,404 ಪುರುಷರು, 97,047 ಮಹಿಳೆಯರು ಇದ್ದಾರೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿರುವುದು ವಿಶೇಷ.

ಜಿಲ್ಲೆಯಲ್ಲಿ ಈಚೆಗೆ ನಡೆದ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ 13,816 ಯುವ ಮತದಾರರು ನೊಂದಣಿಯಾಗಿದ್ದು ಇಲ್ಲೂ ಯುವತಿಯರ ನೋಂದಣಿ ಅಧಿಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT