ರಾಯಚೂರು: ‘ಬಸನಗೌಡ ಪಾಟೀಲ ಯತ್ನಾಳ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸರ್ಕಾರದ ವಿರುದ್ಧ ಹೀಗೆ ಮಾತನಾಡಲಿ.. ಮುಂದಿನ ದಿನಗಳಲ್ಲಿ ಏನೆಂಬುದು ಗೊತ್ತಾಗುತ್ತದೆ’ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರೇಕೆ ಹೀಗೆ ಮಾತನಾಡುತ್ತಾರೆ ಎಂದು ಗೊತ್ತಿಲ್ಲ. ಯಾವ ಶಾಸಕರಿಗೂ ಸರ್ಕಾರ ಬಗ್ಗೆ ಬೇಸರ ಆಗಿಲ್ಲ. ಒಂದು ವೇಳೆ ಬೇಸರ ಆಗಿದ್ದರೆ, ಶಾಸಕರೇ ಮಾತನಾಡುತ್ತಿದ್ದರು. ಯತ್ನಾಳ್ ಅವರಿಗೆ ಏನು ಬೇಸರ ಆಗಿದೆ ಅವರೇ ಹೇಳಬೇಕು’ ಎಂದು ತಿಳಿಸಿದರು.

ಇದನ್ನೂ ಓದಿ.. ಯಡಿಯೂರಪ್ಪ ಕುಟುಂಬದವರೇ ಹಾವು, ಚೇಳು: ಯತ್ನಾಳ

ಸಚಿವ ಉಮೇಶ ಕತ್ತಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ಮೊಬೈಲ್, ಟಿವಿ ಜೀವನ ಅಗತ್ಯ ವಸ್ತುಗಳಾಗಿದ್ದು, ಇವು ಜೀವನಮಟ್ಟ ಅಳೆಯಲು ಮಾನದಂಡಗಳಲ್ಲ. ಇವು ಐಷರಾಮಿ ಎಂದು ಹೇಳುವುದನ್ನು ನಾನು ವಿರೋಧಿಸುತ್ತೇನೆ. ಒಬ್ಬ ಕಾರ್ಮಿಕ ಕೆಲಸ ಮಾಡುವುದಕ್ಕೆ ಸಲಿಕೆ, ಗುದ್ದಲಿ ಹೇಗೆ ಅಗತ್ಯ ಇದೆಯೋ ಹಾಗೆಯೇ ಇಂದಿನ ದಿನಗಳಲ್ಲಿ ಮೊಬೈಲ್ ಟಿವಿಗಳು ಜೀವನದ ಭಾಗವಾಗಿ ಕೆಲಸ ಮಾಡುವುದಕ್ಕೆ ಅಗತ್ಯವಾಗಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.