ಮಲಮಗಳ ಹತ್ಯೆ: ಭಾರತ ಮೂಲದ ಮಹಿಳೆ ದೋಷಿ

ಭಾನುವಾರ, ಮೇ 26, 2019
25 °C
ಒಂಬತ್ತು ವರ್ಷದ ಮಲಮಗಳ ಹತ್ಯೆ

ಮಲಮಗಳ ಹತ್ಯೆ: ಭಾರತ ಮೂಲದ ಮಹಿಳೆ ದೋಷಿ

Published:
Updated:

ನ್ಯೂಯಾರ್ಕ್‌ (ಪಿಟಿಐ): ಒಂಬತ್ತು ವರ್ಷದ ಮಲಮಗಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತ ಮೂಲದ ಶ್ಯಾಮ್‌ದಾಯಿ ಅರ್ಜುನ್‌ ಎಂಬುವರನ್ನು ದೋಷಿ ಎಂದು ನ್ಯೂಯಾರ್ಕ್‌ನ ಕ್ವೀನ್ಸ್ ನ್ಯಾಯಾಲಯ ಘೋಷಿಸಿದೆ.

ಮಲಮಗಳು ಆಶಾದೀಪ್‌ ಕೌರ್‌ ಎಂಬುವವರನ್ನು 2016ರಲ್ಲಿ ಕೊಲೆ ಮಾಡಿರುವ ಆರೋಪ ಸಾಬೀತಾಗಿದ್ದು, ಜೂನ್‌3ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ. ಗರಿಷ್ಠ 25 ವರ್ಷಗಳವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

2016ರ ಆಗಸ್ಟ್‌ 19ರಂದು ನಡೆದ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಚಾರಣೆ ವೇಳೆ ಕೋರ್ಟ್‌ಗೆ ವಿವರಿಸಿದ್ದಾರೆ.

‘ಶ್ಯಾಮ್‌ದಾಯಿ, ಆಕೆಯ ಮಾಜಿ ಪತಿ ನಾರಾಯಣನ್‌ ಹಾಗೂ 3 ಮತ್ತು 5 ವರ್ಷದ ಮೊಮ್ಮಕ್ಕಳೊಂದಿಗೆ ಕ್ವೀನ್ಸ್‌ನ ಅಪಾರ್ಟ್‌ಮೆಂಟ್‌ನಿಂದ ಹೊರಹೋದರು. ಆದರೆ, ಬಾತ್‌ರೂಂನ ದೀಪ ತುಂಬಾ ಹೊತ್ತು ಉರಿಯುತ್ತಿರುವುದನ್ನು ಗಮನಿ
ಸಿದ ನಾನು ತಕ್ಷಣವೇ ಬಾಲಕಿ ತಂದೆ ಸುಖ್ವಿಂದರ್‌ ಸಿಂಗ್‌ಗೆ ಕರೆ ಮಾಡಿದೆ.

ಅವರು ಬಂದ ಕೂಡಲೇ ಇಬ್ಬರೂ ಹೋಗಿ ಬಾತ್‌ರೂಂ ಬಾಗಿಲು ಒಡೆದು ನೋಡಿದಾಗ ವಿವಸ್ತ್ರವಾಗಿದ್ದ ಆಶಾದೀಪ್‌ಕೌರ್‌ ದೇಹ ಟಬ್‌ನಲ್ಲಿ ಇತ್ತು. ದೇಹದ ತುಂಬಾ ಗಾಯಗಳಾಗಿದ್ದವು’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !