ವಿಜಯಪುರ: ಛೆಟ್ಟಿ ಅಮಾವಾಸ್ಯೆಗೆ ಎರಡು ದಿನವಷ್ಟೇ ಬಾಕಿಯಿದೆ. ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸುಕ್ಷೇತ್ರ ಗುಡ್ಡಾಪುರ, ದಾನಮ್ಮ ದೇವಿ ಜಾತ್ರೆಗೆ ಸಜ್ಜಾಗಿದೆ.

ಅನ್ನ ದಾಸೋಹ ಪೂಜಾ ಕಾರ್ಯಕ್ರಮದೊಂದಿಗೆ ಬುಧವಾರ, ಜಾತ್ರಾ ಮಹೋತ್ಸವ ವಿಧ್ಯುಕ್ತವಾಗಿ ಚಾಲನೆ ಪಡೆದುಕೊಳ್ಳಲಿದ್ದು, ಕ್ಷಣಗಣನೆ ಆರಂಭವಾಗಿದೆ.

ಗುರುವಾರ ದಾನಮ್ಮ ದೇವಿ ಸನ್ನಿಧಿಯಲ್ಲಿ ಅಮಾವಾಸ್ಯೆಯ ಮುನ್ನಾ ದಿನದ ರಾತ್ರಿ ದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದೇ ಸಂದರ್ಭ ಲಕ್ಷ ದೀಪೋತ್ಸವ ಧಾರ್ಮಿಕ ಸಮಾರಂಭ ನಡೆಯಲಿದ್ದು, ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದೇವಿ ಭಕ್ತರು ಪಾದಯಾತ್ರೆ ಮೂಲಕ ಗುಡ್ಡಾಪುರಕ್ಕೆ ತೆರಳಲು ಈಗಾಗಲೇ ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ.

ದೇವಿ ಸನ್ನಿಧಿಯಲ್ಲಿನ ಕಾರ್ತಿಕ ದೀಪೋತ್ಸವದ ಬಳಿಕ, ಛೆಟ್ಟಿ ಅಮಾವಾಸ್ಯೆಯಂದು (ಶುಕ್ರವಾರ) ದಾನಮ್ಮಳ ದರ್ಶನ ಪಡೆದು, ಧನ್ಯತಾಭಾವ ಹೊಂದಲು ಭಕ್ತ ಸಮೂಹ ಕಾತರದಿಂದ ಕಾದಿದೆ.

ಧ್ಯಾನದ ಅನುರಣನ

ಇದೀಗ ಎಲ್ಲರ ಚಿತ್ತವೂ ಗುಡ್ಡಾಪುರದತ್ತ ನೆಟ್ಟಿದೆ. ಬುಧವಾರ ಮುಸ್ಸಂಜೆಯ ವೇಳೆಯಿಂದ ವಿಜಯಪುರದ ಹೊರ ವಲಯದಲ್ಲಿನ ರಸ್ತೆಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರ ಜನ ಪ್ರವಾಹ ಗೋಚರಿಸಲಿದೆ. ಗುರುವಾರ ಮುಸ್ಸಂಜೆಯೊಳಗೆ ತಾಯಿ ಸನ್ನಿಧಿ ತಲುಪಬೇಕು ಎಂಬ ತವಕ ಇವರಲ್ಲಿರುತ್ತದೆ.

ಬುಧವಾರ ಮುಸ್ಸಂಜೆ ವಿಜಯಪುರ ನಗರದ ಸುತ್ತಮುತ್ತ, ಪ್ರಮುಖ ರಸ್ತೆಗಳಲ್ಲಿ ಕೇಳಿ ಬರುವುದು ಒಂದೇ ಧ್ವನಿ. ಅದು ದಾನಮ್ಮ ದೇವಿಯ ಭಕ್ತರ ಪ್ರಾರ್ಥನೆ. ‘ದಾನಮ್ಮ ದೇವಿಗೆ ಜೈ ಜೈ... ತಾಯಿ ತಾಯಿ ದಾನಮ್ಮ ತಾಯಿ... ತಂದೆ ತಂದೆ ಸೋಮನಾಥ ತಂದೆ... ಯಾತ್ರೆ ಯಾತ್ರೆ ಪಾದಯಾತ್ರೆ...’ ಎಂಬ ಘೋಷಣೆ ಮೊಳಗಲಿವೆ.

ಆಬಾಲ ವೃದ್ಧರಾದಿಯಾಗಿ ಪುರುಷ–ಮಹಿಳೆ ಎನ್ನದೇ ಅಪಾರ ಸಂಖ್ಯೆಯ ಭಕ್ತರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಪಾದಯಾತ್ರೆ ಆರಂಭಗೊಂಡ ಬೆನ್ನಿಗೆ, ಹಾದಿಯುದ್ದಕ್ಕೂ ಭಕ್ತರ ಸೇವಾ ಕೇಂದ್ರಗಳು ಕಾರ್ಯಾಚರಿಸಲು ಶುರುವಾಗುತ್ತವೆ. ಸತತ ಮೂರು ದಿನ ಇಲ್ಲಿ ಸೇವೆ ಸಿಗಲಿದೆ.

ಬೇಡುವ ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ತಾಯಿ, ತ್ರಿಕಾಲ ವಿಭಿನ್ನ ಅಲಂಕಾರ ಪೂಜಿತೆ, ವರದಾನೇಶ್ವರಿ ಎಂದೇ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಮನೆ ಮಾತಾಗಿರುವ ದಾನಮ್ಮ ದೇವಿಯ ದರ್ಶನಕ್ಕಾಗಿ ಭಕ್ತರು ತಂಡೋಪ ತಂಡವಾಗಿ ರಸ್ತೆ ಮೂಲಕ ಗುಡ್ಡಾಪುರದತ್ತ ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕುವುದು ವಿಶೇಷ.

ಭಕ್ತರಿಗೆ ಅದ್ದೂರಿ ಆದರಾತಿಥ್ಯ

ಪಾದಯಾತ್ರಿಗಳು ಗುಡ್ಡಾಪುರದತ್ತ ಸಾಗುವ ಹಾದಿಯುದ್ದಕ್ಕೂ ಅದ್ಧೂರಿ ಆದರಾತಿಥ್ಯ ನೀಡಲು, ದಾನಮ್ಮ ದೇವಿ ಭಕ್ತರು ಸಹ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದ್ದಾರೆ. ಬುಧವಾರದ ಮುಸ್ಸಂಜೆಯಿಂದ ಶುಕ್ರವಾರದವರೆಗೆ ನಿರಂತರ ಸೇವೆ ರಸ್ತೆಗಳ ಬದಿ ಸಿಗಲಿದೆ.

ಚಹಾ, ಗರಂ ಗರಂ ಮಿರ್ಚಿ ಭಜ್ಜಿ, ಅವಲಕ್ಕಿ ಸೂಸಲಾ, ಶಿರಾ–-ಉಪ್ಟಿಟ್ಟು, ಅವಲಕ್ಕಿ ಚೂಡಾ, ಪೇಡೆ... ವಿವಿಧ ಹಣ್ಣುಗಳು ಸೇರಿದಂತೆ ನಾನಾ ಆಹಾರ ಪದಾರ್ಥಗಳು ಈ ಸೇವಾ ದಾಸೋಹ ಕೇಂದ್ರಗಳಲ್ಲಿ ಸಿಗಲಿವೆ. ಹಾದಿಯುದ್ದಕ್ಕೂ ಪಾದಯಾತ್ರೆ ನಡೆಸಲಿರುವ ಭಕ್ತರನ್ನು ಸ್ವಯಂ ಸೇವಕರು ಗೌರವ ಪೂರ್ವಕವಾಗಿ ತಮ್ಮ ಸೇವಾ ಕೇಂದ್ರಗಳಿಗೆ ಆಹ್ವಾನಿಸಿ, ಆದಾರಾತಿಥ್ಯ ನೀಡಲಿದ್ದಾರೆ.

ದಾರಿಯಲ್ಲಿ ಭಕ್ತರಿಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡರೆ ಚಿಕಿತ್ಸೆ ನೀಡಲು ‘ವೈದ್ಯರ ತಂಡ’ವೂ ಸಜ್ಜಾಗಿದೆ. ವಿಜಯಪುರದ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆಗಳ ವೈದ್ಯರು ಸೇವಾ ಮನೋಭಾವನೆಯಿಂದ ಭಕ್ತರಿಗೆ ಪ್ರತಿ ವರ್ಷವೂ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಮಾತ್ರೆಗಳನ್ನು ವಿತರಿಸುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.