ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದ ಫ್ಲಾರೆನ್ಸ್‌ ಜಲಪಾತ

Last Updated 25 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಫ್ಲಾರೆನ್ಸ್‌ ಜಲಪಾತವು ಆಸ್ಟ್ರೇಲಿಯಾದ ಉತ್ತರ ಭೂಭಾಗದ ಲಿಚ್‌ಫೀಲ್ಡ್‌ ರಾಷ್ಟ್ರೀಯ ಉದ್ಯಾನದಲ್ಲಿದೆ. ಇದು 30ರಿಂದ 40 ಮೀಟರ್‌ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ.

* ಈ ಜಲಪಾತದ ಕೆಳಗೆ ಈಜಲು ದೊಡ್ಡ ಹೊಂಡವಿದ್ದು, ಇದು ಮೊಸಳೆಮುಕ್ತವಾಗಿರುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉಪ್ಪು ಮತ್ತು ಸಿಹಿನೀರಿನ ಮೊಸಳೆಗಳು ಈ ಜಲಪಾತದಿಂದ ದೂರ ಉಳಿದಿವೆ. ಹಾಗಾಗಿ ಈ ಜಲಪಾತವೂ ಈಜುವುದಕ್ಕೆ ಬಹಳ ಪ್ರಸಿದ್ಧಿಯಾಗಿದೆ.

*ಈ ಜಲಪಾತದ ಸುತ್ತ ದಟ್ಟ ಹಸಿರಿದ್ದು, ಅಪಾರ ಸಸ್ಯಸಂಪತ್ತನ್ನು ಹೊಂದಿದೆ.‌ ಎಲ್ಲ ಸಮಯದಲ್ಲಿಯೂ ಅರಳಿ ನಿಂತಿರುವ ಕಾಡು ಹೂಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

*ಇದನ್ನು ಗೆದ್ದಲು ದಿಬ್ಬಗಳ ತಾಣವೆಂದೂ ಕರೆಯಲಾಗುತ್ತದೆ. ಜಲಪಾತದ ಆಸುಪಾಸು ಹಲವಾರು ಗೆದ್ದಲು ದಿಬ್ಬಗಳನ್ನು ನೋಡಬಹುದು. ಕೆಲವೊಂದು ದಿಬ್ಬಗಳು ಮನುಷ್ಯರಿಗಿಂತಲೂ ಮೂರು ಪಟ್ಟು ದೊಡ್ಡದಾಗಿರುತ್ತದೆ. ಆಸ್ಟ್ರೇಲಿಯಾದ ಹಲವೆಡೆ ಗೆದ್ದಲು ದಿಬ್ಬಗಳಿವೆ. ಆದರೆ, ಈ ಪ್ರದೇಶದಲ್ಲಿರುವ ದಿಬ್ಬಗಳು ತುಸು ಎತ್ತರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT