ಬೇಸಿಗೆ ರಜೆ ಬರುತ್ತಿದ್ದು, ಕೇರಳಕ್ಕೆ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ದೇವರನಾಡು ಸಜ್ಜಿತಗೊಂಡಿದೆ. ಇದಕ್ಕಾಗಿ ಅಖಿಲ ಭಾರತ ಅಭಿಯಾನವನ್ನು ಆಯೋಜಿಸಿದೆ.

ಉತ್ತರ ಕೇರಳದ ಪ್ರದೇಶಗಳಾದ ಬೇಕಲ್, ವಯನಾಡ್, ಕೋಝಿಕ್ಕೋಡ್ಗಳಿಗೆ ಆದ್ಯತೆ ನೀಡಿದ್ದು, ಹೆಚ್ಚುವರಿ ಮೂಲಸೌಕರ್ಯಗಳನ್ನು ನೀಡಲಾಗಿದೆ. ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಹೆಲಿ ಟೂರಿಸಂ ಮತ್ತು ಸಮುದ್ರ ತೀರಗಳಲ್ಲಿ ವಿಶಿಷ್ಟ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಜತೆಗೆ ಕಡಲತೀರಗಳು, ಗಿರಿಧಾಮಗಳು, ದೋಣಿಮನೆಗಳು, ಹಿನ್ನೀರಿನ ಪ್ರದೇಶವು ಪ್ರವಾಸೋದ್ಯಮದ ಅನುಭವವನ್ನು ನೀಡಲು, ಪ್ರವಾಸಿಗರಲ್ಲಿ ಹೊಸ ಚೈತನ್ಯ ತುಂಬಲು ಕಾದು ನಿಂತಿವೆ.

ಇದರ ಜತೆಗೆ ಪ್ರವಾಸಿಗರಿಗೆ ಕೇರಳದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಿಚಯವನ್ನು ನೀಡಲು ಫೆಬ್ರುವರಿ 15ರಿಂದ 21ರವರೆಗೆ ಕನಕಕ್ಕುನ್ನು ಪ್ಯಾಲೇಸ್ನಲ್ಲಿ ನಿಶಾಗಂಧಿ ನೃತ್ಯೋತ್ಸವ ಆಯೋಜಿಸಲಾಗಿದೆ. ಮೋಹಿನಿಯಾಟ್ಟಂ, ಕಥಕ್, ಕೂಚಿಪುಡಿ, ಭರತನಾಟ್ಯ ಮತ್ತು ಮಣಿಪುರಿ ನೃತ್ಯಗಳನ್ನು ನೃತ್ಯಪಟುಗಳು ಪ್ರದರ್ಶಿಸಲಿದ್ದಾರೆ.

ಕೇರಳ ಸಾಹಿತ್ಯ ಉತ್ಸವವು ಜ 26ರವರೆಗೆ ಕೋಝಿಕ್ಕೋಡ್ನ ಸಮುದ್ರತೀರದಲ್ಲಿ ನಡೆಯಲಿದೆ. 12ಕ್ಕೂ ಹೆಚ್ಚು ದೇಶಗಳ 400ಕ್ಕೂ ಹೆಚ್ಚು ಸಾಹಿತಿಗಳು, ಭಾಷಣಕಾರರು ಭಾಗವಹಿಸಲಿದ್ದಾರೆ. ವಿವಿಧ ವೇದಿಕೆಗಳಲ್ಲಿ ಸುಮಾರು 200 ಸಂಕಿರಣ ನಡೆಯಲಿದೆ.

ಕೇರಳ ಡೆಸ್ಟಿನೇಷನ್ ವೆಡ್ಡಿಂಗ್ ಮತ್ತು ಎಂಇಸಿಇಗೆ ಆದ್ಯತೆ ನೀಡುತ್ತಿದ್ದು, ಈವೆಂಟ್ ಪ್ಲಾನರ್ಗಳ ಕಾರ್ಪೋರೇಟ್ ಗ್ರಾಹಕರ ಮೆಚ್ಚಿನ ತಾಣವಾಗಿದೆ. ದೋಣಿಮನೆ, ಕಾರಾವಾನ್ ವಸತಿ, ಪ್ಲಾಂಟೇಷನ್ ಹಾಗೂ ಜಂಗಲ್ ರೆಸಾರ್ಟ್ಗಳು, ಹೋಮ್ಸ್ಟೇಗಳು, ಆಯುರ್ವೇದ ಆಧರಿತ ವೆಲ್ನೆಸ್ ಪರಿಹಾರಗಳು, ಸಾಹಸ ಚಟುವಟಿಕೆಗಳು, ಚಾರಣಕ್ಕೆ ಪ್ರಸಿದ್ಧಿ ಪಡೆಯುತ್ತಿದೆ.

ಕೋವಿಡ್ಗಿಂತಲೂ ಮೊದಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. 2024ರಲ್ಲಿ ಯಥಾ ಪ್ರಕಾರ ಜನವರಿಯಿಂದ ಜೂನ್ವರೆಗೆ 1 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದು ಈಗಾಗಲೇ ಬುಕ್ಕಿಂಗ್ನಿಂದ ದೃಢವಾಗಿದೆ.

ಬಿ2ಬಿ ಟ್ರಾವೆಲ್ ಮೀಟ್ ಅಭಿಯಾನವು ಜನವರಿ- ಮಾರ್ಚ್ ಅವಧಿಯಲ್ಲಿ ಅಹಮದಾಬಾದ್, ಚಂಡೀಗಢ, ದೆಹಲಿ, ಜೈಪುರ, ಚೆನ್ನೈ ಮತ್ತು ಕೋಲ್ಕತ್ತಗಳಲ್ಲಿ ಬಿ2ಬಿ ಸಭೆಗಳ ಸರಣಿ ನಡೆಯಲಿದೆ ಎಂದು ಕೇರಳ ಸರ್ಕಾರದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.