ಒಬ್ಬ ವ್ಯಕ್ತಿ ತನ್ನ ಜೀವಿತಕಾಲದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಪುಸ್ತಕಗಳನ್ನು ಬರೆಯಲು ಸಾಧ್ಯವೇ ಎಂಬ ಅಚ್ಚರಿ ಮೂಡಿದರೂ,ಇದು ಸಾಧ್ಯ ಎಂದು ಪ್ರಮಾಣಿಸಿ ತೋರಿಸಿದವರು 735 ಪುಸ್ತಕಗಳ ಸರದಾರ ಬೆ.ಗೋ. ರಮೇಶ್.

ಈ ವಿಶಿಷ್ಟ ಲೇಖಕರ ಎಲ್ಲ ಪುಸ್ತಕಗಳ ಪ್ರದರ್ಶನ, ಸಾಕ್ಷ್ಯ ಚಿತ್ರ ಮತ್ತು ಅವರ ಕೃತಿಗಳ ಬಗ್ಗೆ ಹಿರಿಯ ಲೇಖಕರಿಂದ ವಿಚಾರಸಂಕಿರಣವನ್ನು ಇದೇ ಆಗಸ್ಟ್ 18ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಗಾದೆಗೆ ಅನ್ವರ್ಥಕರಾದ ಇವರು ಅಹರ್ನಿಶಿ ಲೇಖನಿ ಹಿಡಿದು ಕೃಷಿ ಮಾಡುವ ಲೇಖಕ ರಮೇಶರ ವಿಫುಲವಾದ ವಿಷಯ ವೈವಿಧ್ಯ, ವ್ಯಾಪಕ ಅಧ್ಯಯನ ಮತ್ತು ವಿಷಯ ಸಂಗ್ರಹ ಕಂಡವರಿಗೆ ಇವರ ಬರವಣಿಗೆಯ ಆಸಕ್ತಿ ಮತ್ತು ವಿವಿಧ ಕ್ಷೇತ್ರಗಳ ಕುತೂಹಲದ ವ್ಯಾಪ್ತಿ ಬೆರಗು ಮೂಡಿಸುತ್ತದೆ.

ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾದ ರಮೇಶ್ ಬೆಟ್ಟದಪುರದವರು. ಅವರಿಗೆ ಈಗ 71ರ ಹರೆಯ. ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧೀಕ್ಷಕ ಎಂಜಿನಿಯರಾಗಿ ಸೇವೆ ಸಲ್ಲಿಸಿರುವ ಜೊತೆಯಲ್ಲಿ ಬರವಣಿಗೆಯ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ-ತತ್ವಜ್ಞಾನ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ, ಕ್ರೀಡೆ ಮುಂತಾದ ಹತ್ತು ಹಲವು ವಿಷಯಗಳು ಇವರ ಪುಸ್ತಕಗಳ ಹರವು-ಹೂರಣ. ಕನ್ನಡ, ಇಂಗ್ಲಿಷ್, ತಮಿಳು,ಮಲೆಯಾಳಂ ಮತ್ತು ಹಿಂದಿ ಭಾಷೆಗಳನ್ನು ಚೆನ್ನಾಗಿ ಬಲ್ಲ, ತಲಸ್ಪರ್ಶಿ ಅಧ್ಯಯನ ಸಾಮರ್ಥ್ಯವುಳ್ಳ ಇವರು ಇತರ ಭಾಷೆಗಳಿಂದ ಅನುವಾದ ಮಾಡಿರುವ ಪುಸ್ತಕಗಳ ಸಂಖ್ಯೆಯೂ ಅಪಾರ.

ಪ್ರಮುಖ ಪ್ರಕಟಣೆಗಳು
ಕನ್ನಡದಲ್ಲಿ- ಜೀವನಚರಿತ್ರೆಗಳು-238, ಕ್ವಿಜ್ ಪುಸ್ತಕಗಳು-22, ಮಕ್ಕಳ ಸಾಹಿತ್ಯ-ಕಥೆಗಳು-31, ಹಾಸ್ಯಸಾಹಿತ್ಯ-10, ಕವನ-ವಚನ ಸಂಕಲನಗಳು 7, ನಾಟಕಗಳು-5, ನಿಘಂಟುಗಳು 4, ಸ್ಥಳ ಪರಿಚಯ, ಪ್ರವಾಸ ಕತೆಗಳು 50, ಆರೋಗ್ಯ-ವೈದ್ಯಕೀಯ-27, ಕೃಷಿ ವಿಜ್ಞಾನ-10, ವಿಜ್ಞಾನ-ತಂತ್ರಜ್ಞಾನ-61, ಜಾನಪದ-13, ವ್ಯಕ್ತಿತ್ವ ವಿಕಸನ 24, ಸಾಮಾನ್ಯ ಜ್ಞಾನ-16, ಶಿಕ್ಷನಿಕ-21, ಸಂಗ್ರಹಗಳು-10, ಅನುವಾದಗಳು–42, ವಿಮರ್ಶೆ-2 ಮತ್ತು ಸಂಪಾದಿತ-13 ಹೀಗೆ ಒಟ್ಟು 606 ಕೃತಿಗಳು. ಇನ್ನೂ ಇಂಗ್ಲಿಷಿನಲ್ಲಿ ಪ್ರಕಟವಾದ ಪುಸ್ತಕಗಳ ಸಂಖ್ಯೆ 126 .

ಈ ಬಗೆಯಲ್ಲಿ ಇವರ ಲೇಖನಿಯಿಂದ ಹೊರಮೂಡಿದ ಒಟ್ಟುಕೃತಿಗಳು 737 ಪುಸ್ತಕಗಳು. ಪ್ರಕಟಣೆಗೆ ಸಿದ್ಧವಾಗಿರುವ ಪುಸ್ತಕಗಳು 30ಕ್ಕೂ ಹೆಚ್ಚು. ಬರೀ ಇಷ್ಟೇ ಅಲ್ಲ ಇವರ ವ್ಯಕ್ತಿತ್ವದ ವೈಶಿಷ್ಟ್ಯ. ಬಹುಮುಖ ಪ್ರತಿಭೆಯುಳ್ಳ ರಮೇಶ್ ಒಳ್ಳೆಯ ಗಾಯಕರು, ಗಮಕಿಗಳು ಕೂಡ. ವಾಚನ-ವ್ಯಾಖ್ಯಾನ ಎರಡನ್ನೂ ಏಕಕಾಲಕ್ಕೆ ನಿಭಾಯಿಸುವ ಛಾತಿಯುಳ್ಳವರು.

ಪ್ರತಿದಿನ ಸುಮಾರು 50 ರಿಂದ 60 ಪುಟಗಳಷ್ಟು ಬರವಣಿಗೆಯನ್ನು ಸುಲಲಿತವಾಗಿ ಬರೆಯುವ ಅಭ್ಯಾಸವಿರುವ ರಮೇಶ್, ವಯಸು 70 ದಾಟಿದ್ದರೂ ಇನ್ನೂ ಕನ್ನಡಕ ಹಾಕದೆ, ಉತ್ತಮ ಆರೋಗ್ಯ ಕಾಯ್ದುಕೊಂಡು, ಬಂದಿದ್ದು, ಮುಂದಿನ ಪೀಳಿಗೆಯ ಲೇಖಕರಿಗೆ ಮಾರ್ಗದರ್ಶಿಯಾಗಿ, ಕ್ರಿಯಾಶೀಲ ಬದುಕಿಗೆ ಮಾದರಿಯಾಗಿದ್ದಾರೆ.

ಅಖಂಡ ಕರ್ನಾಟಕ ಚುಟುಕು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಥಮ ಸಮ್ಮೆಳನ: ಅಧ್ಯಕ್ಷತೆ– ಎಂ.ಜಿ.ಆರ್. ಅರಸ್. ಬೆ.ಗೋ. ರಮೇಶ ರಚನೆಯ 750 ಕೃತಿಗಳ ಪ್ರದರ್ಶನ. ಪುಂಡಲೀಕ ಕಲ್ಲಿಗನೂರ ಇವರಿಂದ ವಚನ ಚಿತ್ರ ಸಂಪುಟ ಪ್ರದರ್ಶನ. ಬದರಿ ನಾರಾಯಣ ಪುರೋಹಿತ್ ಅವರಿಂದ 500 ವ್ಯಂಗ್ಯಚಿತ್ರಗಳ ಪ್ರದರ್ಶನ. ಜಿ.ಬಿ. ಹಾವಣಗಿ ಅವರಿಂದ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಚಿತ್ರ ಪ್ರದರ್ಶನ. ರಾಜಕುಮಾರ್ ಗೀತೋತ್ಸವ. ಗಾಯಕರು– ಬಿ. ಆರ್. ದೀಪಿಕಾ ಮತ್ತು ಬಿ. ಆರ್. ಸುಹಾಸ. ಬೆ.ಗೋ. ರಮೇಶ ಅವರ ಬದುಕು ಬರಹ, ಸಾಧನೆಯ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಅವರ ಬದುಕು ಮತ್ತು ಬರಹದ ಕುರಿತು ವಿಚಾರ ಸಂಕಿರಣ. ಭರತನಾಟ್ಯ ಕಾರ್ಯಕ್ರಮ– ಸ್ಫೂರ್ತಿ ಎಸ್.ಬಿ. ಏಕಪಾತ್ರಾಭಿನಯ– ರಾಟಿ ಬಣಕಾರ ನಿಂಗಪ್ಪ. ವಿವಿಧ ಜಿಲ್ಲೆಯ ಕವಿಗಳಿಂದ ಚುಟುಕು ಕವಿಗೋಷ್ಠಿ. ಸಾನ್ನಿಧ್ಯ– ಕಲ್ಮೇಶ್ವರ ಸ್ವಾಮಿ. ಉದ್ಘಾಟನೆ– ಶಿವರಾಜ ತಂಗಡಗಿ. ಅತಿಥಿ– ಎಂ.ವಿ. ರಾಜಶೇಖರನ್. ಆಯೋಜನೆ– ಸುರ್ವೆ ಕಲ್ಚರಲ್ ಅಕಾಡೆಮಿ. ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ. ಬೆಳಿಗ್ಗೆ 9.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.