ಪ್ಯಾರಿಸ್: ಭಾರತದ ಲಕ್ಷ್ಯ ಸೇನ್ ಅವರು ಇದೇ 25ರಿಂದ ಆರಂಭವಾಗಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕಣಕ್ಕಿಳಿಯಲಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲಿ ಅವರು ವಿಶ್ವದ ಅಗ್ರಶ್ರೇಯಾಂಕದ ಆಟಗಾರ, ಚೀನಾದ ಶಿ ಯು ಕೀ ಅವರ ಸವಾಲು ಎದುರಿಸುವರು.

ಉಭಯ ಆಟಗಾರರು ಒಟ್ಟಾರೆ ಐದನೇ ಬಾರಿ ಮುಖಾಮುಖಿಯಾಗಲಿದ್ದಾರೆ. ಅದರಲ್ಲಿ ಶೀ ಅವರು 3–1ರ ಗೆಲುವಿನ ಫಲಿತಾಂಶ ಸಾಧಿಸಿದ್ಧಾರೆ.

ಲಕ್ಷ್ಯ ಅವರು 2021ರ ಟೂರ್ನಿಯಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಕೂಡ ಗೆದ್ದಿದ್ದರು. ಹೋದ ವರ್ಷ ಪ್ಯಾರಿಸ್ ಒಲಿಂಪಿಕ್ ಕೂಟದ ಪುರುಷರ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಕೂಡ ಜಯಿಸಿದ್ದರು. ಉತ್ತರಾಖಂಡದ ಅಲ್ಮೋಡಾ ಮೂಲದ ಲಕ್ಷ್ಯ ಅವರು ಸದ್ಯ 21ನೇ ರ್ಯಾಂಕ್ ಪಡೆದಿದ್ದಾರೆ.

23 ವರ್ಷದ ಲಕ್ಷ್ಯ ಅವರು ಪ್ರಸಕ್ತ ಋತುವಿನಲ್ಲಿ ಉತ್ತಮ ಲಯದಲ್ಲಿ ಇಲ್ಲ. ಆಲ್ ಇಂಗ್ಲೆಂಡ್ ಓಪನ್ನಲ್ಲಿ ಅವರು ಕ್ವಾರ್ಟರ್ಫೈನಲ್ ತಲುಪಿದ್ದು, ಈ ಋತುವಿನಲ್ಲಿ ಮಾಡಿದ ಉತ್ತಮ ಸಾಧನೆಯಾಗಿದೆ.

ಪುರುಷರ ಸಿಂಗಲ್ಸ್ನಲ್ಲಿ ವಿಶ್ವ ಪದಕ ವಿಜೇತ ಆಟಗಾರ ಎಚ್.ಎಸ್. ಪ್ರಣಯ್ ಅವರು ಈ ಟೂರ್ನಿಯಲ್ಲಿ ಫಿನ್ಲೆಂಡ್ನ ಜೋಕಿಮ್ ಓಲ್ಡಾರ್ಫ್ ವಿರುದ್ಧ ಆಡುವುದರೊಂದಿಗೆ ಅಭಿಯಾನ ಆರಂಭಿಸುವರು. ಅವರು ಎರಡನೇ ಸುತ್ತು ಪ್ರವೇಶಿಸಿದರೆ ಡೆನ್ಮಾರ್ಕಿನ ಎರಡನೇ ಶ್ರೇಯಾಂಕದ ಆ್ಯಂಡರ್ಸ್ ಅಂಟೊನ್ಸೆನ್ ವಿರುದ್ಧ ಆಡುವ ಸಾಧ್ಯತೆ ಇದೆ.

ವಿಶ್ವ ಚಾಂಪಿಯನ್ಷಿಪ್ನ ಮಹಿಳೆಯರ ಸಿಂಗಲ್ಸ್ನಲ್ಲಿ ಈ ಹಿಂದೆ ಐದು ಪದಕಗಳನ್ನು ಗೆದ್ದಿರುವ ಪಿ.ವಿ. ಸಿಂಧು ಅವರಿಗೆ ಮೊದಲ ಸುತ್ತಿನಲ್ಲಿ ಸುಲಭದ ಸವಾಲು ಇದೆ. ಹೈದರಾಬಾದಿನ ಸಿಂಧು ಅವರು 66ನೇ ಶ್ರೇಯಾಂಕದ ಬಲ್ಗೇರಿಯಾ ದೇಶದ ಕಲೊಯಾನಾ ನಾಲಬಂಟೊವಾ ವಿರುದ್ಧ ಮೊದಲ ಪಂದ್ಯದಲ್ಲಿ ಆಡುವರು.

ಎರಡು ಬಾರಿ ಒಲಿಂಪಿಕ್ಸ್ ಪದಕವಿಜೇತ ಆಟಗಾರ್ತಿಯಾಗಿರುವ ಸಿಂಧು ಅವರು ಇತ್ತೀಚಿನ ಟೂರ್ನಿಗಳಲ್ಲಿ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. 15ನೇ ಶ್ರೇಯಾಂಕದ ಸಿಂಧು ಅವರು ಇಂಡಿಯಾ ಓಪನ್ ಟೂರ್ನಿಯ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದು ಈ ಸಲದ ಉತ್ತಮ ಸಾಧನೆಯಾಗಿದೆ.

ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ ಮೊದಲ ಸುತ್ತಿನ ಬೈ ಸಿಕ್ಕಿದೆ. ಎರಡನೇ ಸುತ್ತಿನಲ್ಲಿ ಅವರು ಭಾರತದ ಹರಿಹರನ್ ಅಂಶಕರುಣನ್ – ರುಬೇನ್ ಕುಮಾರ್ ಅಥವಾ ಚೈನಿಸ್ ತೈಪೆಯ ಲಿಯು ಕುವಾಂಗ್ ಹೆಂಗ್ ಮತ್ತು ಯಾಂಗ್ ಪೊ ಹಾನ್ ಅವರಲ್ಲಿ ಒಂದು ಜೋಡಿಯನ್ನು ಎದುರಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.