ಜಾಗತಿಕ ತಾಪಮಾನದಿಂದ ತನ್ನ ಒಡಲನ್ನು ಸುಡುತ್ತಿರುವ ಇಳೆಯಿಂದ ವಾತಾವರಣದಲ್ಲಾಗುವ ಬದಲಾವಣೆಗಳು, ಬಿಸಿಯೇರುವಿಕೆಯಿಂದ ತನ್ನ ಕಣ್ಣೀರಿನಿಂದ ಜಲಾವೃತಗೊಳಿಸುತ್ತಿರುವ ಭೂಮಿ, ನೀರಿನ ಮಹತ್ವವನ್ನು ಸಾರುವ ಚಿತ್ರಗಳು, ಮಾಲಿನ್ಯದಿಂದ ಐಸ್ಕ್ರೀಮ್ನಂತೆ ಕರಗುತ್ತಿರುವ ಭೂಮಿ, ತಾಯಿಯ ಭ್ರೂಣದಿಂದಲೇ ಜೀವ ವೈವಿಧ್ಯವನ್ನು ಕಲ್ಪಿಸಿಕೊಳ್ಳುವ ಮಗು....

ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಕಲೆ ಮತ್ತು ಸಂಸ್ಕೃತಿ ಹೆರಿಟೇಜ್ ಫೌಂಡೇಷನ್ ವತಿಯಿಂದ ಇತ್ತೀಚೆಗೆ ‘ವಿಶ್ವ ಪರಿಸರ ದಿನ’ದ ಪ್ರಯುಕ್ತ ನಡೆದ ನಜಾರಿಯಾ 6ನೇ ಆವೃತ್ತಿಯ ಚಿತ್ರಕಲಾ ಪ್ರದರ್ಶನದಲ್ಲಿ ಕಂಡ ಈ ಕಲಾಕೃತಿಗಳು ನೋಡುಗರಲ್ಲಿ ಜಾಗೃತಿ ಮೂಡಿಸಿದವು.

ಮಾಲಿನ್ಯದ ಸರಪಳಿಗಳಲ್ಲಿ ಬಂಧಿಯಾಗಿರುವ ಪರಿಸರ, ಮಾನವನ ಸ್ವಾರ್ಥಕ್ಕೆ ಬಲಿಯಾಗಿ ಅವನ ಬಾಹುಗಳ ಹಿಡಿತದಲ್ಲಿ ಸಿಲುಕಿರುವ ಇಳೆ, ವಾತಾವರಣ ಬದಲಾವಣೆಯಿಂದ ಕರಗುತ್ತಿರುವ ಹಿಮ ಪ್ರದೇಶ, ಮಳೆ ನೀರನ್ನು ಸಂಗ್ರಹಿಸುತ್ತಿರುವ ಚಿಣ್ಣರು ಹೀಗೆ ಪರಿಸರದ ಮೇಲಿನ ಕಲ್ಪನೆಗಳು ವಿವಿಧ ಆಯಾಮಗಳನ್ನು ತಮ್ಮ ಕಲಾಕುಂಚದಲ್ಲಿ ಸೆರೆಹಿಡಿದು ಅವುಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ಕಲಾವಿದರು ಮಾಡಿದ್ದಾರೆ.

ದೇಶದಾದ್ಯಂತ ಸುಮಾರು 6,500 ವಿದ್ಯಾರ್ಥಿಗಳನ್ನೊಳಗೊಂಡ ರಾಷ್ಟೀಯ ಮಟ್ಟದಲ್ಲಿ ನಡೆಯುವ ಚಿತ್ರಕಲಾ ಪ್ರದರ್ಶನದಲ್ಲಿ ಆಯ್ಕೆಯಾದ ಅತ್ಯುತ್ತಮ ಚಿತ್ರಕಲೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್, ಆಗ್ರಾ, ಗುವಾಹಟಿ, ಕೋಲ್ಕತ್ತ ಸೇರಿದಂತೆ ವಿವಿಧ ಭಾಗಗಳಿಂದ ಭಾಗವಹಿಸಿದ್ದ ಚಿಣ್ಣರ ಕೈಚಳಕದಿಂದ ಅನಾವರಣಗೊಂಡ ಸುಮಾರು 100 ಚಿತ್ರಗಳು ನೋಡುಗರ ಮನಮುಟ್ಟುವಂತಿದ್ದವು.

ಪ್ರತಿ ವರ್ಷದಂತೆ ಈ ವರ್ಷ ನಡೆದ ಚಿತ್ರಾಕಲಾ ಸ್ಪರ್ಧೆಯಲ್ಲಿ ಪರಿಸರ ಮಾಲಿನ್ಯ, ಜೀವ ವೈವಿಧ್ಯ ಸಂರಕ್ಷಣೆ, ವಾತಾವರಣ ಬದಲಾವಣೆ ಎಂಬ ವಿಷಯಾಧಾರಿತ ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 1ನೇ ತರಗತಿಯಿಂದ 10ನೇ ತರಗತಿಯ ಸುಮಾರು 6,500 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ನೀರಿನ ಮಹತ್ವವನ್ನು ಹಾಗೂ ನೀರಿನ ಬಳಕೆಯ ಮೇಲೆ ಬೆಳಕು ಚೆಲ್ಲುವ ಸರ್ವೋದಯ ನ್ಯಾಷನಲ್ ಪಬ್ಲಿಕ್ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ ಬಿ.ಎಂ. ಅವರ ಚಿತ್ರಕಲೆಗಳು ನೀರಿನ ಬಳಕೆಯ ಬಗ್ಗೆ ಜನರಲ್ಲಿ ಕಾಳಜಿ ಭಾವನೆಯನ್ನು ಬೆಳೆಸುವಂತಿದ್ದವು. ಜೀವ ವೈವಿಧ್ಯದ ಮೇಲೆ ಬೆಳಕು ಚೆಲ್ಲುವ ಚೆನ್ನೈನ ಶ್ರಾಮ್ ಅಕಾಡೆಮಿ (schram academy) ಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮೇಘನಾ ಅವರ ಚಿತ್ರಗಳು ಆಧುನಿಕತೆಯ ವೇಗಕ್ಕೆ ಹಿಡಿದ ಕನ್ನಡಿಯಂತಿದ್ದವು.

ವರ್ಣಚಿತ್ರಗಳ ಮೂಲಕ ತಮ್ಮ ಅಭಿಪ್ರಾಯ ಗಳನ್ನು ಬಾಹ್ಯ ಜಗತ್ತಿಗೆ ತೆರೆದಿಡಲು, ಚಿತ್ರಕಲೆಯಲ್ಲಿ ಆಸಕ್ತಿ ಇರುವ ಮಕ್ಕಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಾಮಾಜಿಕ ಜಾಗೃತಿ ಹಾಗೂ ಪರಿಸರ ಭದ್ರತೆಯ ಕಡೆಗೆ ಯುವ ಮನಸ್ಸುಗಳನ್ನು ಸೆಳೆಯುವ ಉದ್ದೇಶದಿಂದ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ನೀವು ಪಾಲ್ಗೊಳ್ಳಿ: ಪ್ರತಿವರ್ಷದಂತೆ ಈ ವರ್ಷ ನಡೆಯುವ ಸ್ಪರ್ಧೆಯಲ್ಲಿ 1ರಿಂದ 10ನೇ ತರಗತಿಯ ಮಕ್ಕಳು ಭಾಗವಹಿಸಬಹುದು. ಮಾಹಿತಿಗಾಗಿ ಚಂದ್ರಿಕಾ 99861 83469, chandrika@ocspl.net ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.