ಉಜಿರೆ (ದಕ್ಷಿಣ ಕನ್ನಡ): ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ತನ್ನ ಹೊಸ ಮಾದರಿಯ ಬಿಇ6 ಕಾರನ್ನು ಧರ್ಮಸ್ಥಳ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದೆ.

ಕಂಪನಿಯ ಉತ್ಪಾದನಾ ವಿಭಾಗದ ಮುಖ್ಯಸ್ಥ ವಿನಯ್ ಖಾನೋಲ್ಕರ್ ಭಾನುವಾರ ಇಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಕಾರಿನ ಕೀ ಹಸ್ತಾಂತರಿಸಿದರು.

‘ತಯಾರಾದ ಹೊಸ ಮಾದರಿ ಕಾರನ್ನು ಕಾಣಿಕೆಯಾಗಿ ಧರ್ಮಸ್ಥಳಕ್ಕೆ ನೀಡುವುದು ಕಂಪನಿ ಸಂಪ್ರದಾಯ. ಇದರಿಂದ ಕಂಪನಿ ಪ್ರಗತಿ ಸಾಧಿಸಿದೆ’ ಎಂದು ವಿನಯ್ ಅವರು ಹೇಳಿದರು.

ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ‘ಕಂಪನಿಯು ಕ್ಷೇತ್ರಕ್ಕೆ ಅರ್ಪಿಸಿದ ಮೂರನೇ ಕಾರು ಇದಾಗಿದೆ. ಇದನ್ನು ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಬಳಸಲಾಗುವುದು’ ಎಂದರು. ಬಳಿಕ ಹೆಗ್ಗಡೆಯವರು ಕಾರು ಚಾಲನೆ ಮಾಡಿ ಶುಭ ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.