ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಅವೆಂಜರ್ಸ್‌ ಜಾದೂ

Last Updated 3 ಜನವರಿ 2020, 19:30 IST
ಅಕ್ಷರ ಗಾತ್ರ

ಅವೆಂಜರ್ಸ್‌ ಸಿನಿಮಾದಲ್ಲಿ ಪಾತ್ರಗಳು ತೊಟ್ಟ ಬಟ್ಟೆ, ಮಾಸ್ಕ್‌, ಶಿರಸ್ತ್ರಾಣ ಮತ್ತು ಬಳಸಲಾದ ಲೇಸರ್ ಗನ್‌, ಲೇಸರ್‌ ಖಡ್ಗಗಳಂತಹ ವಸ್ತುಗಳನ್ನು ಕಣ್ಣಾರೆ ಕಂಡು ಮತ್ತುಮುಟ್ಟಿ ಅನುಭವಿಸುವ ಅಪರೂಪದ ಅವಕಾಶವೊಂದುನಗರದ ಜನರಿಗೆಒದಗಿ ಬಂದಿದೆ.

ಬುಕ್ ಮೈ ಷೋ ಈ ಅವಕಾಶ ಕಲ್ಪಿಸಿದ್ದು, ವೈಟ್‌ಫೀಲ್ಡ್‌ನ ಫಿನಿಕ್ಸ್‌ ಮಾರ್ಕೆಟ್‌ ಸಿಟಿ ಮಾಲ್‌ನಲ್ಲಿ ಡಿಸೆಂಬರ್‌ 26ರಿಂದ ಮಾರ್ವೆಲ್‌ ಅವೆಂಜರ್ಸ್‌ ಸ್ಟೇಷನ್‌ ಪ್ರದರ್ಶನ ಆರಂಭವಾಗಿದ್ದು, ಜನವರಿ 5ರವರೆಗೆ ನಡೆಯಲಿದೆ. ಮಾರ್ವೆಲ್‌ ಸಿನಿಮಾ ನಿರ್ಮಾಣ ಸಂಸ್ಥೆ ತನ್ನ ಚಿತ್ರಗಳಲ್ಲಿ ಬಳಸಿದ ಪ್ರಮುಖ ಪೋಷಾಕುಗಳು ಪ್ರದರ್ಶನದಲ್ಲಿವೆ.ಕ್ರಿಸ್‌ಮಸ್‌ ರಜೆ ಕಾರಣ ಪ್ರದರ್ಶನ ವೀಕ್ಷಿಸಲು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಇದು ಮಾರ್ವೆಲ್‌ ಸಿನಿಮಾಟಿಕ್‌ ಯುನಿವರ್ಸ್‌ನ ಬಗ್ಗೆ ತಿಳಿಸುವ ಸಂವಾದನಾತ್ಮಕ ಪ್ರದರ್ಶನ. ಅವೆಂಜರ್ಸ್‌ ಪಾತ್ರಗಳಾದ ಹಲ್ಕ್‌, ಐರ‍ನ್ಮ್ಯಾನ್‌, ಕ್ಯಾಪ್ಟನ್‌ ಅಮೆರಿಕ, ಥಾರ್‌ ಆಡಿಸನ್‌, ಬ್ಲ್ಯಾಕ್‌ ವಿಡೋ, ಆ್ಯಂಟ್ ಮ್ಯಾನ್‌ನಂತಹ ಸೂಪ‍ರ್‌ ಹೀರೊ ಪಾತ್ರಧಾರಿಗಳು ಧರಿಸಿದ್ದ ಪೋಷಾಕುಗಳು ಇಲ್ಲಿ ನೋಡಲು ಸಿಗುತ್ತವೆ.

ಸೂಪರ್‌ ಹೀರೋಗಳ ಜೊತೆಗೆ ವರ್ಚುವಲ್‌ ಅನುಭವ ಪಡೆಯುವ ವ್ಯವಸ್ಥೆಯನ್ನು ಮಾರ್ವೆಲ್‌ ಅವೆಂಜರ್ಸ್‌ ಸ್ಟೇಷನ್‌ನಲ್ಲಿ ಮಾಡಲಾಗಿದೆ. ಥಾರ್‌ನ ಹ್ಯಾಮರ್‌ ಪ್ರದರ್ಶನದ ಪ್ರಮುಖ ಆಕರ್ಷಣೆ.

ನಾಸಾ, ದಿ ಸೈನ್ಸ್‌ ಆ್ಯಂಡ್‌ ಎಂಟರ್‌ಟೈನ್‌ಮೆಂಟ್‌ ಎಕ್ಸ್‌ಚೇಂಜ್‌, ಜೆಪಿಎಲ್‌ ಮತ್ತು ಗೇಮ್‌ಡೆಸ್ಕ್‌ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಪ್ರದರ್ಶನದ ಮುಖ್ಯ ವಿಷಯವೇವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ.

ಇವತ್ತು ನನ್ನ ಹುಟ್ಟಿದ ದಿನ. ಅದಲ್ಲದೇ ನಾನು ಅವೆಂಜರ್ಸ್‌ನ ಬಿಗ್‌ ಫ್ಯಾನ್‌, ನನ್ನ ಬರ್ತ್‌ಡೇ ದಿನವೇ ನನಗೆ ಈ ಕಾರ್ಯಕ್ರಮಕ್ಕೆ ಬರುವ ಅವಕಾಶ ಸಿಕ್ಕಿತ್ತು. ನನಗೆ ಇಲ್ಲಿಗೆ ಬಂದು ತುಂಬಾ ಖುಷಿಯಾಗುತ್ತಿದೆ ಎಂದು ಪ್ರದರ್ಶನಕ್ಕೆ ಆಗಮಿಸಿದ್ದ 9ನೇ ತರಗತಿಯ ವೇದಾಂತ ಖುಷಿಯನ್ನು ಹಂಚಿಕೊಂಡಿದ್ದಾನೆ.

‘ನನ್ನ ಮಗನಿಗೆ ಅವೆಂಜರ್ಸ್‌ ಅಂದ್ರೆ ತುಂಬಾ ಇಷ್ಟ. ಅವನ್ನು ಇಲ್ಲಿ ತುಂಬಾ ಎಂಜಾಯ್‌ ಮಾಡ್ತಿದ್ದಾನೆ. ಅವೆಂಜರ್ಸ್‌ನ ಬಹುತೇಕ ಪಾತ್ರಗಳು ಇಲ್ಲಿದೆ. ಒಬ್ಬ ಅವೆಂಜರ್ಸ್‌ ಫ್ಯಾನ್‌ಗೆ ಇದಕ್ಕಿಂತ ಹೆಚ್ಚು ಏನು ಬೇಕು’ ಎಂದು ಮಗನೊಂದಿಗೆ ಪ್ರದರ್ಶನಕ್ಕೆ ಬಂದಿದ್ದ ವಂದನಾ ಗೋವಿಂದರಾಜು ಅಭಿಪ್ರಾಯ ಹಂಚಿಕೊಂಡರು.

***

‘ಜನರಿಗೆ ಅವೆಂರ್ಜಸ್‌ನ ಅನುಭವ ನೀಡುವ ಉದ್ಧೇಶದಿಂದ ನಾವು ಈ ಪ್ರದರ್ಶನವನ್ನು ಆಯೋಜಿಸಿದ್ದೇವೆ. ನಾನು ಐರನ್‌ ಮ್ಯಾನ್‌ ಆಗಬೇಕು, ಹಲ್ಕ್‌ ಹಾಗೇ ಪವರ್‌ಫುಲ್‌ ಆಗ್ಬೇಕಂತ ಅಭಿಮಾನಿಗಳಿಗೆ ಬಯಕೆ ಇರುತ್ತೆ. ಅವೆಂಜರ್ಸ್‌ ಸ್ಟೇಷನ್‌ನಲ್ಲಿ ಸಂವಾದಾನ್ಮಾಕ ಚಟುವಟಿಕೆ ಆಯೋಜಿಸುವ ಮೂಲಕ ಜನರ ಈ ಆಸೆಯನ್ನು ಪೂರೈಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ’

ಗುಂಜನ್‌, ಪ್ರಾಜೆಕ್ಟ್‌ ಮ್ಯಾನೇಜರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT