ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಆರ್ಟ್‌ ಮಂತ್ರ ಉತ್ಸವ

Last Updated 16 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ‘ಬೆಂಗಳೂರು ಆರ್ಟ್‌ ಮಂತ್ರ ಉತ್ಸವವು ಅ.18ರಿಂದ 20ರವರೆಗೆ ನಡೆಯಲಿದೆ. ಇದನ್ನು ‘ಹೆಣೆಯು’ ಕ್ರಾಫ್ಟ್‌ ಬಜಾರ್‌ ಆಯೋಜಿಸಿದೆ.

ಕಲಾವಿದರು ಹಾಗೂ ಕಲೆಗೆ ಪ್ರೋತ್ಸಾಹ, ಜಾಗೃತಿ ಮೂಡಿಸುವುದು ಈ ಉತ್ಸವದ ಉದ್ದೇಶ. ಇಲ್ಲಿನ 40 ಮಳಿಗೆಗಳಲ್ಲಿ ದೀಪಾವಳಿಗಾಗಿ ರೇಷ್ಮೆ, ಹತ್ತಿ ಸೀರೆಗಳು, ಕೈಯಿಂದ ಮಾಡಿರುವ ಕಿವಿಯೋಲೆಗಳು, ಆಭರಣ, ಗೃಹಾಲಂಕಾರ ವಸ್ತುಗಳು, ದೀಪಗಳು ಸೇರಿದಂತೆ ಬಗೆಬಗೆ ವಸ್ತುಗಳು ಇಲ್ಲಿ ಲಭ್ಯ.

ಈ ಉತ್ಸವದ ಮತ್ತೊಂದು ಆಕರ್ಷಣೆಯೆಂದರೆ, ಕಲಾವಿದರ ಜೊತೆ ವಸ್ತುಗಳ ತಯಾರಿಕೆ ಬಗ್ಗೆ ಮಾತುಕತೆ ನಡೆಸಬಹುದು. ಹಾಗೇ ಪರಿಸರ ಸ್ನೇಹಿ ವಸ್ತುಗಳನ್ನು ಖರೀದಿಸಬಹುದು. ಸ್ಥಳದಲ್ಲಿಯೇ ಮಡಕೆಗಳನ್ನು ಮಾಡುವಂತಹ ಕರಕುಶಲ ವಸ್ತುಗಳ ಕಾರ್ಯಾಗಾರದಲ್ಲೂ ಭಾಗವಹಿಸಬಹುದು. ಮಕ್ಕಳೂ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.

ಸ್ಥಳ– ರಂಗೋಲಿ ಮೆಟ್ರೊ ಕಲಾಕೇಂದ್ರ, ಎಂ.ಜಿ ರಸ್ತೆ. ಉಚಿತ ಪ್ರವೇಶ. ಅಕ್ಟೋಬರ್‌ 18ರಿಂದ 20. ಬೆಳಿಗ್ಗೆ 11ರಿಂದ ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT