ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಸಕ್ತಿ ಗುರುತಿಸಬೇಕು

ಆಡೂ ಆಟ ಆಡು
Last Updated 24 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ನನ್ನ ಮಗ ಭೀಮ್‌ರಾಜ್ ಕಬೀರ್‌ಗೆ ಮೊದಲಿಂದಲ್ಲೂ ಪೇಪರ್ ಕ್ರಾಫ್ಟ್‌ನಲ್ಲಿ ಹೆಚ್ಚು ಆಸಕ್ತಿ. ಆ ವಿಷಯದಲ್ಲೇ ಅವನಿಗೆ ಹೊಸಬಗೆಯ ಆಟಗಳನ್ನು ಹೇಳಿಕೊಡುತ್ತಿದ್ದೇನೆ. ಟ್ರ್ಯಾಕ್ಟರ್‌, ಗಾಡಿ, ಸಂಖ್ಯೆಗಳು, ಚಿಟ್ಟೆ ಇಂಥ ವಸ್ತುಗಳನ್ನು ಮರುಸೃಷ್ಟಿ ಮಾಡಲು ಇಷ್ಟಪಡುತ್ತಾನೆ. ಓರಿಗಾಮಿ ಕ್ರಾಫ್ಟ್‌ ಮಾಡಿಸುತ್ತೇನೆ ಅಂದ್ರೆ ಕಾಗದ ಮಡಚಿ, ಬಾತುಕೋಳಿ, ಚಿಟ್ಟೆ ಹೀಗೆ ಪ್ರಾಣಿಪಕ್ಷಿಗಳ ಆಕೃತಿ ಮಾಡುತ್ತೇನೆ. ಯುಟ್ಯೂಬ್‌ನಲ್ಲಿ ಇಂಥ ಹಲವಾರು ವಿಡಿಯೊ ಇವೆ. ನೋಡಿ ಕಲಿತು,ಮಕ್ಕಳಿಗೂ ಕಲಿಸಬಹುದು.

ಪೋಷಕರ ಸ್ಥಾನಕ್ಕೆ ಬಂದ ಕೂಡಲೇ ಮೊರಾಲಿಟಿ ಕಂಪಾಸ್‌ ಇಟ್ಟುಕೊಳ್ಳುತ್ತೇವೆ. ಮಗುವಿನ ಎಲ್ಲಾ ಚಟುವಟಿಕೆಯ ಮೌಲ್ಯಮಾಪನವನ್ನು ಆರಂಭಿಸುತ್ತೇವೆ. ಮಕ್ಕಳು ಹೆಚ್ಚು ಟಿವಿ ನೋಡಬಾರದು,ಮೊಬೈಲ್ ನೋಡಬಾರದು ಎಂಬ ಗೆರೆ ಎಳೆದುಕೊಂಡು ಆ ಕಾರಣಕ್ಕೆ ಅವರನ್ನು ಹೆಚ್ಚು ಇತರೆ ಚುಟುವಟಿಯಲ್ಲಿ ತೊಡಗಿಸಬೇಕು ಎಂದುಕೊಳ್ಳುತ್ತೇವೆ. ಮೊಬೈಲ್ ಆ್ಯಪ್ಹಾಗೂ ಇದರ ತಾಂತ್ರಿಕತೆಯಲ್ಲಿ ಅವನಿಗಿರುವ ಚಾಕಚಕ್ಯತೆ ನನಗಿಲ್ಲ. ಮೊಬೈಲ್‌ನಲ್ಲೂ ಸಾಕಷ್ಟು ಕ್ರಿಯಾಶೀಲ ಆ್ಯಪ್‌ಗಳು ಇವೆ. ನಾವು ಅವರಿಗಾಗಿ ಸಾಕಷ್ಟು ಸಮಯ ಹೊಂದಿಸಿಕೊಳ್ಳಬೇಕು. ಅವರೊಂದಿಗೆ ಆಡಬೇಕು. ಮೊಬೈಲ್‌ ತಂತ್ರಜ್ಞಾನದ ವಿಚಾರವಾಗಿ ನಾನು ಅವನ ಮುಂದೆ ಸೋಲುತ್ತೇನೆ.

ಟಿವಿ, ಮೊಬೈಲ್ ನೋಡಿದ್ರೆ ಹಾಳಾಗುತ್ತಾರೆ ಎನ್ನುವುದು ಸುಳ್ಳು. ಪೋಷಕರಾಗಿ ನಾವು ಮಗುವಿನ ಆಸಕ್ತಿ ಮತ್ತು ಅಭಿರುಚಿಯನ್ನು ಹುಟ್ಟಿಸಲು ಸಾಧ್ಯವಿಲ್ಲ. ಅಂತರ್ಗತದಲ್ಲಿ ಅವರದ್ದೇ ಮಿಡಿತವಿರುತ್ತದೆ. ಅವರದ್ದೇ ಆಸಕ್ತಿಗೆ ತುಡಿಯುತ್ತಾರೆ. ಹಾಗಾಗಿ ಇಂಥದ್ದೇ ಮಾಡಬೇಕು ಎನ್ನುವ ಚೌಕಟ್ಟನ್ನು ಮಕ್ಕಳ ವಿಚಾರದಲ್ಲಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಅವರು ಯಾವ ವಿಚಾರಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಿಕೊಂಡು ಅದರಲ್ಲಿ ನಾವು ಮುಳುಗಬೇಕು.ಅವರೊಡನೆ ಸ್ನೇಹಿತನಂತೆ ಆಡಿಕೊಂಡು ಅವರ ಆಸಕ್ತಿ ಸ್ಪಂದಿಸಿದಾಗಲೇ ಅವರು ನಮ್ಮೊಡನೆ ತೆರೆದುಕೊಳ್ಳುತ್ತಾರೆ.

ಮೊಬೈಲ್ ಬಳಸುವುದು ತಪ್ಪು ಎಂದು ನಾವು ಅಂದುಕೊಂಡಿಲ್ಲ. ಮೊಬೈಲ್‌ನಲ್ಲೇ ಮಕ್ಕಳಿಗೆ ಉಪಯೋಗವಾಗುವ ಸಾಕಷ್ಟು ಆ್ಯಪ್‌ಗಳಿವೆ ಅದರ ಬಳಕೆ ಮಾಡಿಕೊಳ್ಳುತ್ತಿದ್ದಾನೆ.

–ಗಿರಿರಾಜ್ ಬಿ.ಎಂ, ಚಿತ್ರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT