ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ ಗ್ರಾಂಡ್ ಕ್ರಿಸ್ಟಲ್ ಲೋಟಸ್ ಡೋಮ್‌ಗೆ ಚಾಲನೆ

Last Updated 20 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಮಹದೇವಪುರದ ಫೀನಿಕ್ಸ್ ಮಾರ್ಕೆಟ್‌ಸಿಟಿ ವಿಶೇಷವಾಗಿ ರೂಪಿಸಿರುವ ‘ದಿ ರಾಯಲ್ ಗ್ರಾಂಡ್ ಕ್ರಿಸ್ಟಲ್ ಲೋಟಸ್ ಡೋಮ್‌’ಗೆ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಚಾಲನೆ ನೀಡಿದರು. ಈ ಮೂಲಕ ಪ್ರಸಕ್ತ ವರ್ಷದ ಧಾಂತೇರಾಸ್‌ ಜನಪ್ರಿಯ ಹಾಗೂ ಖ್ಯಾತ ಜ್ಯುವೆಲ್ಲರಿ ಬ್ರಾಂಡ್‌ಗಳ ವಿಶಿಷ್ಟ ವಿನ್ಯಾಸದ ಅಭರಣಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಾರಂಭಗೊಂಡಿತು.

ತನಿಷ್ಕ್, ಮಿಯಾ, ಕ್ಯಾರಟ್‌ಲೇನ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಸ್ವರೋಸ್ಕಿ, ಟಿಬಿಝಡ್, ರ‍್ರಾ, ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್‌, ಜೋಯಾಲುಕ್ಕಾಸ್, ಭೀಮಾ ಜ್ಯುವೆಲ್ಲರ್ಸ್‌, ಉನ್ನಿಯರ್ಚ, ಐಶರ್ಯ, ಸೆನ್ಕೊ ಗೋಲ್ಡ್ ಅಂಡ್‌ ಡೈಮಂಡ್ಸ್, ಚೇರಾ ಸಿಲ್ವರ್ ಜ್ಯುವೆಲ್ಲರಿ ಮತ್ತು ಮಂಗತ್ರೈ ನೀರಜ್ ರೀತಿಯ ಖ್ಯಾತ ಜ್ಯುವೆಲ್ಲರಿ ಬ್ರಾಂಡ್‌ಗಳು, ವಿಶೇಷವಾಗಿ ಹಬ್ಬಗಳಿಗೆಂದೇ ರೂಪಿಸಿದ ಅತ್ಯದ್ಭುತ ವಿನ್ಯಾಸದ ಆಭರಣಗಳೊಂದಿಗೆ ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ.

ಜ್ಯುವೆಲ್ಲರಿಗಳನ್ನು ಕೇಂದ್ರೀಕರಿಸಿದ ಹಬ್ಬದ ಆಚರಣೆ ಮತ್ತು ಪದ್ಧತಿಗಳಿಂದ ಪ್ರಭಾವಿತ ‘ದಿ ರಾಯಲ್ ಗ್ರಾಂಡ್ ಕ್ರಿಸ್ಟಲ್ ಲೋಟಸ್ ಡೋಮ್’ ವಿನ್ಯಾಸ ಸಂಭ್ರಮಾಚರಣೆಗೆ ಅದ್ದೂರಿ ಸ್ಪಂದನೆಯಂತಿದೆ. ಪ್ರವೇಶ ದ್ವಾರದಲ್ಲಿ ಲಕ್ಷ್ಮೀದೇವಿಯಿಂದ ಪ್ರಭಾವಿತವಾಗಿರುವ, ಆಳೆತ್ತರದ ಲೋಟಸ್ ಡೋಮ್ ಸ್ಥಾಪಿಸಲಾಗಿದೆ. ಬೆಳಕಿನ ಹಬ್ಬದ ಸಂಭ್ರಮವನ್ನು ಪ್ರತಿಬಿಂಬಿಸುವ ಉದ್ದೇಶದೊಂದಿಗೆ ಹರಳುಗಳು, ಫೆಸೆಟ್‌ಗಳು ಹಾಗೂ ಪ್ರತಿಫಲಿತ ಕನ್ನಡಿಗಳನ್ನು ಬಳಸಿ ಡೋಮ್‌ ಸಿದ್ಧಪಡಿಸಲಾಗಿದೆ. ಮಾಲ್‌ನ ಒಳಗಡೆ ಹೊಳೆಯುವ ಅಲಂಕಾರಿಕ ವಸ್ತುಗಳು ಮತ್ತು ಕ್ರಿಸ್ಟಲ್‌ಗಳಿಂದ ವಿನ್ಯಾಸಗೊಳಿಸಲಾಗಿದೆ.

ಪ್ರಸಕ್ತ ವರ್ಷ ದೀಪಾವಳಿ ಥೀಮ್‌ನ ಫೀಸ್ ಡೆ ರೆಸಿಸ್ಟಾನ್ಸ್ ಮೆಚ್ಚಿನ ಲೈಫ್‌ಸ್ಟೈಲ್ ಡೆಸ್ಟಿನೇಷನ್‌ನ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ 250ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ಭಾರತೀಯ ಬ್ರಾಂಡ್‌ಗಳಿವೆ. ಸೋನು ಮೂಲ್‌ಚಂದಾನಿ ಮತ್ತು ಇ-ಸ್ಟುಡಿಯೋ ಒಟ್ಟಾಗಿ ಈ ವೈಭವಯುತ ಕಾರ್ಯಕ್ರಮವನ್ನು ಆಯೋಜಿಸಿವೆ. ಫೀನಿಕ್ಸ್ ಮಾರ್ಕೆಟ್‌ಸಿಟಿಯ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ರಿತು ಮೆಹ್ತಾ,ಹಿರಿಯ ಕೇಂದ್ರ ನಿರ್ದೇಶಕ ಗಜೇಂದ್ರ ಸಿಂಗ್ ರಾಥೋಡ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT