ಮಂಗಳವಾರ, ಜನವರಿ 28, 2020
29 °C

‘ಲಾ ಟೆಂಡೆನ್ಸಿಯಾ’ಫ್ಯಾಷನ್‌ ಷೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲವೊನ್‌ ಇಂಟರ್‌ನ್ಯಾಷನಲ್‌ ಹಾಗೂ ಫಿನಿಕ್ಸ್‌ ಸಂಸ್ಥೆ ಈಚೆಗೆ ನಗರದಲ್ಲಿ ‘ಲಾ ಟೆಂಡೆನ್ಸಿಯಾ’ ಫ್ಯಾಷನ್‌ ಷೋವನ್ನು ಆಯೋಜಿಸಿತ್ತು. ಬಾಲಿವುಡ್‌ನ ಖ್ಯಾತ ವಸ್ತ್ರವಿನ್ಯಾಸಕಿ ಸ್ವಪ್ನಿಲ್‌ ಶಿಂಧೆ ವಿನ್ಯಾಸ ಮಾಡಿದ ವಸ್ತ್ರಗಳನ್ನು ತೊಟ್ಟು ರೂಪದರ್ಶಿಯರು ಮಿಂಚಿದರು. ಆಲಿಯಾ ಭಟ್‌, ಸನ್ನಿ ಲಿಯೋನ್‌ ಮೊದಲಾದ ನಟಿಯರಿಗೆ ವಸ್ತ್ರ ವಿನ್ಯಾಸ ಮಾಡಿರುವ ಸ್ವಪ್ನಿಲ್‌ ಅವರ ‘ಲಾ ಟೆಂಡೆನ್ಸಿಯಾ’ ಷೋನಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಷೋ ಸ್ಟಾಪರ್‌ ಆಗಿ ಮಿಂಚಿದರು.

ಇದಲ್ಲದೇ ದೆಹಲಿ ಹಾಗೂ ಮುಂಬೈನ ವಿನ್ಯಾಸಕಿಯರಾದ ವಾರಿಜಾ ಬಜಾಜ್‌ ಹಾಗೂ ಕರ್‌ ಲಿಯೊ ಅವರ ವಿನ್ಯಾಸದ ವಸ್ತ್ರಗಳನ್ನೂ ರೂಪದರ್ಶಿಯರು ಪ್ರದರ್ಶಿಸಿದರು.

ಪ್ರತಿಕ್ರಿಯಿಸಿ (+)