ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಸಿಗೆಗೆ ಹಿತ, ಫ್ಯಾಷನ್‌ಗೂ ಸೈ

ವೂನಿಕ್‌ ಕುರ್ತಾಗಳು
Published : 5 ಮಾರ್ಚ್ 2019, 20:00 IST
ಫಾಲೋ ಮಾಡಿ
Comments

ಸೀರೆಗಳಿಗೆ ಪರ್ಯಾಯವಾಗಿ ಚೂಡಿ ಬಳಕೆಗೆ ಬಂದಿತು. ಆದರೆ ಬಿಗಿಯಾದ ಪ್ಯಾಂಟ್‌ಗಳನ್ನು ಧರಿಸಿ ಚೂಡಿದಾರ ಹಾಕಲು ಇಷ್ಟವಾಗದವರು ಸಡಿಲವಾದ ಪ್ಯಾಂಟ್‌ಗಳ ಜೊತೆಗೆ ಕುರ್ತಾ ಹಾಕಲು ಇಷ್ಟಪಡುತ್ತಾರೆ.

ಈ ಕಾಲದ ಟ್ರೆಂಡ್ ಆಗಿಯೂ ಕುರ್ತಾಗಳು ಬಳಕೆಯಾಗುತ್ತಿವೆ. ವೂನಿಕ್‌ ಸಂಸ್ಥೆ ಕೂಡ ಇಂತದ್ದೇ ಹೊಸ ಟ್ರೆಂಡಿ ಸಂಗ್ರಹಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಭವ್ಯಾ ಚಾವ್ಲಾ ಅವರು ಡಿಸೈನ್‌ ಮಾಡಿದ್ದಾರೆ. ಎಲ್ಲಾ ವಯೋಮಾನದವರಿಗೂ, ದಪ್ಪ ಹಾಗೂ ತೆಳು ಇರುವವರಿಗೂ ಸರಿಹೊಂದುವಂತೆ ಇವುಗಳನ್ನು ಡಿಸೈನ್‌ ಮಾಡಲಾಗಿದೆ. ಶರ್ಟ್‌ ಹಾಗೂ ಸೂಟ್ ಮಾದರಿಯಲ್ಲಿ ಕಾಣುವ ಈ ಕುರ್ತಾಗಳು ಕಣ್ಮನಸೆಳೆಯುತ್ತವೆ.

ತಿಳಿಯಾದ ಬಣ್ಣ ಹಾಗೂ ಮೃದುವಾದ ಕುರ್ತಾಗಳು ಬೇಸಿಗೆಗೂ ಹೇಳಿ ಮಾಡಿಸಿದಂತಿವೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. ಕಾಟನ್‌, ಲೆನಿನ್‌ ಸೇರಿಕೊಂಡು ತಯಾರಾಗಿವೆ.

ಕಾರ್ಪೊರೇಟ್ ಮಾದರಿಯ ಲುಕ್‌ ನೀಡಲಿವೆ. ಭಿನ್ನವಾದ ಪ್ಯಾಂಟ್‌ಗಳ ಜೊತೆಗೆ ಧರಿಸಬಹುದು. ₹300ರಿಂದ ಪ್ರಾರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT