ರಾ ಜಕಾರಣಿ ನಾಗರಾಜ್ಗೆ (ಹೆಸರು ಬರೆಯಲೂ ಗೊತ್ತಿಲ್ಲದೆ ನೊಗರಾಜ್ ಎಂದು ಬರೆದುಕೊಳ್ಳುವವ) ದುಡ್ಡು ಮಾಡಲು ಒಂದು ಐಡಿಯಾ ಹೊಳೆಯುತ್ತದೆ.

ಬೆಂಗಳೂರಿನಲ್ಲಿ ಪಾರ್ಕಿಂಗ್ ಗೆ ನಿಗದಿಪಡಿಸಿದ ಸ್ಥಳದಲ್ಲಿ ಇದ್ದಕ್ಕಿದ್ದಂತೆಯೇ ನೋ ಪಾರ್ಕಿಂಗ್ ಫಲಕ ಎದ್ದು ನಿಲ್ಲುತ್ತದೆ. ಆ ಸಾಲಿನಲ್ಲಿದ್ದ ಅಷ್ಟೂ ವಾಹನಗಳನ್ನು ಪೊಲೀಸರ ಮೂಲಕ ಟೋಯಿಂಗ್ ವಾಹನದಲ್ಲಿ ಎತ್ತಿಹಾಕಿಸಿ ದಂಡ ವಸೂಲು ಮಾಡಲಾಗುತ್ತದೆ. ಪೊಲೀಸರಿಗೆ, ‘ಸಂಬಂಧಪಟ್ಟವರಿಗೆ’ ಒಂದಿಷ್ಟು ಮೊತ್ತ ಹಂಚಿಕೆಯಾಗುತ್ತದೆ. ಉಳಿದ ಭಾರೀ ಪ್ರಮಾಣದ ಮೊತ್ತವನ್ನು ದೊಡ್ಡ ಬ್ಯಾಗ್ ನಲ್ಲಿ ತುಂಬಿಸಿ ಮನೆಗೆ ಹೊತ್ತೊಯ್ಯುತ್ತಾನೆ ನಾಗರಾಜ್.

- ಇದು ಕಳೆದ ವರ್ಷ ತೆರೆ ಕಂಡ 'ಹಂಬಲ್ ಪೊಲಿಟೀಷಿಯನ್ ನೊಗರಾಜ್' ಚಿತ್ರದ ತುಣುಕು. ದುಡ್ಡು ಮಾಡುವ ಪ್ರಳಯಾಂತಕಾರಿ ಐಡಿಯಾಗಳನ್ನು ಒಂದೊಂದಾಗಿ ಬಳಸಿ ಪ್ರಭಾವಿ ರಾಜಕಾರಣಿಯಾಗುತ್ತಾನೆ ನಾಗರಾಜ್ (ಡ್ಯಾನಿಷ್ ಸೇಠ್).

ಸಿನಿಮಾದಲ್ಲಿ ನೋಡಲು ತಮಾಷೆಯಾಗಿ ಕಾಣುವ ದೃಶ್ಯ ಈಗ ಬೆಂಗಳೂರಿನ ವಾಸ್ತವ.

ಮಾರುಕಟ್ಟೆ ಪ್ರದೇಶ, ಪ್ರತಿಷ್ಠಿತ ಮಾಲ್ಗಳ ರಸ್ತೆಬದಿ, ಪ್ರಭಾವಿಗಳ ಸಂಕೀರ್ಣದ ಮುಂದೆ, ಮಾಮೂಲು ಕೊಡುವ ವ್ಯಾಪಾರಿಗಳ ಅಂಗಡಿ ಮುಂದೆ ಕೆಲ ಕ್ಷಣ ವಾಹನ ನಿಲ್ಲಿಸಿ ಹೋದರೆ ಸಾಕು (ಪಾರ್ಕಿಂಗ್ ಬೋರ್ಡ್ ನೋಡಿಯೇ ನಿಲ್ಲಿಸಿದ್ದರೂ). ನಿಮ್ಮ ಗಾಡಿ ಹುಲಿ (ಟೈಗರ್ ವಾಹನ) ಪಾಲಾಗಿರುತ್ತದೆ.

ಇನ್ನು ಗಾಡಿ ಎತ್ತಿ ಟೋಯಿಂಗ್ ವಾಹನದ ಮೇಲೆ ಎತ್ತಿ ಹಾಕುವ ಕೆಲಸವಂತೂ ವಿಕೃತಿಯ ಪರಾಕಾಷ್ಠೆಗೆ ಹೋಗಿರುತ್ತದೆ. ದಡಕ್ಕನೆ ಎತ್ತಿ ಎಸೆಯುವಂತ ನೋಟ ವಾಹನ ಮಾಲೀಕನ ಕರುಳು ಚುರುಗುಟ್ಟಿಸುತ್ತದೆ.

ವಾಹನ ಪಡೆಯಲು ಹೋದಾಗ ಅದರ ಯಾವುದಾದರೂ ಭಾಗ ಹಾನಿಯಾಗದೇ ವಾಪಸ್ ಸಿಕ್ಕಿದರೆ ನೀವು ಅದೃಷ್ಟವಂತರೇ ಸರಿ.

ಗಾಡಿ ತೆಗೆಯುತ್ತಾರೆ ಎಂದಾಗ ತಕ್ಷಣವೇ ಸ್ಥಳಕ್ಕೆ ಧಾವಿಸಿದರೂ ಪೊಲೀಸರ ಮತ್ತು ಟೋಯಿಂಗ್ ಕಾರ್ಮಿಕರ ವಿಕೃತ ಅಟ್ಟಹಾಸ ನಿಲ್ಲುವುದಿಲ್ಲ. ಗಾಡಿ ಇರಿಸಿದ ಸ್ಥಳಕ್ಕೇ ಬನ್ನಿ ಎಂದು ಪಟ್ಟುಹಿಡಿಯುತ್ತಾರೆ. ವಾದಿಸಿದರೆ ಮತ್ತಷ್ಟು ಕೇಸು ಜಡಿಸುವ ಬೆದರಿಕೆ. ವಾದ, ಮನವಿ ಮಾಡುವಂತಿಲ್ಲ. ಏಕೆಂದರೆ ನೀವು ಅವರದೃಷ್ಟಿಯಲ್ಲಿ ಮಹಾ ಅಪರಾಧಿಗಳು.

ಇಂಥ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಲಾಗದೆ ಅಸಹಾಯಕರಾಗಿದ್ದಾರೆ ಸಾಮಾನ್ಯ ನಾಗರಿಕರು. ಅದರಲ್ಲೂ ದ್ವಿಚಕ್ರ ವಾಹನ ಸವಾರರು. ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಆಕ್ರೋಶ ಹೊರ ಹಾಕಿ ಸುಮ್ಮನಾಗುತ್ತಿದ್ದಾರೆ.

ತಪ್ಪು ಮಾಡಿದಾಗ ವಾಹನ ಎತ್ತಿ ಒಯ್ದರೆ ಆ ಮಾತು ಬೇರೆ. ಅರೆಕ್ಷಣದ ನಿಲುಗಡೆಗೆ, ಸರಿಯಾದ ಸ್ಥಳದಲ್ಲಿ ನಿಲ್ಲಿಸಿದ ವಾಹನವನ್ನೂ ಎತ್ತಿ ಒಯ್ದ ಘಟನೆ ಎದುರಿಸಬೇಕಾದದ್ದು ಹಲವರ ಸ್ವಾನುಭವ.

ನೋ ಪಾರ್ಕಿಂಗಲ್ಲಿ ನಿಲ್ಲಿಸಿದ ವಾಹನದ ಚಿತ್ರ ನಮ್ಮಲ್ಲಿದೆ ಎಂದು ವಾದಿಸಿದ ಸಿಬ್ಬಂದಿ, ಹಾಗೆ ಹೇಳಿ ಬೆದರಿಸಿದರೇ ವಿನಃ ಚಿತ್ರ ತೋರಿಸಲಿಲ್ಲ.

ವಿಘ್ನಸಂತೋಷಿಗಳಸ್ಯಾಂಪಲ್ಗಳು
* ಟೋಯಿಂಗ್ ವಾಹನದಲ್ಲಿ ಮೈಕ್ ಇದ್ದರೂ ನೋ ಪಾರ್ಕಿಂಗ್ ಜಾಗದ ವಾಹನ ತೆರವು ಮಾಡಲು ಬಳಸುವುದಿಲ್ಲ. ಅದೇನಿದ್ದರೂ ಜನರಿಗೆ ಬೈಯಲು ಮಾತ್ರ ಸೀಮಿತ.

* ವಾಹನ ಹಾನಿಗೊಳಗಾದರೆ ಇಂದು ಬನ್ನಿ, ನಾಳೆ ಬನ್ನಿ ಎಂದು ಅಲೆದಾಡಿಸಿ ಕೊನೆಗೆ ನಾವೇ ಶರಣಾಗಬೇಕಾದ ಅಸಹಾಯಕ ಸ್ಥಿತಿ ತರುತ್ತಾರೆ ಪೊಲೀಸರು.

* ದಂಡ ಹಾಕುವ ಕೆಲಸವನ್ನೂ ಟೋಯಿಂಗ್ ಸಿಬ್ಬಂದಿಯೇ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಉದ್ಯಮದ ಪಾಲುದಾರರು (ಪೊಲೀಸರು ಮತ್ತು ಟೋಯಿಂಗ್ ಗುತ್ತಿಗೆದಾರರು) ಬೆಸೆದುಕೊಂಡಿದ್ದಾರೆ.

* ನಗರದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದಾಗ ಟೋಯಿಂಗ್'ಉದ್ಯಮಿ'ಗಳಿಗೆ ಸುಗ್ಗಿ. ಪಾರ್ಕಿಂಗ್ ನಿಷೇಧಿತ ಪ್ರದೇಶ ಮಾತ್ರವಲ್ಲ, ಎಲ್ಲಿಯೂ ವಾಹನ ನಿಲ್ಲಿಸುವಂತಿಲ್ಲ. ಅಂದು ಗಲ್ಲಿ ಗಲ್ಲಿಗಳಲ್ಲಿಯೂ ಟೋಯಿಂಗ್ ವಾಹನ ಸಂಚರಿಸಿ ‘ವಿಶೇಷ ಕಾರ್ಯಾಚರಣೆ’ ನಡೆಸುತ್ತದೆ. ಉದಾ:ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ವಿಶೇಷ ಕಾರ್ಯಕ್ರಮವಿದ್ದಾಗ ಎಂ.ಜಿ. ರಸ್ತೆಯುದ್ದಕ್ಕೂ ಪಾರ್ಕಿಂಗ್ ನಿಷೇಧಿಸಲಾಗುತ್ತದೆ. ಚರ್ಚ್ ಸ್ಟ್ರೀಟ್ ರಸ್ತೆ ಅಥವಾ ಅದರ ಹಿಂಭಾಗದ ಒಳ ರಸ್ತೆಗಳ ಸಂದಿಗಳಲ್ಲಿಯೂ ವಾಹನ ನಿಲ್ಲಿಸುವಂತಿಲ್ಲ. ಹಾಗೆಂದು ಪರ್ಯಾಯ ವ್ಯವಸ್ಥೆಯನ್ನೂ ಉದ್ದೇಶಪೂರ್ವಕವಾಗಿಯೇ ಕಲ್ಪಿಸಿರುವುದಿಲ್ಲ. ಇದೇ ಪ್ರವೃತ್ತಿ ನ್ಯಾಷನಲ್ ಕಾಲೇಜು ಮೈದಾನದ ಸುತ್ತಮುತ್ತ ಕಾರ್ಯಕ್ರಮಗಳು ನಡೆದಾಗ, ಗಣ್ಯರ ಭೇಟಿ ಸಂದರ್ಭ ‘ಪ್ರಾಮಾಣಿಕ’ವಾಗಿ ಕಾಣಿಸುತ್ತದೆ. ಅಂದರೆ ಸಮಸ್ಯೆ ಸೃಷ್ಟಿಸುವವರೂ ಪೊಲೀಸರೇ.

* ಪಾಕೆಟ್ ಮನಿಯಲ್ಲಿ ನೂರು ರೂಪಾಯಿಯ ಪೆಟ್ರೋಲ್ ಹಾಕಿ ಬೈಕ್ ಓಡಿಸುವ ಕಾಲೇಜು ಹುಡುಗರು, ಡೆಲಿವರಿ ಬಾಯ್ಗಳು, ಟೋಯಿಂಗ್ ಉದ್ಯಮಿಗಳ ಟಾರ್ಗೆಟ್.

* ಹಾಗೆಂದು ಎಲ್ಲ ಕಡೆ ಈ ಉದ್ಯಮಿಗಳ ‘ಸೇವೆ’ ಇರುವುದಿಲ್ಲ. ಶಿವಾಜಿನಗರ, ನೀಲಸಂದ್ರ, ಕೆ.ಆರ್. ಮಾರುಕಟ್ಟೆಯ ಆಯ್ದ ಭಾಗಗಳು, ಚಿಕ್ಕಪೇಟೆಯ ಕೆಲವು ಆಯ್ದ ಭಾಗಗಳು, ಇಲ್ಲೆಲ್ಲಾ ‘ಹುಲಿ’ ಎಚ್ಚರಿಕೆಯ ಹೆಜ್ಜೆ ಇಡುತ್ತದೆ. ಯಾಮಾರಿದರೆ ಇಲ್ಲಿನ ವ್ಯಾಪಾರಿ, ಉದ್ಯಮಿಗಳೇ ಹುಲಿಯನ್ನು ಕಟ್ಟಿ ಹಾಕುತ್ತಾರೆ.

* ಎಸ್.ಪಿ. ರಸ್ತೆ, ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆಯಿಂದ ಟೌನ್ಹಾಲ್ವರೆಗಿನ ಮಾರ್ಗ, ಜೆ.ಸಿ ರಸ್ತೆಯ ಗಲ್ಲಿಗಳು, ಇಂದಿರಾನಗರದ ಇಕ್ಕಟ್ಟಿನ ರಸ್ತೆ ಪ್ರದೇಶಗಳು, ಮಲ್ಲೇಶ್ವರದ ವಾಣಿಜ್ಯ ಮಳಿಗೆಗಳಿರುವ ಒಳರಸ್ತೆಗಳು ಈ ‘ಉದ್ಯಮ’ಕ್ಕೆ ಸಮೃದ್ಧ ಫಸಲು ಕೊಡುವ ಪ್ರದೇಶಗಳು.

* ಈ ಸಮಸ್ಯೆ ಬಗ್ಗೆ ಪ್ರತಿಕ್ರಿಯೆಗೆ ನಗರದ ಸಂಚಾರ ವಿಭಾಗದ ಪೊಲೀಸ್ ಆಯುಕ್ತ ಹರಿಶೇಖರನ್ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಟ್ವಿಟರ್ನಲ್ಲಿ ಕಂಡ ಆಕ್ರೋಶ
ಸ್ವಿಫ್ಟಿನಿಫ್ಟಿ ಎನ್ನುವವರು ಹೀಗೆ ಬರೆದಿದ್ದಾರೆ.

ನನ್ನ ಮುಂದೆಯೇ ಕಾರು ಎತ್ತಿಕೊಂಡು ಹೋದರು. ನಿಲ್ಲಿಸಿ ದಂಡ ಕಟ್ಟುತ್ತೇನೆ ಎಂದು ಕೋರಿದರೂ ಐದು ನಿಮಿಷವೂ ನಿಲ್ಲಿಸಲಿಲ್ಲ. ಬೆಂಗಳೂರು ಟ್ರಾಫಿಕ್ ಪೊಲೀಸರು ಟೋಯಿಂಗ್ ನಿಯಮವನ್ನು ನಿರ್ಲಕ್ಷಿಸಿದ್ದಾರೆ.

ಆಶಿಶ್ ಸಿಂಗ್ ಬರೆದದ್ದು
ಟೋಯಿಂಗ್ ವಾಹನವನ್ನು ಏಕಪಥ ರಸ್ತೆಯಲ್ಲಿ ಅಪಾಯಕಾರಿ ವೇಗದಲ್ಲಿ ಚಾಲನೆ ಮಾಡಿಕೊಂಡು ಏಕಮುಖ ರಸ್ತೆಯಲ್ಲಿ ಸಂಚರಿಸಲಾಗುತ್ತಿದೆ. ವಾಹನದೊಳಗೆ ಪೊಲೀಸ್ ಇದ್ದರೂ ಪ್ರಯೋಜನವಿಲ್ಲ.

ಶಶಿ ಶೇಖರ್ ಅವರ ಆಕ್ರೋಶ ಹೀಗಿದೆ
ಫುಟ್ಪಾತ್ ಮೇಲೆ ಪೊಲೀಸರೇ ಇಲಾಖೆಯ ಬೈಕ್ ನಿಲ್ಲಿಸಿದರೆ ಎಷ್ಟು ದಂಡ? ಇದಕ್ಕೂ ದಂಡ ಹಾಕಬೇಕು. ಬೆಂಗಳೂರು ಸಂಚಾರ ಪೊಲೀಸರು ಉತ್ತರಿಸುವರೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.