ಕಲಿಕಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಏಸ್ ಕ್ರಿಯೇಟಿವ್ ಲರ್ನಿಂಗ್ ‘ಉದಯೋನ್ಮುಖ ಅತ್ಯುತ್ತಮ ಶಿಕ್ಷಕ. ಶಿಕ್ಷಕಿ’ ಶೋಧನಾ ಸ್ಪರ್ಧೆ ಆರಂಭಿಸಿದೆ.ಅಧ್ಯಾಪನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸುವ ಪ್ರತಿಭಾವಂತ ವಿಜ್ಞಾನ ವಿದ್ಯಾರ್ಥಿಗಳನ್ನು ಗುರುತಿಸಿ, ಸಮರ್ಪಕ ಕಾರ್ಯಕ್ರಮದ ಮೂಲಕ ಅವರನ್ನು ‘ಅತ್ಯುತ್ತಮ ಶಿಕ್ಷಕ, ಶಿಕ್ಷಕಿಯಾಗಿ’ ಬೆಳೆಸುವುದು ಇದರ ಹಿಂದಿನ ಉದ್ದೇಶ.

ನಗರದ ವಿವಿಧ ಕಾಲೇಜುಗಳಲ್ಲಿ ಮತ್ತು ವಿವಿಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರು.

ಈ ತಿಂಗಳ ಅಂತ್ಯದವರೆಗೆ ನಗರದ ಆಯ್ದ ಕಾಲೇಜುಗಳಲ್ಲಿ ಎರಡು ದಿನ ಪೂರ್ವಭಾವಿ ಸ್ಪರ್ಧೆ ನಡೆಯಲಿದೆ, ಇಲ್ಲಿ ಅಭ್ಯರ್ಥಿಗಳು ವಿಷಯ ಮಂಡನೆ ಮತ್ತು ಉಪನ್ಯಾಸ ಪ್ರದರ್ಶನ ನೀಡಬೇಕಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿ ಕಾಲೇಜಿನ ಮೂವರು ವಿಜೇತರಿಗೆ ಕ್ರಮವಾಗಿ 2 ಸಾವಿರ, 1500 ಮತ್ತು 1 ಸಾವಿರ ರೂಪಾಯಿ ನಗದು ಬಹುಮಾನ, ಅಲ್ಲದೆ ಏಸ್ನಲ್ಲಿ ಉದ್ಯೋಗದ ಭರವಸೆ ನೀಡಲಾಗುತ್ತದೆ.

ಇದರ ಜತೆಗೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಬಗ್ಗೆ ಪ್ರಮಾಣಪತ್ರ ಹಾಗೂ ಪ್ರದರ್ಶನ ಸುತ್ತಿನ ವಿಡಿಯೊ ಕೂಡ ದೊರೆಯಲಿದೆ. ಕಾಲೇಜು ಹಂತದ ವಿಜೇತರು ಬೆಂಗಳೂರು ನಗರ ಮಟ್ಟದ ಸ್ಪರ್ಧೆಯಲ್ಲಿ ಪಾಲೊಂಡು ಕ್ರಮವಾಗಿ 10 ಸಾವಿರ, 7500 ಸಾವಿರ ಮತ್ತು 5 ಸಾವಿರ ರೂ ಬಹುಮಾನ ಪಡೆಯಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು, ಕಾಲೇಜುಗಳು ಡಾ. ಅಶೋಕ್ (77609 95048) ಅಥವಾ ಚಿನ್ಮಯ ಪ್ರಕಾಶ್ (97415 96484) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.