ಕಾಫಿ ಸ್ಕ್ವೇರ್ನಲ್ಲಿ `ಟಿ~ಗಳದ್ದೇ ಮಾತು ಎಂದರೆ ಗಲಿಬಿಲಿಯಾಯಿತೆ? ಕಾಫಿ ಡೇ ಪ್ರೊಲೈನ್ನೊಂದಿಗೆ ಟಿ-ಶರ್ಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕಿವಿಗಡಚಿಕ್ಕುವ ಹಾಡು, ಹೊರಗೆ ಸೂರ್ಯನ ತಾಪ, ಕಾಫಿ ಸ್ಕ್ವೇರ್ ಒಳಗೆ ಕಾಫಿ ನಾಡಿನಲ್ಲಿಯೇ ಕುಳಿತ ಅನುಭವ. ತಂಪಾದ ಗಾಳಿ, ಕಾಫಿ ಕಂಪು.

ಮೂಗಿನ ಹೊರಳೆ ಹಿಗ್ಗಿಸಿ ಕಾಫಿ ಮಾಧುರ್ಯ ಸವಿಯುವ ಮೊದಲೇ ಕಣ್ಣರಳಿಸುವಂಥ ಸುಂದರಿಯರು ಬಳುಕತೊಡಗಿದರು.

ತುಂಡು ಚಡ್ಡಿಯಲ್ಲಿ, ನೀಳ ಕಾಲುಗಳ ಸುಂದರಿಯರು ಬೆಡಗಿನಿಂದ ರ್ಯಾಂಪ್ ತುಳಿದರು. ಮೈಗಪ್ಪಿಕೊಂಡ ಟಿ-ಶರ್ಟ್ ಗಮನ ಸೆಳೆಯುವಂತಿದ್ದವು. ಕೆಂಪು ಅಂಗಿ ಹಾಕಿಕೊಂಡ ಚೆಲುವೆ ನಡೆದು ಬಂದಾಗ ಹೊಕ್ಕುಳಲ್ಲಿ ಹೂವಿದೆಯೇ ಎನ್ನುವಂತಾಗಿತ್ತು.

ನಾಭಿ ಮೇಲಿನಂಗಿಯ ಹುಡುಗಿ ಮರಳಿದೊಡನೆ ಬಂದದ್ದು `ಇವ ಯಾವ ಊರಿನವ... ಈ ಚೆಲುವ~ ಎಂಬಂಥ ಸುಂದರಾಂಗ. ಅವನ ಗುಳಿಕೆನ್ನೆಗಿಂತ ಕಂದು ಬಣ್ಣದ ಟಿ-ಶರ್ಟ್ ಮೇಲಿನ ಕಾಫಿ ಬೀಜವೇ ಚಂದ ಕಂಡಿತ್ತು.

ಮಟಮಟ ಮಧ್ಯಾಹ್ನ ಸೂರ್ಯ ನೆತ್ತಿಗೇರಿದ ಸಮಯವದು. 12.30. ಆಗ ಘೋಷಣೆಯಾಗಿದ್ದು ಕಾಫಿಡೇ ಕಾಫಿಯನ್ನು ಇನ್ನಷ್ಟು ಪ್ರಚಾರಕ್ಕೆ ತರಲು ಪ್ರೊಲೈನ್ನೊಂದಿಗೆ ಯೋಜನೆಯನ್ನು ಆರಂಭಿಸಿದೆ.

ಕಾಫಿ ಬೀಜ, ಕಾಫಿ ಬೆಳೆಯುವ ದೇಶ ಮುಂತಾದ ಥೀಂಗಳಿರುವ ಟಿ-ಶರ್ಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಕಾಫಿ ಕೇವಲ ಬದುಕಿನ ಅವಿಭಾಜ್ಯ ಅಂಗ ಮಾತ್ರವಲ್ಲ, ಅಂಗಿಯೂ ಆಗಲಿ ಎಂಬ ಉದ್ದೇಶ ಇವರದ್ದಂತೆ.

ಅಂಗನೆಯರಂತೂ ಬಿಗಿದಪ್ಪಿದ ಅಂಗಿ ಬಿಟ್ಟರೆ ಮತ್ತೇನೂ ಬೇಡ ಎಂಬಂತೆ ಬಿಡುಬೀಸಾಗಿ ನಡೆದರು.ಈ ನಡುವೆ ಪ್ರೊಲೈನ್ ಸಿಇಒ ಸಂದೀಪ್ ಒಂದರೆ ಗಳಿಗೆ ಮುಖ ತೋರಿಸಿದರು.

ಮೈಕ್ ಹಿಡಿದು ನಿಂತರು. ಯುವಜನಾಂಗದ ಅಭಿರುಚಿಯನ್ನು ಗಮನದಲ್ಲಿರಿಸಿಕೊಂಡು ಈ ಟಿ-ಶರ್ಟ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಆದಷ್ಟು ಕಾಫಿಯ ಕಂಪು, ಮಾಧುರ್ಯ ಹಾಗೂ ಬಣ್ಣಗಳು ಇವುಗಳಲ್ಲಿ ಬಿಂಬಿತವಾಗಲಿವೆ ಎಂದು ಹೇಳಿದರು.

ನನಗೆ ಟಿ-ಶರ್ಟ್ ಎಂದರೆ ತುಂಬಾನೇ ಇಷ್ಟ. ಕಾಫಿ ಡೇಯ ಈ ಟಿ-ಶರ್ಟ್ ತುಂಬಾನೆ ಚನ್ನಾಗಿದೆ. ಹಾಕಿಕೊಳ್ಳುವುದಕ್ಕೂ ಖುಷಿಯಾಗುತ್ತದೆ ಎಂದು ಮಾಡೆಲ್ ಪ್ರಿಯಾಂಕ ಉಲಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.