ದಯಾನಂದ ಸಾಗರ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗವು ಇತ್ತೀಚೆಗಷ್ಟೆ `ಇನ್ಸ್ಪಿರೇಷನ್ 2012~ ಎಂದು ಹೊಸಬರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲೆಲ್ಲೂ ಸಂಭ್ರಮ ತುಂಬಿಕೊಂಡಿತ್ತು.

ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಕೆಂಪು ಮತ್ತು ಗುಲಾಬಿ ಬಣ್ಣ ಹಾಗೂ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಬಿಳಿ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಕಪ್ಪು, ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ನೀಲಿ ಬಣ್ಣದ ಬಟ್ಟೆ ಧರಿಸುವಂತೆ `ಡ್ರೆಸ್ ಕೋಡ್~ ಕೂಡ ವಿಧಿಸಲಾಗಿತ್ತು.

ಕಾರ್ಯಕ್ರಮವನ್ನು ಸ್ವಾಗತ ಗೀತೆ ಮತ್ತು ನೃತ್ಯದಿಂದ ಆರಂಭಿಸಲಾಯಿತು. ಆ ನಂತರ ಅನೇಕ ಕಾರ್ಯಕ್ರಮಗಳು ನಡೆದವು. ಸೋಲೋ ಡ್ಯಾನ್ಸ್, ಸಮೂಹ ನೃತ್ಯ, ಮೈಮ್, ಮ್ಯಾಡ್ ಆಡ್ಸ್ ಮತ್ತು ಫ್ಯಾಷನ್ ಶೋಗಳನ್ನೂ ಹಮ್ಮಿಕೊಳ್ಳಲಾಗಿತ್ತು.

ಎಲ್ಲಾ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಫ್ಯಾಷನ್ ಶೋ ಈ ಬಾರಿಯ ಆಕರ್ಷಣೆ ಎನಿಸಿತ್ತು. ಇದೇ ಮೊದಲ ಬಾರಿಗೆ ಕಾಲೇಜಿನಲ್ಲಿ ಫ್ಯಾಷನ್ ಶೋ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.
ಸಂಜೆ ತುಂಬಾನೇ ಚೆನ್ನಾಗಿತ್ತು. ಎಲ್ಲರೂ ಖುಷಿಯಿಂದ ಕಾಲಕಳೆದವು. ಈ ಕಾರ್ಯಕ್ರಮ ಯೋಜನಾಬದ್ಧವಾಗಿ, ಪರಿಪೂರ್ಣವಾಗಿತ್ತು ಎಂದು ಇಎಸ್ಐನ ಪ್ರಥಮ ವರ್ಷದಲ್ಲಿ ಕಲಿಯುತ್ತಿರುವ ನಮ್ರತಾ ಎ.ಆರ್. ಹೇಳುತ್ತಾರೆ.

ಹುಡುಗಿಯರು ಹುಡುಗರಿಗೆ ಸೀರೆ ಉಡಿಸುವುದು, ಹುಡುಗರಂತೆ ಹುಡುಗಿಯರು ನೃತ್ಯ ಮಾಡುವುದು ಮೊದಲಾದ ವಿನೋದಾವಳಿಗಳು, ಹೊಸಬರು ಎಷ್ಟು ಸಾಧ್ಯವೋ ಅಷ್ಟು ಬೆಲ್ಟ್ನ್ನು ಸಂಗ್ರಹಿಸುವ `ಬೆಲ್ಟ್ ಗೇಮ್~ಗಳು ನಡೆದವು.

ಇದೆಲ್ಲದರ ನಡುವೆ ಹೊಸಬರಿಗಾಗಿ ಪ್ರಶ್ನೋತ್ತರ ವೇಳೆ ನಡೆಯಿತು. `2012 ಮಿಸ್ಟರ್ ಅಂಡ್ ಮಿಸ್ ಕಿರೀಟ~ ಆಶಿಶ್ ಕುಮಾರ್, ಜಯಾ ಸಿನ್ಹಾ ಮುಡಿಗೇರಿತು.
ಇದು ಎಂದೂ ಮರೆಯಲಾಗದ ನೆನಪು.

ಸೀನಿಯರ್ ನಮ್ಮ ಮುಖದಲ್ಲಿ ನಗು ತುಂಬಿಸಿದರು. ಎಲ್ಲರೂ ಈ ಕಾರ್ಯಕ್ರಮವನ್ನು ತಮ್ಮ ಜೀವನವಿಡೀ ನೆನಪಿಟ್ಟುಕೊಳ್ಳುವಂತದ್ದು ಎಂದು ಜಯಾ ಹೇಳಿದರು.ನಟಿ ರಾಧಿಕಾ ಗಾಂಧಿ, ಆರ್ಜೆ ರಾಜಾ ಈ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ಹೆಚ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.