ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಕ್‌ವಾಲಾನ ಬಿಸ್ಕಿಟ್ ಸಂತೆ

Last Updated 21 ಜನವರಿ 2011, 14:15 IST
ಅಕ್ಷರ ಗಾತ್ರ

ಕೇಕ್‌ಗಳು ಎಲ್ಲರ ಬಾಯಲ್ಲೂ ನೀರೂರಿಸುತ್ತವೆ. ವೈವಿಧ್ಯಮಯ ಸ್ವಾದಹೊಂದಿರುವ ಕೇಕ್ ಸವಿಯುವುದೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈ ನಿಟ್ಟಿನಲ್ಲಿ ಕೇಕ್ ಪ್ರಿಯರನ್ನು ಮುದಗೊಳಿಸಲು ಬೆಂಗಳೂರಿಗೆ ಬಂದಿದೆ ‘ಕೇಕ್‌ವಾಲಾ’.

ಹೌದು! ಯುರೋಪಿಯನ್ ತಂತ್ರಜ್ಞಾನ ಬಳಸಿ ಭಾರತೀಯರ ನಾಲಿಗೆಗೆ ರುಚಿಸುವ ಕೇಕ್  ತಯಾರಿಸುವುದು ‘ಕೇಕ್‌ವಾಲಾ’ ಸ್ಪೆಷಾಲಿಟಿ. ಇದರ ಮತ್ತೊಂದು ವಿಶೇಷ ಎಂದರೆ, ಗ್ರಾಹಕರ ಎದುರೇ ಅವರಿಗೆ ಇಷ್ಟವಾದ ಕೇಕ್‌ಗಳನ್ನು ಕ್ಷಣ ಮಾತ್ರದಲ್ಲಿ ತಯಾರಿಸಿ ಕೊಡುವುದು! ಗ್ರಾಹಕರಿಗೆ ಈ ಬಗೆಯ ಸೇವೆ ಒದಗಿಸುವ ದಕ್ಷಿಣ ಭಾರತದ ಮೊತ್ತಮೊದಲ ಬೇಕರಿ ಎಂಬುದು ಇದರ ಹೆಗ್ಗಳಿಕೆ.

ಇಲ್ಲಿ ಸುಮಾರು 150 ಬಗೆಯ ಕೇಕ್‌ಗಳು ಲಭ್ಯ. ಕೇಕ್, ಕುಕ್ಕೀಸ್, ಕೋಲ್ಸ್, ಬಗೆಟ್ಸ್, ಕ್ರೋಸಲ್ಸ್‌ಗಳ ರೂಪದಲ್ಲಿ ಕೇಕ್‌ಗಳು ಮನಸೆಳೆಯಲಿವೆ. ಬೆಲೆ ಕೂಡ ಎಲ್ಲರ ಕೈಗೆಟುಕುವಂತಿದೆ ‘ಕೇಕ್‌ವಾಲಾ’ ವ್ಯವಸ್ಥಾಪಕ ನಿರ್ದೇಶಕ ಗೋಪಾಡಿ ಶ್ರೀನಿವಾಸರಾವ್

ಹೈಟೆಕ್ ಸ್ಪರ್ಶ: ಇಲ್ಲಿ ಎಲ್ಲ ಖುಲ್ಲಂ ಖುಲ್ಲಾ! ಜೊತೆಗೆ ಫುಲ್ ಹೈಟೆಕ್. ಕೇಕ್‌ವಾಲಾನ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸ ಬೆರಗು ಹುಟ್ಟಿಸುವಂತಹದ್ದು. ಗ್ರಾಹಕರು ಕೇಕ್‌ವಾಲಾನ ಇಟಾಲಿಯನ್ ಇಂಟೀರಿಯರ್ ಸೊಬಗು ನೋಡುತ್ತಾ, ಕೇಕ್‌ನ ಸವಿ ಆಸ್ವಾದಿಸಬಹುದು.

ಬೇಕರಿ ಒಳಾಂಗಣದಲ್ಲಿರುವ ಟಿವಿ ಪರದೆ ಸ್ಪರ್ಶಿಸಿ (ಟಚ್ ಸ್ಕ್ರೀನ್) ಗ್ರಾಹಕರು ತಮಗೆ ಇಷ್ಟವಾದ ಕೇಕ್ ಆರ್ಡರ್ ಮಾಡಬಹುದು. ಹತ್ತು ನಿಮಿಷದಲ್ಲಿ ಕೇಕ್ ನಿಮ್ಮ ಅಂಗೈನಲ್ಲಿ ನಗುತ್ತಾ ಕುಳಿತಿರುತ್ತದೆ. ಒಂದೇ ಸೂರಿನಡಿ ತಾಜಾ ಕೇಕ್ ಹಾಗೂ ಎಲ್ಲಾ ಬಗೆಯ ಬೇಕರಿ ಉತ್ಪನ್ನ ಲಭ್ಯ. ಹೋಂ ಮೇಡ್ ಸ್ಪೆಷಾಲಿಟಿಯೂ ಇದೆ.

ಶುಚಿತ್ವಕ್ಕೆ ಪ್ರಾಮುಖ್ಯತೆ: ಕೇಕ್‌ವಾಲಾದಲ್ಲಿ ಗುಣಮಟ್ಟ ಮತ್ತು ರುಚಿಯ ಜತೆಗೆ ಶುಚಿತ್ವಕ್ಕೆ ಹೆಚ್ಚಿನ ಮಹತ್ವ. ಎಲ್ಲ ಉತ್ಪನ್ನಗಳ ತಯಾರಿ ಬಹುತೇಕ ಯಂತ್ರಚಾಲಿತ. ಆಧುನಿಕ ತಂತ್ರಜ್ಞಾನ ಬಳಸಿ ಪ್ರೋಟೀನ್‌ಯುಕ್ತ ಆರೋಗ್ಯ ಪೂರ್ಣ ಕೇಕ್ ಸಿದ್ಧಪಡಿಸಲಾಗುತ್ತದೆ. ಇದಕ್ಕಾಗಿ ಪ್ರಯೋಗಾಲಯ ಮತ್ತು ಸಂಶೋಧನೆ ವ್ಯವಸ್ಥೆ ಇದೆ. 

ಸ್ಥಳ: 26ನೇ ಮೇನ್, 36 ನೇ ಕ್ರಾಸ್,
ಎಸ್.ಎಸ್.ಎಂ.ಆರ್.ವಿ.ಕಾಲೇಜು ಹತ್ತಿರ,
4ನೇ ಟಿ ಬ್ಲಾಕ್,
ಜಯನಗರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT