ತಲೆಗೂದಲು ವ್ಯಕ್ತಿಯ ಸೌಂದರ್ಯವನ್ನು ಇಮ್ಮಡಿ ಮಾಡುತ್ತದೆ. ವ್ಯಕ್ತಿಯ ಆತ್ಮವಿಶ್ವಾಸದ ಪ್ರತೀಕ ಎಂದರೂ ಅತಿಶಯೋಕ್ತಿಯೇನಲ್ಲ. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಕ್ಕೆ ನೆತ್ತಿಯ ಮೇಲೆ ಕೂದಲು ಗಟ್ಟಿಯಾಗಿ ನಿಲ್ಲದೆ ಇನ್ನೂ ಪ್ರಾಯವಿರುವಾಗಲೇ ತಲೆಯನ್ನು ‘ಖಾಲಿ’ ಮಾಡುತ್ತದೆ.

ಹೀಗೆ ತಲೆಗೂದಲು ಉದುರಲು ನಾನಾ ಕಾರಣಗಳಿರಬಹುದು. ಮುಖ್ಯವಾಗಿ ಕ್ಯಾನ್ಸರ್ಗಾಗಿ ಕಿಮೋಥೆರಪಿ ಚಿಕಿತ್ಸೆ ನಡೆದ ನಂತರ ಗಮನಾರ್ಹವಾಗಿ ಕೂದಲು ಉದುರಲು ಆರಂಭವಾಗುತ್ತದೆ. ಕ್ಯಾನ್ಸರ್ ಜೊತೆಗೆ ಬೊಕ್ಕ ತಲೆ ಕೂಡ ರೋಗಿಯನ್ನು ಖಿನ್ನತೆಯನ್ನು ಹೆಚ್ಚಿಸುತ್ತದೆ. ಹೀಗೆ ಖಿನ್ನತೆಯಲ್ಲಿ ದಿನ ದೂಡುವವರಿಗೆ ಹೊಸ ಭರವಸೆ ಮೂಡಿಸಲು ಮುಂದಾಗಿದೆ ನಗರದ ‘ಗ್ರೀನ್ ಟ್ರೆಂಡ್ಸ್’ ಸಲೂನ್.

ಉದ್ಯಾನ ನಗರಿಯಲ್ಲಿ ‘ಟಾಂಗ್ಲ್ಡ್’ ಎಂಬ ‘ತಲೆಕೂದಲು ಕೊಡುಗೆ’ ಎಂಬ ಐದು ದಿನಗಳ ಅಭಿಯಾನವನ್ನು ಸಲೂನ್ ಪ್ರಾರಂಭಿಸಿದೆ. ನಟಿ ನೀತು ಈ ಅಭಿಯಾನದ ಆರಂಭದ ದಿನ ಉಪಸ್ಥಿತರಿದ್ದು ಕೇಶ ದಾನ ಮಾಡಿದರು.

ಕ್ಯಾನ್ಸರ್ ರೋಗಿಗಳು ಸಿಂಥೆಟಿಕ್ ವಿಗ್ಗಳನ್ನು ಬಳಸುವುದು ಸಾಮಾನ್ಯ. ಆದರೆ ವಿಗ್ ಸಹಜವೆನ್ನಿಸುವುದಿಲ್ಲ. ಕೆಲವರಿಗೆ ವಿಗ್ ಹೊಂದುವುದೂ ಇಲ್ಲ. ಹಾಗಾಗಿ ದಾನಿಗಳು ಕೂದಲು ನೀಡಿದರೆ ಬೇರೊಬ್ಬರ ಮುಖದಲ್ಲಿ ನಗು ಮೂಡಿಸಬಹುದು ಎನ್ನುವ ಉದ್ದೇಶದಿಂದ ‘ಗ್ರೀನ್ ಟ್ರೆಂಡ್ಸ್’ನ ಅಭಿಯಾನಕ್ಕೆ ಮುಂದಾಗಿದೆ.

ಮೊದಲು ಚೆನ್ನೈನಲ್ಲಿ ಅಭಿಯಾನಕ್ಕೆ ನಾಂದಿ ಹಾಡಲಾಗಿತ್ತು. ಅಲ್ಲಿ ಸಿಕ್ಕ ಯಶಸ್ಸು ಬೆಂಗಳೂರಿನಲ್ಲಿಯೂ ಈ ಅಭಿಯಾನ ಹಮ್ಮಿಕೊಳ್ಳಲು ಪ್ರೇರಣೆಯಾಯಿತು ಎನ್ನುತ್ತಾರೆ ಸಂಸ್ಥೆಯ ಮಾರುಕಟ್ಟೆ ವಿಭಾಗದ ದೀಪಕ್ ಪ್ರವೀಣ್. ಇನ್ನಷ್ಟು ವಿವರವನ್ನು ಅವರು ‘ಮೆಟ್ರೊ’ಗೆ ನೀಡಿದರು.

ಈ ಅಭಿಯಾನಕ್ಕೆ ಪ್ರೇರಣೆ ಏನು?
ಕ್ಯಾನ್ಸರ್ ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳ ಕೂದಲು ಉದುರುವುದು ಸಹಜ. ಇದು ಅವರ ಆತ್ಮವಿಶ್ವಾಸವನ್ನೇ ಕುಂದಿಸುತ್ತದೆ. ಈ ಜನರ ಮೊಗದಲ್ಲಿ ನಮ್ಮಿಂದ ನಗು ಮೂಡಿಸಲು ಸಾಧ್ಯವಾಗುವಂತಾದರೆ ಅಂತಹ ಪ್ರಯತ್ನಕ್ಕೆ ಏಕೆ ಮುಂದಾಗಬಾರದು ಎನಿಸಿತು. ಹಾಗಾಗಿ ಈ ಪ್ರಯತ್ನಕ್ಕೆ ಮುಂದಾದೆವು.

ಇಂತಹ ಅಭಿಯಾನ ಇದೇ ಮೊದಲೇ?
ಇಲ್ಲ. ಮಹಿಳಾ ಕ್ರಿಶ್ಚಿಯನ್ ಕಾಲೇಜ್ ರೋಟರಾಕ್ಟ್ ಕ್ಲಬ್ (ಆರ್ಸಿ–ಡಬ್ಲ್ಯೂಸಿಸಿ) ಹಾಗೂ ಗ್ರೀನ್ ಟ್ರೆಂಡ್ಸ್ ಯುನಿಸೆಕ್ಸ್ ಹೇರ್ ಅಂಡ್ ಸ್ಟೈಲ್ ಸಲೂನ್ ಜಂಟಿಯಾಗಿ ವಿಶ್ವ ಕ್ಯಾನ್ಸರ್ ದಿನ (ಫೆ.4)ದಂದು ಚೆನ್ನೈನಲ್ಲಿ ಆರಂಭಿಸಿದ್ದೆವು. ಮೂರು ವಾರ ನಡೆಯಿತು. 3000ಕ್ಕೂ ಹೆಚ್ಚು ಜನರು ಕೂದಲನ್ನು ದಾನ ನೀಡಿದ್ದರು. ಮಕ್ಕಳೂ ಕೂಡ ಬೆಂಬಲ ನೀಡಿದ್ದು ವಿಶೇಷ.

ನಗರದಲ್ಲಿ ಈ ಅಭಿಯಾನವನ್ನು ಕಾರ್ಯಗತಗೊಳಿಸಲು ನಿಮ್ಮ ಅಜೆಂಡಾ?
ಯುವಕರಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತೇವೆ. ಕಾಲೇಜಿನಲ್ಲಿ ಈ ರೀತಿಯ ಅರಿವು ಮೂಡಿಸುವುದರಿಂದ ವಿದ್ಯಾರ್ಥಿಗಳು ಕೂದಲು ದಾನ ಮಾಡುತ್ತಾರೆ. ಅದು ಇತರರಿಗೂ ಪ್ರೇರಣೆಯಾಗುತ್ತದೆ. ಈಗಾಗಲೇ ಹಲವು ಕಾಲೇಜುಗಳ ಮತ್ತು ಕಾರ್ಪೊರೇಟ್ ಕಂಪೆನಿಗಳ ಜೊತೆ ಈ ಕುರಿತು ಮಾತನಾಡಿದ್ದೇವೆ. ಕೆಲವು ಕಾಲೇಜುಗಳು ಅಭಿಯಾನದಲ್ಲಿ ಪಾಲ್ಗೊಳ್ಳಲು ಒಪ್ಪಿವೆ.

ಕೂದಲನ್ನು ಸಂಗ್ರಹಿಸಿ ಎಲ್ಲಿಗೆ ಕಳುಹಿಸುತ್ತೀರಿ?
ಅಡ್ಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ಗೆ ಕಳುಹಿಸುತ್ತೇವೆ. ಈ ವರ್ಷದ ಒಳಗೆ 200 ವಿಗ್ಗಳನ್ನು ಕೊಡುಗೆಯಾಗಿ ನೀಡುವ ಗುರಿ ಹೊಂದಿದ್ದೇವೆ.

ಎಷ್ಟು ಇಂಚು ಕೂದಲು ಬೇಕು?
ಕನಿಷ್ಠ 8 ಇಂಚು ಕೂದಲು ಬೇಕಾಗುತ್ತದೆ. ಪ್ರತಿ ದಾನಿ ಸಣ್ಣ ಪ್ರಮಾಣದ ಕೂದಲು ನೀಡಿದರೂ ಸಾಕು. ದಾನಿಗಳ ಕೂದಲಿನ ಸ್ಟೈಲ್ಗೆ ಹಾನಿಯಾಗದ ರಿೀತಿಯಲ್ಲಿ ಕತ್ತರಿಸಲು ಹೇರ್ ಸ್ಟೈಲಿಸ್ಟ್ಗಳಿಗೆ ತರಬೇತಿಯನ್ನು ನೀಡಿದ್ದೇವೆ.

ತಲೆಕೂದಲು ದಾನ ಮಾಡಲು ಇಚ್ಚಿಸುವವರು ತಮ್ಮ ಸಮೀಪದ ‘ಗ್ರೀನ್ ಟ್ರೆಂಡ್ಸ್ ಯುನಿಸೆಕ್ಸ್ ಹೇರ್ ಆಂಡ್ ಸ್ಟೈಲ್ ಸಲೂನ್’ಗೆ ಮಾರ್ಚ್ 10ರೊಳಗೆ ಭೇಟಿ ನೀಡಬಹುದು.

ಮಾಹಿತಿಗೆ: 18004202020 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.