ಕೋರಮಂಗಲದಲ್ಲಿ ‘ಬಂಚಾರಾಮ್’
ಪಶ್ಚಿಮ ಬಂಗಾಳದ ಪ್ರಸಿದ್ಧ ಸಿಹಿ ತಿನಿಸುಗಳ ಮಳಿಗೆ ಬಂಚಾರಾಮ್ ಕೋರಮಂಗಲದ 7ನೇ ಬ್ಲಾಕ್ನಲ್ಲಿ ಕಾರ್ಯಾರಂಭ ಮಾಡಿದೆ.
ನಟಿ ಪ್ರಿಯಾಂಕ ಉಪೇಂದ್ರ ಇದನ್ನು ಉದ್ಘಾಟಿಸಿದರು. ಬಂಚಾರಾಮ್ ಮಳಿಗೆ ಸ್ಥಾಪಕ ಬಂಚಾರಾಮ್ ಘೋಷ್, ಲಯನ್ಸ್ ನಿರ್ದೇಶಕ ಕೃಷ್ಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಅಬರ್ ಕಬೋ, ಪಂಟ್ವಾ, ಮಿಸ್ಟಿ ದೋಯಿ, ಪರೋಟ ಸಮೋಸ, ಕಚೋರಿ, ಗುಲಾಬ್ ಜಾಮೂನು ಮುಂತಾದವು ಇಲ್ಲಿನ ವಿಶೇಷ. 1972ರಲ್ಲಿ ಕೋಲ್ಕತ್ತದಲ್ಲಿ ಬಂಚಾರಾಮ್ ಮಳಿಗೆ ಆರಂಭವಾಗಿತ್ತು.

ಸೌತ್ ಇಂಡೀಸ್ ದಕ್ಷಿಣ ಆಹಾರ
ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವಿಶಿಷ್ಟ ಬಗೆಯ ಅಡುಗೆಗೆ ಹೆಸರಾದ ಸೌತ್ ಇಂಡೀಸ್ನಲ್ಲಿ ಏ. 24ರ ವರೆಗೆ ದಕ್ಷಿಣ ಭಾರತೀಯ ಆಹಾರೋತ್ಸವ ನಡೆಯುತ್ತಿದೆ.

ಈ ಅವಧಿಯಲ್ಲಿ ಮಧ್ಯಾಹ್ನ ಮತ್ತು ರಾತ್ರಿ ರುಚಿಕರ ಭೋಜನದ ಜತೆಗೆ ಶಾವಿಗೆ ಪಾಯಸ, ಹಯಗ್ರೀವ ಮಡ್ಡಿ, ಹಾಲು ಖೋವಾ ಸೇರಿದಂತೆ10 ಬಗೆಯ ಸಿಹಿ ಭಕ್ಷ್ಯಗಳನ್ನು ಮನದಣಿಯೇ ಸವಿಯಬಹುದು.

ಸ್ಥಳ: ಇಂದಿರಾ ನಗರದ 100 ಅಡಿ ರಸ್ತೆ ಮತ್ತು ಇನ್ಫೆಂಟ್ರಿ ರಸ್ತೆ ಶೆವ್ರಾನ್ ಹೋಟೆಲ್.

ಬರಿಟೊ ಗುಳುಂ
ಕೋರಮಂಗಲದ ಲೆಬ್ಮೆಕ್ಸ್ ರೆಸ್ಟೋರೆಂಟ್ನಲ್ಲಿ ಏ 20ರಂದು ಬೃಹತ್ ಬರಿಟೊ ತಿನ್ನುವ ಸ್ಪರ್ಧೆ ನಡೆಯಲಿದೆ.

ಸ್ಥಳ: 487, 5ನೇ ಮುಖ್ಯರಸ್ತೆ, ಜೆ,ಟಿ ಪ್ಲಾಜಾ, ಜ್ಯೋತಿನಿವಾಸ್ ಕಾಲೇಜು ಬಳಿ. ಸಮಯ: ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.