ಬೆಂಗಳೂರಿನ ಕೂಗಳತೆಯ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರವಾಸಿ ಕೇಂದ್ರದ ಜೊತೆಗೆ ಬನ್ನೇರುಘಟ್ಟವು ಧಾರ್ಮಿಕ ಕ್ಷೇತ್ರವಾಗಿ ಸಹ ಹೆಗ್ಗಳಿಕೆಯನ್ನು ಪಡೆದಿದ್ದು ಇಲ್ಲಿಯ ಚಂಪಕಧಾಮಸ್ವಾಮಿ ದೇವಾಲಯ ಸಹಸ್ರಾರು ಭಕ್ತರನ್ನು ಸೆಳೆಯುತ್ತಿದೆ.

ಚಂಪಕಧಾಮಸ್ವಾಮಿ ಜಾತ್ರೆ ಈ ಭಾಗದ ಧಾರ್ಮಿಕ ಉತ್ಸವಗಳಲ್ಲಿ ಅತ್ಯಂತ ಪ್ರಸಿದ್ದಿಯಾಗಿದೆ. ಬೆಂಗಳೂರು, ಕನಕಪುರ, ರಾಮನಗರ, ತಮಿಳುನಾಡಿನ ಹೊಸೂರು ಸೇರಿದಂತೆ ವಿವಿಧ ಭಾಗಗಳಿಂದ ಸಹಸ್ರಾರು ಮಂದಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಚಂಪಕಧಾಮ ಸ್ವಾಮಿ ಜಾತ್ರೆಯಲ್ಲಿ ನೂರಾರು ಮಂದಿ ಮಂಗಳಮುಖಿಯರು ಪಾಲ್ಗೊಳ್ಳುತ್ತಾರೆ. ಇದನ್ನು ಮಂಗಳಮುಖಿಯರ ಜಾತ್ರೆ ಎಂದು ಕರೆಯುತ್ತಾರೆ. ಜಾತ್ರೆಯ ದಿನದಂದು ಬನ್ನೇರುಘಟ್ಟದಿಂದ ಎರಡು ಕಿ.ಮೀ. ದೂರದಲ್ಲಿರುವ ಬೇಗಿಹಳ್ಳಿ ಬೇಗಳಮ್ಮ ದೇವಾಲಯದಲ್ಲಿ ಮಂಗಳಮುಖಿಯರ ಜಾತ್ರೆ ನಡೆಯುತ್ತದೆ.

ಮಂಗಳಮುಖಿಯರು ರೇಷ್ಮೆಸೀರೆಯುಟ್ಟು, ಮುಖಕ್ಕೆ ಹರಿಶಿನ ಹಚ್ಚಿಕೊಂಡು, ಕಾಸಗಲದ ಬೊಟ್ಟಿಟ್ಟುಕೊಂಡು, ಮಲ್ಲಿಗೆ ಹೂವಿನಿಂದ ಅಲಂಕರಿಸಿಕೊಂಡು. ತಮಟೆ, ಚಂಡೆಯ ಸದ್ದಿಗೆ ಹೆಜ್ಜೆ ಹಾಕುತ್ತಾ ಸಾಗುವ ನೂರಾರು ಮಂಗಳಮುಖಿಯರ ಗುಂಪುಗಳನ್ನು ಕಾಣಬಹುದು. ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ಜಾತ್ರೆ ಇಂದು (ಮಾ.22) ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.