ನಗರದಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಸಿನಿಮೋತ್ಸವ ಕುರಿತ ಸಣ್ಣ ಸಣ್ಣ ಮಾಹಿತಿ ಆಸಕ್ತಿಕರ.

*ಚಲನಚಿತ್ರ ಆವಿಷ್ಕಾರವಾಗಿ ಮೂಕಿ ಚಲನಚಿತ್ರಗಳು ಸಿದ್ಧಗೊಂಡು, ಕ್ರಮೇಣ ಸಿನಿಮಾಗಳಿಗೆ ಮಾತು ಸೇರಿಸುವ ಪರಿಪಾಠ ಶುರುವಾದ ನಂತರ 1930ರ ದಶಕದಲ್ಲಿ ಒಂದೇ ಚಿತ್ರಮಂದಿರದಲ್ಲಿ ನಾಲ್ಕೈದು ಚಿತ್ರಗಳನ್ನು ಪ್ರದರ್ಶಿಸುವ ‘ಉತ್ಸವ’ ಪರಿಕಲ್ಪನೆ ಮೂಡಿಬಂತು.
*ಪ್ರಸ್ತುತ ಚಲನ ಚಿತ್ರೋತ್ಸವಗಳನ್ನು ನಡಸದೇ ಇರುವ ದೇಶಗಳೇ ವಿರಳ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ (2013) ವಿಶ್ವದಲ್ಲೀಗ ಸಕ್ರಿಯವಾಗಿರುವ ಚಲನ ಚಿತ್ರೋತ್ಸವಗಳ ಸಂಖ್ಯೆ ಮೂರು ಸಾವಿರ.
*ವೆನಿಸ್ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಈಗಿರುವ ಸಕ್ರಿಯ ಚಿತ್ರೋತ್ಸವಗಳಲ್ಲಿ ಅತ್ಯಂತ ಹಳೆಯದು. ಇದು ಪ್ರಾರಂಭಗೊಂಡಿದ್ದು 1932ರಲ್ಲಿ.
*ಭಾರತದಲ್ಲಿ ಮೊಟ್ಟ ಮೊದಲು ಸಿನಿಮಾ ಪ್ರದರ್ಶನಗೊಂಡ ನಗರ ‘ಮುಂಬೈ’ ಭಾರತದ ಪ್ರಥಮ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಪ್ರಾರಂಭಗೊಂಡಿದ್ದು ಮುಂಬೈ ಮಹಾನಗರದಲ್ಲಿ (1952).
* ಅಮೆರಿಕದ ‘ಸಿಟ್ಟೆ’ ಪಟ್ಟಣದಲ್ಲಿ ನಡೆಯುವ ಚಿತ್ರೋತ್ಸವ ಅತಿ ದೀರ್ಘವಾದುದು. ಇಲ್ಲಿಯ ಚಿತ್ರಮಂದಿರಗಳಲ್ಲಿ 400 ಚಿತ್ರಗಳು ಒಂದು ತಿಂಗಳ ಕಾಲ ಪ್ರದರ್ಶಿತವಾಗುತ್ತವೆ.
*ಅಂತರರಾಷ್ಟ್ರೀಯ ಚಿತ್ರ ನಿರ್ಮಾಣ ಒಕ್ಕೂಟ (ಎಫ್.ಐ.ಎ.ಪಿ.ಎಫ್.)ದಿಂದ ಮಾನ್ಯತೆ ಪಡೆದಿರುವ ಭಾರತದ ಏಕೈಕ ಸ್ಪರ್ಧಾತ್ಮಕ ಚಲನಚಿತ್ರೋತ್ಸವ ಗೋವಾದಲ್ಲಿ ಭಾರತ ಸರ್ಕಾರ ಏರ್ಪಡಿಸುವ ‘ಇಫಿ’ (ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವ) ಚಲನ ಚಿತ್ರೋತ್ಸವ.
*ಬೆಂಗಳೂರಿನಲ್ಲಿ ಪ್ರಥಮ ಅಂತರರಾಷ್ಟ್ರೀಯ ಚಿತ್ರೋತ್ಸವ ‘ಫಿಲಿಮೋತ್ಸವ’ ನಡೆದದ್ದು 1980ರಲ್ಲಿ. ಇದನ್ನು ಉದ್ಘಾಟಿಸಿದವರು ಖ್ಯಾತ ಅಭಿನೇತ್ರಿ ದೇವಿಕಾ ರಾಣಿ ರೋರಿಚ್.
*ಜಗತ್ತಿನಲ್ಲಿ ‘ಬಿಗ್‌ತ್ರಿ’ ಎಂದು ಪರಿಗಣಿಸಲಾಗಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳೆಂದರೆ ಕಾನ್, ಬರ್ಲಿನ್ ಹಾಗೂ ವೆನಿಸ್ ಚಿತ್ರೋತ್ಸವಗಳು.
*ಆಸ್ಟ್ರೇಲಿಯಾದಲ್ಲಿ ಆರಂಭವಾದ ಮೊದಲ ಹಾಗೂ ನಿರಂತರವಾಗಿ ನಡೆಯುತ್ತಿರುವ ಉತ್ಸವ ಮೇಲ್ಬರ್ನ್ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ (1952).
*ಭಾರತದಲ್ಲಿ ಪ್ರಾರಂಭಕ್ಕೆ ‘ಇಫಿ’ (ಅಂತರರಾಷ್ಟ್ರೀಯ ಚಿತ್ರೋತ್ಸವ) ಹಾಗೂ ಫಿಲ್ಮೋತ್ಸವಗಳು ಪ್ರತ್ಯೇಕವಾಗಿ ನಡೆಯುತ್ತಿದ್ದವು. 1975ರಿಂದೀಚೆಗೆ ಇವರೆಡೂ ಒಂದಾಗಿ ‘ಭಾರತ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ’ ಎಂಬ ಹೆಸರಿನಲ್ಲಿ ಪ್ರತಿವರ್ಷ ಏರ್ಪಾಡಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.