ಅತಿ ಚಿಕ್ಕ ವಯಸ್ಸಿಗೇ ಜಾದೂಕಲೆಯತ್ತ ಆಕರ್ಷಿತರಾದ ಉಡುಪಿ ಮೂಲದ ನಕುಲ್ ಶೆಣೈ ಅವರು ‘ಮೈಂಡ್ ರೀಡಿಂಗ್’ನಲ್ಲಿ ಸಿದ್ಧಹಸ್ತರು. ತಮ್ಮ ಹದಿನೈದನೇ ವಯಸ್ಸಿಗೇ ಮೊದಲ ಜಾದೂ ಪ್ರದರ್ಶನ ನೀಡಿದ ನಕುಲ್, ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸುಮಾರು 14 ವರ್ಷಗಳ ಕಾಲ ಐಟಿ ಉದ್ಯೋಗದೊಟ್ಟಿಗೆ ಮ್ಯಾಜಿಕ್ ಕಲೆಯನ್ನೂ ಬೆಳೆಸಿಕೊಂಡು ಬಂದರು.

ಇದೀಗ ಜಾದೂ ಕ್ಷೇತ್ರದಲ್ಲಿನ ತಮ್ಮ ಇಪ್ಪತ್ತು ವರ್ಷಗಳ ಅನುಭವದೊಂದಿಗೆ ಮ್ಯಾಜಿಕ್ ಕಲೆಗೆ ಅಗತ್ಯವಾದ ಕೆಲವು ಮೂಲ ಅಂಶಗಳನ್ನು ತಮ್ಮ ‘ಸ್ಮಾರ್ಟ್ ಕೋರ್ಸ್ ಇನ್ ಮ್ಯಾಜಿಕ್’ ಎಂಬ ಪುಸ್ತಕದ ಮೂಲಕ ತೆರೆದಿಟ್ಟಿದ್ದಾರೆ.

** ನಿಮ್ಮ ಪ್ರಕಾರ ‘ಮ್ಯಾಜಿಕ್’ ಎಂದರೆ ಏನು?
ಮ್ಯಾಜಿಕ್ ಎಂದರೆ ಮ್ಯಾಜಿಕ್. ಅದಕ್ಕೆ ಬೇರೆ ಪದವೇ ಇಲ್ಲ. ಅದರ ಅರ್ಥ ಅದರಲ್ಲೇ ಇದೆ. ಕಲೆಯ ಉತ್ತುಂಗ ಮಟ್ಟವನ್ನೇ ‘ಜಾದೂ’ ಎನ್ನಬಹುದು. ಕಲ್ಪನಾತೀತ, ಮನರಂಜನೆ, ತಂತ್ರಗಳಿಂದ ನೋಡುಗರಲ್ಲಿ ಅಚ್ಚರಿಯ ಅನುಭವ ಮೂಡಿಸುವುದೇ ಈ ಜಾದೂ ಕಲೆ.

**ಜಾದೂಕಲೆಗೆ ಬರಲು ನಿಮಗೆ ಸ್ಫೂರ್ತಿ ಏನು?
ನಾನು ಐದು ವರ್ಷದವನಿದ್ದಾಗ ‘ಮಾಂಡ್ರೇಕ್ ದಿ ಮೆಜೀಷಿಯನ್’ ಕಾಮಿಕ್ ಪುಸ್ತಕದ ಚಿತ್ರಗಳನ್ನು ನೋಡುತ್ತಿದ್ದೆ. ಆಗಿನಿಂದಲೇ ನನ್ನಲ್ಲಿ ಮ್ಯಾಜಿಕ್ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು. ಎಂಟನೇ ವಯಸ್ಸಿನಿಂದ ಮ್ಯಾಜಿಕ್ ಕಲಿಯಲು ಆರಂಭಿಸಿದೆ. ‘ಮ್ಯಾಜಿಕ್ ಕಿಡ್ಸ್’ನಂಥ ಪುಸ್ತಕಗಳನ್ನು ಓದುತ್ತಿದ್ದೆ. ಅದೇ ನನಗೆ ಸ್ಫೂರ್ತಿ. ಹದಿನೈದು ವರ್ಷದವನಿದ್ದಾಗ ಉಡುಪಿಯಲ್ಲಿ ಮೊದಲ ಮ್ಯಾಜಿಕ್ ಶೋ ನೀಡಿದ್ದು.

**ನಿಮ್ಮ ಜಾದೂಕಲೆಗೆ ಮನೆಯವರ ಬೆಂಬಲ ಹೇಗಿತ್ತು?
ಎಲ್ಲರೂ ಪ್ರೋತ್ಸಾಹ ಕೊಟ್ಟರು. ತಂದೆ ಬಾಂಬೆಯಿಂದ ‘ಮ್ಯಾಜಿಕ್ ಕಿಟ್’ ತಂದುಕೊಡುತ್ತಿದ್ದರು. ಅದರಲ್ಲಿ ‘ಲರ್ನ್ ಮ್ಯಾಜಿಕ್’ ಎಂಬ ಪುಸ್ತಕವಿತ್ತು. ಅದನ್ನು ಯಾವಾಗಲೂ ಓದುತ್ತಿದ್ದೆ. ಈ ಎಲ್ಲಾ ಅಂಶಗಳೇ ನನ್ನನ್ನು ಜಾದೂಗಾರನನ್ನಾಗಿ ರೂಪಿಸಿದ್ದು.

**‘ಸ್ಮಾರ್ಟ್ ಕೋರ್ಸ್ ಇನ್ ಮ್ಯಾಜಿಕ್’ ಬರೆಯಲು ಪ್ರೇರಣೆ ಏನು?
ನಾನು ಚಿಕ್ಕವನಾಗಿದ್ದಾಗ ಮ್ಯಾಜಿಕ್ ಬಗ್ಗೆ ಅಷ್ಟು ಪುಸ್ತಕಗಳಿರಲಿಲ್ಲ. ಮುಂಬೈನ ಅಂಗಡಿಯೊಂದ ರಿಂದ ಅಪ್ಪ ಪುಸ್ತಕ ತಂದುಕೊಡುತ್ತಿದ್ದರು. ಈಗ ಮ್ಯಾಜಿಕ್ ಕುರಿತು ತುಂಬಾ ಪುಸ್ತಕಗಳಿವೆ. ಅದರಲ್ಲಿ ಮ್ಯಾಜಿಕ್ ಎಂದರೇನು, ಅದರ ರಹಸ್ಯ, ತಂತ್ರಗಳು, ಹೇಗೆ ಮಾಡಬೇಕು ಎಂಬ ಕುರಿತು ಮಾಹಿತಿ ಇರುತ್ತವೆ. ಜಾದೂ ಅನ್ನು ಒಂದು ತಂತ್ರದಂತೆ ನೋಡುವ ಪುಸ್ತಕಗಳಿವೆ. ಆದರೆ ಜಾದೂಕಲೆಗೆ ಮುಖ್ಯವಾಗಿ ಬೇಕಿರುವ ಕೆಲ ಮೂಲ ಅಂಶಗಳ ಬಗ್ಗೆ ಪುಸ್ತಕಗಳಿಲ್ಲ. ಜೊತೆಗೆ ಜಾದೂ ಕಲೆಯನ್ನು ಒಂದು ಒಳ್ಳೆಯ ಪ್ರದರ್ಶನದಂತೆ ತೋರಲು ಇರುವ ಕಲೆಯ ಬಗ್ಗೆ ಇಲ್ಲ. ಇದೇ ಕೊರತೆಯನ್ನೇ ಮೂಲವಾಗಿಟ್ಟುಕೊಂಡು ಪ್ರಾಯೋಗಿಕ ಕಲಿಕೆಯಂತೆ ಕೆಲಸ ಮಾಡುವ ಪುಸ್ತಕ ಬರೆಯುವಲ್ಲಿ ತೊಡಗಿಕೊಂಡೆ. ಅದಕ್ಕೇ ಈ ಪುಸ್ತಕಕ್ಕೆ ‘ಸ್ಮಾರ್ಟ್ ಕೋರ್ಸ್ ಇನ್ ಮ್ಯಾಜಿಕ್’ ಎಂದು ಹೆಸರಿಟ್ಟೆ.

**ಈ ಪುಸ್ತಕದ ಉದ್ದೇಶವೇನು?
ಇದು ಸಾಮಾನ್ಯ ಜನರಿಗೆ, ಜಾದೂಕಲೆ ಕಲಿಯಬೇಕು ಎಂದುಕೊಂಡವರಿಗೆ ಹಾಗೂ ಜಾದೂ ಅಭ್ಯಾಸನಿರತರಿಗೆ ತುಂಬಾ ಅನುಕೂಲ. ಸಾಮಾನ್ಯರಿಗೂ ಮ್ಯಾಜಿಕ್ ಎಂದರೆ ಏನು ಎನ್ನುವುದು ತಿಳಿದಿರಬೇಕು. ಅದೇ ಈ ಪುಸ್ತಕದ ಉದ್ದೇಶ.

**‘ಸ್ಮಾರ್ಟ್ ಕೋರ್ಸ್ ಇನ್ ಮ್ಯಾಜಿಕ್’ ಪುಸ್ತಕದ ಕುರಿತು...
ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡ್ದೇನೆ. ಮ್ಯಾಜಿಕ್ ಕಲೆಯ ಒಟ್ಟಾರೆ ನೋಟವನ್ನು ಒಳಗೊಂಡಿದೆ. ಹದಿನೈದು ಅಧ್ಯಾಯ ಗಳಿವೆ. ಭಾರತೀಯ ಮ್ಯಾಜಿಕ್ ಕ್ಷೇತ್ರದಲ್ಲಿ ಮ್ಯಾಜಿಕ್ ಕುರಿತ ಪುಸ್ತಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಕಡಿಮೆ. ಆದ್ದರಿಂದ ಈ ಪುಸ್ತಕವನ್ನು ವಿಶ್ವದ ಅತಿ ಪ್ರಸಿದ್ಧ ಜಾದೂಗಾರರೊಂದಿಗೆ ಸೇರಿ ಹೊರತಂದೆ. ಪುಸ್ತಕದ ಪ್ರಸ್ತಾವವನ್ನು ಮ್ಯಾಜಿಕ್‌ನ ಇತಿಹಾಸ ತಜ್ಞ ಡಾ.ಪೀಟರ್ ಲೆಮೆಂಟ್ ಬರೆದಿದ್ದಾರೆ. ಮೈಕಲ್ ವೆಬರ್ ಅವರ ಪರಿಚಯ ನುಡಿ ಇಲ್ಲಿದೆ. ‘ಹಾರ್ಪರ್ ಕಾಲಿನ್ಸ್’ ಈ ಪುಸ್ತಕವನ್ನು ಪ್ರಕಟಿಸಿದೆ.

**ವಿದೇಶದಲ್ಲಿ ಹಾಗೂ ಭಾರತದಲ್ಲಿ ಜಾದೂ ಕಲೆಗಿರುವ ಮಾನ್ಯತೆ ಏನು?
ಇಲ್ಲಿ ಕಳಪೆ, ಉತ್ತಮ ಎನ್ನುವಂತೆ ಅಲ್ಲಿಯೂ ಇರುತ್ತದೆ. ಆದರೆ ಭಾರತೀಯರಲ್ಲಿ ಒಂದು ತಪ್ಪು ಕಲ್ಪನೆ ಹಾಗೇ ಉಳಿದುಕೊಂಡಿದೆ. ಮ್ಯಾಜಿಕ್ ಅನ್ನು ಮಾಟ–ಮಂತ್ರ ಎಂದು ತಿಳಿದುಕೊಂಡವರಲ್ಲಿ ಶಿಕ್ಷಿತರೂ ಇದ್ದಾರೆ. ವಿದೇಶಗಳಲ್ಲಿ ಜಾದೂ ಅನ್ನು ಕಲೆ ಎಂಬಂತೆ ಆಸ್ವಾದಿಸುತ್ತಾರೆ, ಹೊಗಳುತ್ತಾರೆ.

**ಮ್ಯಾಜಿಕ್‌ನಿಂದ ವೈಯಕ್ತಿಕವಾಗಿ ಕಲಿತದ್ದು?
ನಾನು ಮೊದಲ ಮ್ಯಾಜಿಕ್ ಶೋ ನೀಡುವ ಮುನ್ನ ವೇದಿಕೆ ಹತ್ತಿದವನೇ ಅಲ್ಲ. ಹಿಂದೆ ಎರಡು ಬಾರಿ ವೇದಿಕೆವರೆಗೂ ಹೋಗಿ ವಾಪಸ್ ಓಡಿ ಬಂದಿದ್ದೆ. ಈ ಕಲೆ ನನ್ನಲ್ಲಿ ಆತ್ಮವಿಶ್ವಾಸ ತುಂಬಿತು. ಈಗ ಐನೂರಕ್ಕೂ ಹೆಚ್ಚು ಕಾರ್ಪೊರೇಟ್ ಶೋಗಳನ್ನು ನೀಡಿದ್ದೇನೆ. ಅಮೆರಿಕ, ಯುರೋಪ್ ಹೀಗೆ ವಿದೇಶಗಳಲ್ಲೂ ಶೋ ನೀಡಿದ್ದೇನೆ. ಈ ಕ್ಷೇತ್ರದಲ್ಲಿನ ಗಣ್ಯರ ಪರಿಚಯವೂ ಆಯಿತು.

**ಮುಂಬರುವ ಜಾದೂಗಾರರಿಗೆ ನಿಮ್ಮ ಸಲಹೆ?
ಈ ಕ್ಷೇತ್ರಕ್ಕೆ ಬಂದು ಕೆಲವು ವರ್ಷಗಳ ನಂತರ ಬಂದ ಉದ್ದೇಶವನ್ನೇ ಮರೆತು ಯಾಂತ್ರಿಕವಾಗಿಬಿಡುತ್ತೇವೆ. ಹಾಗಾಗಬಾರದು ಎನ್ನುವುದೇ ನನ್ನ ಸಲಹೆ. ಅಚ್ಚರಿಯ ಅನುಭವವನ್ನು ನೋಡುಗರಿಗೆ ನೀಡಬೇಕು. ಅದು ಜಾದೂಕಲೆಯ ಮೂಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.