* ‘ಬಾಹುಬಲಿ’ ಯಶಸ್ಸನ್ನು ಹೇಗೆ ಸ್ವೀಕರಿಸಿದಿರಿ?
ಯಶಸ್ಸು ಖಂಡಿತಾ ಬೇಕು. ಜನಗಳ ಮೆಚ್ಚುಗೆ-ಚಪ್ಪಾಳೆ ಮತ್ತಷ್ಟು ಸಿನಿಮಾ ಮಾಡಬೇಕೆನಿಸುವಷ್ಟು ಉತ್ಸಾಹ ತರಿಸುತ್ತದೆ. ಆದರೆ ನಾನು ತುಂಬಾ ಸ್ವಾರ್ಥಿ. ಇನ್ನೊಬ್ಬರ ಸಿನಿಮಾ ನೋಡುವಾಗ ನನಗೆ ಹೊಟ್ಟೆಕಿಚ್ಚೆನಿಸುತ್ತದೆ. ನನಗೆ ಹೊಳೆಯದ ದೃಶ್ಯಗಳನ್ನು ಇನ್ನೊಬ್ಬರು ಮಾಡಿದ್ದನ್ನು ನೋಡಿದಾಗ, ನನ್ನ ಮಿತಿ ಅರ್ಥವಾಗುತ್ತದೆ.

‘ಬಾಹುಬಲಿ’ ಸಿನಿಮಾ ಇಷ್ಟೊಂದು ದೊಡ್ಡ ಸಿನಿಮಾವಾಗುತ್ತದೆ ಎಂದುಕೊಂಡಿರಲಿಲ್ಲ. ‘ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ’ ಎಂದು ನಾವು ಕೇಳಲಿಲ್ಲ. ಪ್ರೇಕ್ಷಕರು ಹುಟ್ಟು ಹಾಕಿದ್ದು. ನಾವು ಅಂದುಕೊಂಡಿರದ ಎಷ್ಟೋ ವಿಷಯಗಳನ್ನು ಜನರೇ ಮಾತನಾಡ ತೊಡಗಿದರು. ಈ ಯಶಸ್ಸು ಪ್ರೇಕ್ಷಕರದು.

* ಹಾಲಿವುಡ್‍ನ ಬ್ಯಾಟ್‍ಮ್ಯಾನ್, ಸ್ಪೈಡರ್ ಮ್ಯಾನ್‌ನಂತೆ ಬಾಹುಬಲಿ ಭಾರತದ ಸೂಪರ್ ಹೀರೊ ಪ್ರತಿಮೆಯಾಗಿದೆಯೇ?
ಈ ಸಾಧ್ಯತೆ ಇತ್ತು. ಇದೇ ಸಿನಿಮಾ ಅಮೆರಿಕದಲ್ಲಿ ಮಾಡಿದ್ದರೆ, ಸಿನಿಮಾದ ಮೊದಲೇ ಟೀ-ಶರ್ಟ್, ಬಾಹುಬಲಿ ಗೊಂಬೆ, ಶೂ ಇತ್ಯಾದಿಗಳ ದೊಡ್ಡದೊಂದು ಮಾರುಕಟ್ಟೆ ಸೃಷ್ಟಿಯಾಗಿರುತ್ತಿತ್ತು. ಅಷ್ಟು ಬೃಹತ್ ಯೋಜನೆ ರೂಪಿಸಲು ಇಲ್ಲಿ ಯಾರೂ ಮುಂದೆ ಬರುವುದಿಲ್ಲ. ಸೂಪರ್ ಹೀರೊ ಸಿನಿಮಾಗೆ ಬೇಕಾದ ಮಾರುಕಟ್ಟೆ ಮತ್ತು ಪ್ರಚಾರ ತಂತ್ರ ನಮ್ಮಲ್ಲಿ ವ್ಯವಸ್ಥಿತವಾಗಿಲ್ಲ ಅಥವಾ ಇನ್ನೂ ಸಿದ್ಧವಾಗಿಲ್ಲ.

* ನಟ ಪ್ರಭಾಸ್ ನಿಮ್ಮ ನೆಚ್ಚಿನ ಆಯ್ಕೆಯೇ?
ಹೀ ಈಸ್ ಮೈ ಡಾರ್ಲಿಂಗ್. ಬಾಹುಬಲಿ ಕಥೆ ಹೊಳೆಯುವುದಕ್ಕಿಂತ ಮುಂಚೆಯೇ ‘ಛತ್ರಪತಿ’ ಸಮಯದಲ್ಲಿ ಯುದ್ಧದ ಹಿನ್ನೆಲೆ ಹೊಂದಿರುವ ಸಿನಿಮಾ ಮಾಡುವ ಆಶಯ ಹೊಂದಿದ್ದೇನೆ ಎಂದು ಹೇಳಿದ್ದೆ. ಪ್ರಭಾಸ್ ಕೂಡ ಉತ್ತೇಜಿಸಿದರು. ಪ್ರೇಕ್ಷಕರು ನಮ್ಮಿಬ್ಬರ ಜೋಡಿಯನ್ನು ನೋಡಲು ಇಚ್ಚಿಸುವವರೆಗೂ ಸಿನಿಮಾ ಮಾಡುತ್ತಲೇ ಇರುತ್ತೇವೆ.

* ನಿಮ್ಮ ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ಪ್ರಾಮುಖ್ಯ ಇದೆಯಾದರೂ, ಅತಿರೇಕವಾಗಿ ತೋರಿಸುತ್ತೀರಿ ಎನ್ನುವ ಆರೋಪವಿದೆಯಲ್ಲ...
ವೈಯಕ್ತಿಕವಾಗಿ ನಾನು ಮಹಿಳಾ ವಿರೋಧಿಯೂ ಅಲ್ಲ. ಮಹಿಳಾವಾದಿಯೂ ಅಲ್ಲ. ನನ್ನ ಕಥೆ ಪಾತ್ರವನ್ನು ಹೇಗೆ ಒಪ್ಪುತ್ತದೋ ಹಾಗೆಯೇ ಚಿತ್ರಿಸಲು ಬದ್ಧ. ನನ್ನ ಕಥೆಯ ದೇವಸೇನಾ ಸೇನಾಧಿಪತಿಯ ಬೆರಳನ್ನು ಕತ್ತರಿಸಬೇಕು ಎಂದು ಬೇಡಿದರೆ ಅದನ್ನೇ ಮಾಡಿಸುತ್ತೇನೆ. ಬಾಹುಬಲಿಯ-1ರ ಶಿವುಡು-ಅವಂತಿಕಾ ಪ್ರೇಮಪ್ರಸಂಗ ನನಗೆ ತುಂಬಾ ಇಷ್ಟವಾದ ದೃಶ್ಯ. ಕೆಲವರು ನನ್ನನ್ನು ಮಹಿಳಾ ವಿರೋಧಿ ಎಂದು ಟೀಕಿಸಿದರು. ಆದರೆ ಸಿನಿಮಾ ಒಂದು ಭಾವುಕ ಜಗತ್ತು. ಅದಕ್ಕೆ ಎಷ್ಟು ಬೇಕೋ ಅಷ್ಟನ್ನು ನಾನು ಮಾಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.