ನೈಸ್ ರಸ್ತೆಯಲ್ಲಿ ಚಿತ್ರವೊಂದರ ಹಾಡಿನ ಚಿತ್ರೀಕರಣ ಸಾಗಿತ್ತು. ಸಾಂಪ್ರದಾಯಿಕ ಉಡುಪು ತೊಟ್ಟ ಮುದ್ದು ಮುಖದ ನಿಖಿತಾ ತುಕ್ರಾಲ್ ಸೊಂಟಕ್ಕೆ, ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಿದ್ದರು.

ರಾಮ್ ನಾರಾಯಣ್ ನಿರ್ದೇಶನದ `ಸ್ನೇಹಿತರು~ ಚಿತ್ರದ ಚಿತ್ರೀಕರಣವದು. ಜಾನಪದ ಶೈಲಿಯ ಸಾಂಪ್ರದಾಯಿಕ ಉಡುಪಿನಲ್ಲಿ ನಿಖಿತಾ ಕಾಣಿಸಿಕೊಳ್ಳಲಿದ್ದಾರೆ. ಅವರ ನಗುವಿಗೆ ಜತೆಯಾಗಿದ್ದು ಅವರ ಅಲಂಕಾರ.

`ಚಿತ್ರದ ಸಾಂದರ್ಭಿಕ ಹಾಡಿಗೆ ನಿಖಿತಾ ಹೆಜ್ಜೆ ಹಾಕುತ್ತಲಿದ್ದು, ಈ ಹಾಡಿನಲ್ಲಿ ವಿಜಯ್ ರಾಘವೇಂದ್ರ, ತರುಣ್, ಸೃಜನ್ ಲೋಕೇಶ್, ರವಿಶಂಕರ್ ಇನ್ನಿತರ ನಟರೂ ಬಣ್ಣ ಹಚ್ಚಿದ್ದಾರೆ. ಈ ಹಾಡಿನಿಂದಲೇ ಚಿತ್ರಕ್ಕೊಂದು ತಿರುವು ಸಿಗುವಂತೆ ರೂಪಿಸಲಾಗಿದೆ. ಈ ಹಾಡನ್ನು ವೀಕ್ಷಕರು ಐಟಮ್ ಸಾಂಗ್ ಎಂದು ಪರಿಗಣಿಸಬಾರದು~ ಎನ್ನುತ್ತಾರೆ ನಿರ್ದೇಶಕರು.

‘30x40 ಸೈಟು ಇದ್ದರ....~ ಎಂದು ಶುರುವಾಗುವ ಹಾಡಿನ ಸಾಲುಗಳನ್ನು ಶ್ಯಾಮ್ ಬರೆದಿದ್ದ, ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ.

`ನೈಸ್ ರಸ್ತೆಯಲ್ಲಿ ಹಾಡಿನ ಚಿತ್ರೀಕರಣ ಮಾಡುತ್ತಿದ್ದೇವೆ. ಸುತ್ತಲೂ ಒಂದೇ ಎಂಜಿನ್ ಹೊಂದಿರುವ 20 ಟ್ರ್ಯಾಕ್ಟರ್‌ಗಳನ್ನು ಜೋಡಿಸಿ ಅವನ್ನು ಕಣ್ಣುಕೋರೈಸುವಂತೆ ಅಲಂಕರಿಸಲಾಗಿದೆ. ರೈಲು ಬೋಗಿಗಳಂತೆ ಅವುಗಳನ್ನು ಜೋಡಿಸಲಾಗಿದೆ.

ಕೊರಿಯೋಗ್ರಫರ್ ನಾಗೇಶ್ ತುಂಬಾ ಅಚ್ಚುಕಟ್ಟಾಗಿ ಈ ಕೆಲಸವನ್ನು ನಿಭಾಯಿಸಿದ್ದಾರೆ~ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ರಾಮ್‌ನಾರಾಯಣ್.

`ನಿಖಿತಾ ಕೂಡ ಈ ಹಾಡಿನಲ್ಲಿ ತುಂಬಾ ತನ್ಮಯರಾಗಿ ನೃತ್ಯ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಸೆಟ್‌ಗೆ ಹಾಜರಾಗುತ್ತಾರೆ. ಅವರೊಂದಿಗಿನ ಒಡನಾಟ ತುಂಬಾ ಆತ್ಮೀಯ ಎನಿಸುತ್ತದೆ~ ಎಂದು ಮೆಚ್ಚುಗೆ ಸೂಚಿಸಲು ಅವರು ಮರೆಯಲಿಲ್ಲ.

`ಸ್ನೇಹಕ್ಕೆ ಹೆಚ್ಚು ಒತ್ತು ಕೊಟ್ಟು ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು, ಹಲವರ ಜೀವನಾನುಭವಗಳನ್ನು ನಿರ್ದೇಶಕರು ರಸವತ್ತಾಗಿ ಬಳಸಿಕೊಂಡಿದ್ದಾರೆ~ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಸೌಂದರ್ಯ ಜಗದೀಶ್.

`ಈ ಚಿತ್ರದಲ್ಲಿ ನಟ ದರ್ಶನ್ ಕೂಡ ಬಂದು ಹೋಗಲಿದ್ದಾರೆ. ಅವರು ಬಂದು ಹೋಗುವ ಸನ್ನಿವೇಶವನ್ನು ವೀಕ್ಷಕರು ತೆರೆಯ ಮೇಲೆಯೇ ನೋಡಬೇಕೆಂಬುದು ನಮ್ಮ ಬಯಕೆ. ಹಾಗಾಗಿ ಅದನ್ನು ನಿಗೂಢವಾಗಿಡಲಾಗಿದೆ~ ಎಂದೂ ಜಗದೀಶ್ ಮಾತು ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.