ಭುರಮಲ್ ರಜ್ಮಲ್ ಸುರಾನಾ ಅವರ ಆಭರಣಗಳ ಪ್ರದರ್ಶನ ಒಬೆರಾಯ್ ಹೋಟೆಲ್ನಲ್ಲಿ ನಡೆಯಿತು. ಪ್ರದರ್ಶನದಲ್ಲಿ ಜೇಡ ಮತ್ತು ವಜ್ರಾಭರಣಗಳ ಸಂಗ್ರಹ ವಿಶೇಷವಾಗಿತ್ತು. ಚಿನ್ನಾಭರಣಗಳು ಜೈಪುರದ ಅನನ್ಯ ಕರಕುಶಲ ಪರಂಪರೆಯನ್ನು ಪ್ರತಿನಿಧಿಸುವಂತೆ ಇತ್ತು. ಜೇಡ, ಕುಂದನ್, ಮೀನಾಕರಿ ವಿನ್ಯಾಸದ ಆಭರಣಗಳ ಸಂಗ್ರಹವನ್ನು ಮಹಿಳೆಯರು ಮೆಚ್ಚಿದರು.

ನೆಕ್ಲೇಸ್, ಕಿವಿಒಲೆ, ಬ್ರೇಸ್ಲೆಟ್ಗಳು, ಟಿಕ್ಕಾ, ತಲೆಯ ಪಟ್ಟಿ ಮತ್ತು ತೋಳು ಬಂಧಿಯ ವಿಶೇಷ ವಿನ್ಯಾಸದ ಆಭರಣಗಳು ಇದ್ದವು. ಪಚ್ಚೆ, ಮುತ್ತು, ವಜ್ರ, ನೀಲಿ ಮಣಿಯಂಥ ವಿಶೇಷ ಆಭರಣಗಳು ಗ್ರಾಹಕರ ಮನ ಸೆಳೆದವು. ಜೈಪುರದ ರಾಜಮನೆತನದ ಪಾರಂಪರಿಕ ಒಡವೆಗಳ ರೂಪದಂತೆ ಆಭರಣ ವಿನ್ಯಾಸಗೊಂಡಿದ್ದವು. ಮಹಿಳೆಯರಿಗಷ್ಟೆ ಅಲ್ಲದೆ ಪುರುಷರಿಗಾಗಿ ಸಿದ್ಧಪಡಿಸಿದ್ದ ವಿಶೇಷ ಆಭರಣಗಳೂ ಪ್ರದರ್ಶನಗೊಂಡವು.

ಸಾಂಪ್ರದಾಯಿಕ ಆಭರಣಗಳಾದ ಕಿಲಂಗಿ (ವರನ ಪೇಟಕ್ಕೆ ತೊಡಿಸುವ ಆಭರಣ), ವಜ್ರದ ಪೊಲ್ಕಿ, ಮುತ್ತುಗಳ ಆಭರಣ ಮತ್ತು ವೈವಿಧ್ಯಮಯ ಹರಳುಗಳು ಹಾಗೂ ಅಮೂಲ್ಯ ಕಲ್ಲುಗಳ ಆಭರಣ ಸಂಗ್ರಹವಿತ್ತು. ಅದರಲ್ಲಿ ವಜ್ರ ಹಾಗೂ ಪಚ್ಚೆ ಆಭರಣದಲ್ಲಿ ವಿಶೇಷ ಸಂಗ್ರಹವಿತ್ತು. ಬೆಲೆ ಕೊಂಚ ಹೆಚ್ಚಾದರೂ ಕರಕುಶಲ ಕುಸುರಿ ಕೆಲಸವಿದ್ದ ಪಾರಂಪರಿಕ ಆಭರಣಗಳನ್ನು ಆಭರಣ ಪ್ರಿಯರು ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.