`ಕಿರಾಣಿ ಅಂಗಡಿಯಲ್ಲಿ ಕೊಂಡಿದ್ದು ಅರ್ಧ ಲೀಟರ್ ಹಾಲು ಮತ್ತು ಒಂದು ಕೆ.ಜಿ. ಟೊಮೆಟೊ. ಕವರ್ ಬೇಕು ಎಂದಿದ್ದಕ್ಕೆ ಮತ್ತೆರಡು ರೂಪಾಯಿ ಎಕ್ಸ್‌ಟ್ರಾ ಚಾರ್ಜ್ ಮಾಡೋದೆ~ ಎಂದು ವಯೋವೃದ್ಧರೊಬ್ಬರು ಹುಬ್ಬೇರಿಸಿದ್ದರು.

ರಸ್ತೆ ಕೊನೆಯ ಗೂಡಂಗಡಿಯೇ ಆಗಲಿ ಪ್ರತಿಷ್ಠಿತ ಮಾಲ್‌ಗಳೇ ಆಗಲಿ, ಪ್ಲಾಸ್ಟಿಕ್ ಕವರ್‌ಗಳು ಉಚಿತವಾಗಿ ಸಿಗುತ್ತಿಲ್ಲ. 2ರಿಂದ 7 ರೂಪಾಯಿ ತೆರಲೇಬೇಕು. ಪರಿಸರ ಸ್ನೇಹಿ ಉತ್ಪನ್ನಗಳಾದ ಪೇಪರ್ ಬ್ಯಾಗ್‌ಗಳನ್ನೇ ಬಳಸಿ ಎಂಬುದು ಇದರ ಹಿಂದಿರುವ ಉದ್ದೇಶ.

ಆದರೂ ಪ್ಲಾಸ್ಟಿಕ್ ಉತ್ಪಾದನೆಯನ್ನೇ ನಂಬಿರುವ ನಗರದ 250ಕ್ಕೂ ಅಧಿಕ ಫ್ಯಾಕ್ಟರಿಗಳ 75 ಸಾವಿರಕ್ಕೂ ಹೆಚ್ಚು ಮಂದಿಯ ಅತಂತ್ರ ಬದುಕಿನ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಆ ಕಾರ್ಮಿಕರ ಪರಿಸ್ಥಿತಿ ಹಾಗೂ ಹಾಳೆ ಚೀಲಗಳ ಬಳಕೆ ನೆಪದಲ್ಲಾಗುವ ಮರಗಳ ಮಾರಣಹೋಮದ ಬಗ್ಗೆ ಸಿಕ್ಕ ಮಾಹಿತಿ ಇಷ್ಟು...

2005ರಲ್ಲಿ ಸುಪ್ರೀಂ ಕೋರ್ಟ್ 20 ಮೈಕ್ರಾನ್ ಮೇಲ್ಪಟ್ಟ ಪ್ಲಾಸ್ಟಿಕ್ ಬಳಕೆ ನಿಷೇಧಿಸಿತ್ತು. 2011ರಲ್ಲಿ ಕೈಚೀಲಗಳಾಗಿ (ಕ್ಯಾರಿ ಬ್ಯಾಗ್) ಬಳಸುವ ಕವರ್‌ಗಳು 40 ಮೈಕ್ರಾನ್‌ನದ್ದಾಗಿರಬೇಕು ಎಂದಿತು. ಇಂದು ಸಣ್ಣ ಪುಟ್ಟ ಅಂಗಡಿಗಳಲ್ಲಿ ದಿನಸಿ ಸಾಮಾನಿಗಾಗಿ ಬಳಸುವ ಬಹುತೇಕ ಪ್ಲಾಸ್ಟಿಕ್ ಕೈಚೀಲಗಳು 40 ಮೈಕ್ರಾನ್‌ನದ್ದು. ಬಟ್ಟೆ ಅಂಗಡಿಯಲ್ಲಿ ಕೊಡುವ ಪ್ರಿಂಟೆಡ್ ಪ್ಲಾಸ್ಟಿಕ್‌ಗಳು ಮಾತ್ರ 60ರಿಂದ 80 ಮೈಕ್ರಾನ್‌ದ್ದಾಗಿರುತ್ತದೆ. ಇವೇ ಚೀಲಗಳನ್ನು ಸಾಧ್ಯವಿದ್ದಷ್ಟು ಮರುಬಳಕೆ ಮೂಲಕ ಪರಿಸರ ಹಾನಿಯನ್ನು ಕಡಿಮೆಗೊಳಿಸಬಹುದು.

ಪ್ಲಾಸ್ಟಿಕ್ ನಿಷೇಧಿಸಿ ಎಂದು ಪರಿಸರ ವಾದಿಗಳು ಕೂಗುವ ಮೊದಲು ನಮ್ಮ ಬದುಕಿನ ಬಗ್ಗೆಯೂ ತುಸು ಯೋಚಿಸಬೇಕು ಎನ್ನುತ್ತಾರೆ ಅಲ್ಲಿನ ಕಾರ್ಮಿಕರು. ಇಲ್ಲಿ ಕೆಲಸ ಮಾಡುವ ಬಹುತೇಕರು ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ಬದುಕುತ್ತಿರುವವರು. ಪರಿಸರ ದಿನಾಚರಣೆ ವೇಳೆಗೆ ಪ್ಲಾಸ್ಟಿಕ್ ನಿಷೇಧ ಕುರಿತ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ ಇಲ್ಲಿನ ಬಡ ಜೀವಗಳು ಕಂಪಿಸುತ್ತವೆ. ಏಕಾಏಕಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಬದಲು 40 ಮೈಕ್ರಾನ್‌ನದ್ದೇ ಬಳಸುವ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಒಳಿತಲ್ಲವೇ ಎಂಬುದು ಸಂಘದ ಅಧ್ಯಕ್ಷ ಸುರೇಶ್ ಎತ್ತುವ ಪ್ರಶ್ನೆ.

ಪರಿಸರ ಇಲಾಖೆಯ ಅಧಿಕಾರಿಗಳು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕಾಗದದ ಇಲ್ಲವೇ ಸೆಣಬಿನ ಚೀಲ ತಯಾರಿಸಿ ಎನ್ನುತ್ತಿದ್ದಾರೆ. ಒಂದು ಟನ್ ಪೇಪರ್ ತಯಾರಿಸಲು 24 ಮರಗಳನ್ನು ಕಡಿಯಬೇಕು. ಅದರ ತೊಗಟೆಯನ್ನು ನೀರಿನಲ್ಲಿ ಹಾಕಿ ಕೊಳೆಯಿಸಬೇಕು.

ಇವು ಪ್ಲಾಸ್ಟಿಕ್ ಚೀಲಕ್ಕಿಂತ ಶೇ 70ರಷ್ಟು ಗಾಳಿಯನ್ನು ಹಾಗೂ ಶೇ 50ರಷ್ಟು ನೀರಿನ ಪ್ರಮಾಣವನ್ನು ಕಲುಷಿತಗೊಳಿಸುತ್ತವೆ. ಅರಣ್ಯ ನಾಶಪಡಿಸುವ ಪೇಪರ್ ಬ್ಯಾಗ್ ಬಳಸುವ ಬದಲು ಪ್ಲಾಸ್ಟಿಕ್ ಅನ್ನೇ ಮರುಬಳಕೆ ಮಾಡಬಹುದಲ್ಲವೇ? ಎಂಬುದು ಅವರ ವಾದ.

ಕುರುಕುಲು ಎಣ್ಣೆ ತಿಂಡಿಗಳನ್ನು ಪೇಪರ್ ಚೀಲಗಳಲ್ಲಿ ಸಂರಕ್ಷಿಸಿಡಲು ಸಾಧ್ಯವಿಲ್ಲ, ಅದಕ್ಕೆ ಪ್ಲಾಸ್ಟಿಕ್ ಕವರ್‌ಗಳೇ ಬೇಕು. ಹೀಗಾಗಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡುವ ಯೋಜನೆ ಕೈಬಿಡಲಿ, ಕಾರ್ಮಿಕರ ಬದುಕಿನ ಬಗ್ಗೆಯೂ ಚಿಂತಿಸಲಿ ಎಂಬುದು ಪ್ಲಾಸ್ಟಿಕ್ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಕಾರ್ಮಿಕರ ಅಳಲು.

ನಿಜವಾದ ಬೆಲೆ ಎಷ್ಟು?
13/16 ಇಂಚಿನ ಒಂದು ಪ್ಲಾಸ್ಟಿಕ್ ಕವರ್ 8.2ಗ್ರಾಂ ತೂಗುವುದರಿಂದ ಅದರ ಬೆಲೆ 1.10 ಪೈಸೆ, 16/20 ಇಂಚಿನ ಕವರ್ 13 ಗ್ರಾಂ ತೂಗುವುದರಿಂದ ಅದರ ಬೆಲೆ 1.25 ಪೈಸೆ ಆಗಿರುತ್ತದೆ. ಮೂವತ್ತು ಪೈಸೆಯಿಂದ 1ರೂಪಾಯಿವರೆಗೆ ವ್ಯಾಪಾರಿಗಳು ಲಾಭಾಂಶ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಅದೇ ಕವರ್‌ಗೆ ಮೂರರಿಂದ ಐದು ರೂಪಾಯಿ ಪಡೆದುಕೊಳ್ಳುವುದು ತಪ್ಪು ಎನ್ನುತ್ತಾರೆ ರಾಜ್ಯ ಪ್ಲಾಸ್ಟಿಕ್ ಸಂಘದ ಅಧ್ಯಕ್ಷ ಸುರೇಶ್.

ಪರಿಹಾರ ಏನು?
ಕಸ ವಿಂಗಡಣೆ ಮಾಡದೆ ವಾರಗಟ್ಟಲೇ ರಸ್ತೆ ಬದಿಯಲ್ಲೇ ಸಂಗ್ರಹವಾಗಿದ್ದನ್ನು ನೀವು ಕಂಡಿರಬಹುದು. ಆಗೆಲ್ಲಾ ಕಾಣಿಸುತ್ತಿದ್ದುದ್ದು ಕೇವಲ ಬಿಳಿ ಇಲ್ಲವೇ ಕಪ್ಪು ಬಣ್ಣದ ಪ್ಲಾಸ್ಟಿಕ್‌ಗಳು. ಆಹಾರ ಪದಾರ್ಥಗಳಿಗಿಂತಲೂ ಹೆಚ್ಚಿನ ಮೊತ್ತದ ಪ್ಲಾಸ್ಟಿಕ್ ಕವರ್‌ಗಳು ವಿಲೇವಾರಿ ವೇಳೆಯಲ್ಲಿ ಸಿಗುತ್ತವಂತೆ. ಅದನ್ನು ಎಸೆದು, ಮತ್ತೊಂದು ಕವರ್ ಕೊಳ್ಳುವ ಬದಲು ಅದನ್ನೇ ಮರುಬಳಕೆ ಮಾಡಿ, ಪರಿಸರ ಉಳಿಸಿ. ವಸ್ತ್ರದಂಗಡಿಯಲ್ಲಿ ಕೊಡುವ ಪ್ರಿಂಟೆಡ್ ಪ್ಲಾಸ್ಟಿಕ್‌ಗಳನ್ನೂ ಮರುಬಳಕೆ ಮಾಡಿ, ಮಾಲ್‌ಗಳಿಂದ ದಿನನಿತ್ಯದ ಸಾಮಾನು ತರಲು ಹೋಗುವಾಗ ಅದನ್ನೇ ಕೊಂಡೊಯ್ಯಿರಿ, ಆ ಮೂಲಕ ಹಣವನ್ನೂ ಉಳಿಸಿ ಎಂಬುದು ವ್ಯಾಪಾರಿ ರಾಮ್‌ದಾಸ್ ಅವರ ಸಲಹೆ.

ಮಾಲ್‌ಗಳಲ್ಲಿ ಹೇಗಿದೆ?
ಸುಪ್ರೀಂಕೋರ್ಟ್ ಪ್ಲಾಸ್ಟಿಕ್ ಕೈಚೀಲಗಳಿಗೆ ಅವುಗಳ ತಯಾರಿಕಾ ವೆಚ್ಚವನ್ನು ಗ್ರಾಹಕರಿಂದ ವಸೂಲಿ ಮಾಡಬಹುದು ಎಂಬ ಕಾನೂನು ಜಾರಿಯಾದ ಬಳಿಕ ನಾವೂ ಸಣ್ಣ ಚೀಲಕ್ಕೆ ಎರಡರಿಂದ ಏಳು ರೂಪಾಯಿವರೆಗೆ ದರ ವಿಧಿಸಿದೆವು. ಗ್ರಾಹಕರಿಗೆ ಹೊರೆಯಾಗುವುದು ನಮ್ಮ ಉದ್ದೇಶವಾಗಿರಲಿಲ್ಲ. ಆ ಮೂಲಕವಾದರೂ ಜಾಗೃತಿ ಬೆಳೆಯಲಿ, ಅವರೇ ಕೈಚೀಲ ತರುವಂತಾಗಲಿ ಎಂದುಕೊಂಡಿದ್ದೆವು. ಆರಂಭದ ಕೆಲ ದಿನಗಳಲ್ಲಿ ಹೆಚ್ಚಿನ ಮಂದಿ ಮನೆಯಿಂದಲೇ ಪ್ಲಾಸ್ಟಿಕ್ ಇಲ್ಲವೇ ಸೆಣಬಿನ ಕೈಚೀಲ ಹಿಡಿದು ಬರುತ್ತಿದ್ದರು.

ಆದರೆ ಈಗ ಆ ಸಂಖ್ಯೆ ಕಡಿಮೆಯಾಗಿದೆ. ಒಂದು ಅಂದಾಜಿನ ಪ್ರಕಾರ ನೂರರಲ್ಲಿ ಐದು ಮಂದಿ ಮಾತ್ರ ಕೈಚೀಲ ಹಿಡಿದುಕೊಂಡು ಬರುತ್ತಾರೆ. ಇನ್ನುಳಿದವರು ಹೆಚ್ಚುವರಿ ಹಣತೆತ್ತು ಕೊಳ್ಳುತ್ತಾರೆ, ನಮ್ಮ ಪ್ರಯತ್ನ ಇದರಿಂದ ಕೈಗೂಡಿದಂತಾಗಿಲ್ಲ ಎಂದು ಬೇಸರಿಸುತ್ತಾರೆ ಪ್ರತಿಷ್ಠಿತ ಮಾಲ್ ಒಂದರ ಮಾರ್ಕೆಟಿಂಗ್ ಅಧಿಕಾರಿ ಮೀನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.