ರಿಟೇಲ್ ಉಡುಪು, ಲಗೇಜ್ ಮತ್ತು ಬಿಡಿ ಭಾಗಗಳ ಮಾರಾಟ ಕೇಂದ್ರವಾಗಿರುವ ರಿಲಯನ್ಸ್ ಟ್ರೆಂಡ್ಸ್ ಅಕ್ಟೋಬರ್ 2ರ ವರೆಗೆ ಮಕ್ಕಳಿಗಾಗಿ ಟೂನ್ ಫೆಸ್ಟ್ ನಡೆಸುತ್ತಿದೆ.
ಇದು ಮಕ್ಕಳಿಗೆ ಮೀಸಲಾದ ಉತ್ಸವ.

ಮಕ್ಕಳು ಇಲ್ಲಿ ಪಾಲ್ಗೊಳ್ಳುವ ಮೂಲಕ ವಾರಾಂತ್ಯದಲ್ಲಿ ತಮ್ಮ ನೆಚ್ಚಿನ ಕಾರ್ಟೂನ್ ಪಾತ್ರಗಳಾದ ಸ್ಪೈಡರ್‌ಮ್ಯೋನ್, ಡೋರ್‌ಮನ್, ಪವರ್ ಪಫ್ ಗರ್ಲ್ಸ್, ಬೆಂಟೆನ್ ಮತ್ತು ಛೋಟಾ ಭೀಮ್‌ನನ್ನು ಮಂತ್ರಿ ಮಾಲ್‌ನ ರಿಲಯನ್ಸ್ ಟ್ರೆಂಡ್ಸ್ ಮಳಿಗೆಯಲ್ಲಿ ಭೇಟಿಯಾಗಬಹುದು.

ಈ ಅವಧಿಯಲ್ಲಿ ಮಕ್ಕಳ ಉಡುಪುಗಳ ಖರೀದಿಯಲ್ಲಿ ವಿಶೇಷ ರಿಯಾಯ್ತಿಯೂ ಇದೆ. ಅಲ್ಲದೆ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ, ಡಿಸ್ನಿ ಪ್ರಿನ್ಸೆಸ್ ಮತ್ತು ಪೈರೇಟ್ಸ್ ಮೇಕ್‌ಓವರ್ ಜೋನ್, ಸ್ಟ್ಯಾಂಡ್ ಅಪ್ ಮ್ಯೋಜಿಕ್ ಶೋ, ಲುಕ್-ಎ-ಚುಪ್ಪಿ ಇತ್ಯಾದಿ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮಕ್ಕಳು ರಿಲಯನ್ಸ್ ಟ್ರೆಂಡ್ಸ್‌ನ ಗ್ರಾಹಕ ನೆಲೆಯ ಅವಿಭಾಜ್ಯ ಅಂಗ. ನಾವು ಅವರಿಗಾಗಿ ನವೀನ ಬಗೆಯ ಫ್ಯಾಷನ್ ಶೈಲಿಗಳ ಉಡುಗೆ ತೊಡುಗೆ ನೀಡುತ್ತಿದ್ದೇವೆ. ಟೂನ್ ಫೆಸ್ಟ್ ಮೂಲಕ ಮಕ್ಕಳು ನಮ್ಮ ಮಳಿಗೆಗಳಲ್ಲಿ ವಿನೂತನ ಶಾಪಿಂಗ್ ಅನುಭವ ಪಡೆದುಕೊಳ್ಳಲಿದ್ದಾರೆ.

ಕೇವಲ ರೂ.199 ಆರಂಭಿಕ ಬೆಲೆಗೆ ಮಕ್ಕಳು ತಮ್ಮ ನೆಚ್ಚಿನ ಕಾರ್ಟೂನ್ ಪಾತ್ರಗಳನ್ನು ಒಳಗೊಂಡ ಉಡುಪುಗಳನ್ನು ಇಲ್ಲಿ ಖರೀದಿಸಬಹುದು ಎನ್ನುತ್ತಾರೆ ರಿಲಯನ್ಸ್ ಟ್ರೆಂಡ್ಸ್‌ನ ಸಿಇಒ ಅರುಣ್ ಸರ್‌ದೇಶ್‌ಮುಖ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.