ಬಿಸಿಲ ಝಳ ಹೆಚ್ಚುವ ಹೊತ್ತು. ಸಭಾಂಗಣದಲ್ಲಿದ್ದ ಜನರ ಹಣೆಯಲ್ಲಿ ನೀರಿಳಿಯುತ್ತಿದ್ದರೂ, ಬಕೆಟ್ ಹಿಡಿದು ನೀರು ಉಳಿಸುವ ತವಕ... ಈ ಉದ್ದೇಶಕ್ಕೆ ತಣ್ಣೀರಿನಂತಹ ಸ್ಪರ್ಶ ನೀಡಿದವರು ನಟಿ ಪ್ರಿಯಾಂಕಾ ಉಪೇಂದ್ರ. `ವಿಶ್ವ ಪರಿಸರ ದಿನ'ದ ಅಂಗವಾಗಿ (ಜೂ 5) 92.7 ಬಿಗ್ ಎಫ್ಎಂ ಹಮ್ಮಿಕೊಂಡಿರುವ `ಬಕೆಟ್ ಹಿಡಿಯಿರಿ, ನೀರು ಉಳಿಸಿ' ಜಾಗೃತಿ ಅಭಿಯಾನದ ಪ್ರಚಾರದ ಕೇಂದ್ರ ಬಿಂದು ಪ್ರಿಯಾಂಕಾ.

ಕಪ್ಪು ಶರ್ಟ್, ಬಿಳಿ ಜಾಕೆಟ್, ಜೀನ್ಸ್ ತೊಟ್ಟು ಪರಿಸರ ರಕ್ಷಣೆಯ ಪಾಠ ಮಾಡಲು ವೇದಿಕೆಗೆ ಉಮೇದಿನಿಂದಲೇ ಬಂದ ಈ ಕೆಂಬಣ್ಣದ ನಟಿ, ಎಲ್ಲರೂ ಜಾಗೃತಿಗೆ ಸನ್ನದ್ಧರಾಗುವಂತೆ ಪರಿಸರ ಪಾಠ ಮಾಡಿದರು. ಜತೆಗೆ ನಗರದಲ್ಲಿನ ನೀರಿನ ಸಮಸ್ಯೆ ತಮಗೆ ತಟ್ಟಿದ ಬಗೆಯನ್ನು ಬಣ್ಣಿಸಿದರು. ನೀರಿನ ಅಪವ್ಯಯ ತಡೆಗಟ್ಟಿ ಎನ್ನುತ್ತಲೇ ನಗರದ ಪರಿಸರ ಮಾಲಿನ್ಯದ ಬಗ್ಗೆಯೂ ಮಾತು ಹರಿಬಿಟ್ಟರು.

`ಬೆಂಗಳೂರಿನಲ್ಲಿ ಹತ್ತು ವರ್ಷದಿಂದ ವಾಸಿಸುತ್ತಿದ್ದೇನೆ. ಆದರೆ ಈ ವರ್ಷ ಎದುರಾದಷ್ಟು ನೀರಿನ ಸಮಸ್ಯೆ ಹಿಂದಿನ ಯಾವ ವರ್ಷದಲ್ಲೂ ಎದುರಾಗಿರಲಿಲ್ಲ. ನಮ್ಮ ಮನೆಯಲ್ಲಿ ನೀರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಿದ್ದೇವೆ. ನೀರನ್ನೂ ಹಣ ಕೊಟ್ಟು ಕೊಳ್ಳುವ ಸ್ಥಿತಿ ಎದುರಾದರೆ ಸಾಮಾನ್ಯ ಜನರು ಬದುಕುವುದಾದರೂ ಹೇಗೆ' ಎಂದು ತಮಗೆ ತಟ್ಟಿರುವ ನೀರಿನ ಬಿಸಿಯ ಕುರಿತು ಹೇಳಿಕೊಂಡರು.

`ನಗರದ ಕಸದ ಸಮಸ್ಯೆಯಿಂದ ಸೊಳ್ಳೆಗಳು ಹೆಚ್ಚಿವೆ. ನಮ್ಮ ಮನೆಯಲ್ಲೂ ಸೊಳ್ಳೆಗಳು ವಿಪರೀತವಾಗಿದ್ದವು. ಎರಡು ದಿನದ ಹಿಂದೆ ಕೀಟನಾಶಕ ಸಿಂಪಡಿಸಿದ್ದೇವೆ' ಎಂದಾಗ ಅವರ ಕೆನ್ನೆ ಇನ್ನಷ್ಟು ಕೆಂಪೇರಿದ್ದು ವಿಚಿತ್ರ.

ಪ್ರತಿ ಬೇಸಿಗೆಯಲ್ಲೂ ಪ್ರಿಯಾಂಕಾ ತವರೂರು ಕೋಲ್ಕತ್ತಗೆ ಹೋಗುತ್ತಾರಂತೆ. ಇಲ್ಲಿಗಿಂತ ಅಲ್ಲಿ ಹೆಚ್ಚು ಬಿಸಿಲು. ಆದರೆ ಈ ಬಾರಿ ಕೋಲ್ಕತ್ತದ ಧಗೆಯದ್ದೇ ವಾತಾವರಣ ಬೆಂಗಳೂರಿನಲ್ಲೂ ಅನುಭವಿಸಿದರಂತೆ.

ತಾವು ಕೇವಲ ಪ್ರಚಾರಕ್ಕೆ ಬಂದಿಲ್ಲ, ಪರಿಸರ ಸಂರಕ್ಷಣೆಯ ಗಿಳಿಪಾಠ ಹೇಳಲೂ ಬಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಎಂಬಂತೆ ಪರಿಸರ ರಕ್ಷಣೆ ಮತ್ತು ನೀರಿನ ಮಿತ ಬಳಕೆಗೆ ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿರುವ ಯೋಜನೆಗಳನ್ನು ಪ್ರಿಯಾಂಕಾ ಬಿಚ್ಚಿಟ್ಟರು. `ಇವರಿಗೂ ಮಳೆ ನೀರು ಸಂಗ್ರಹ ವ್ಯವಸ್ಥೆಯ ಬಗ್ಗೆ ಗೊತ್ತೆ' ಎಂದು ಎಲ್ಲರೂ ಹುಬ್ಬೇರಿಸುವಂತೆ ಮಳೆ ನೀರು ಸಂಗ್ರಹದ ಅನುಕೂಲತೆಯ ಬಗ್ಗೆ ಹೇಳಿದರು. ತಮ್ಮ ಮನೆಯಲ್ಲಿ ಮಳೆ ನೀರು ಸಂಗ್ರಹಕ್ಕೆ ಮಾಡಿಕೊಂಡಿರುವ ವ್ಯವಸ್ಥೆಯನ್ನು ವಿವರಿಸಿದರು.

`ಪೈಪ್ ಮೂಲಕ ಗಿಡಗಳಿಗೆ ನೀರು ಹಾಯಿಸುವುದರಿಂದ ಹೆಚ್ಚು ನೀರು ವ್ಯರ್ಥವಾಗುತ್ತದೆ. ಹಾಗಾಗಿ ಬಕೆಟ್ನಲ್ಲಿ ಗಿಡಕ್ಕೆ ನೀರು ಹಾಕುತ್ತೇವೆ. ಸುತ್ತಮುತ್ತಲ ಪ್ರದೇಶವನ್ನು ಸಾಕಷ್ಟು ಸ್ವಚ್ಛವಾಗಿಟ್ಟುಕೊಳ್ಳುತ್ತೇನೆ. ಕಾರನ್ನು ವಾರಕ್ಕೆ ಒಂದು ಬಾರಿ ಮಾತ್ರ ತೊಳೆಯುತ್ತೇವೆ. ಇದರಿಂದಲೂ ನೀರು ಉಳಿಸಬಹುದು' ಎಂದು ದೈನಂದಿನ ಸಣ್ಣ ಪುಟ್ಟ ಚಟುವಟಿಕೆಗಳಲ್ಲಿ ನೀರನ್ನು ಉಳಿಸುವ ದಾರಿಗಳನ್ನು ತೋರಿದರು.

`ಪರಿಸರ ಸಂರಕ್ಷಣೆಗೆ ಕಠಿಣ ನಿಯಮಗಳನ್ನು ಜಾರಿ ಮಾಡಬೇಕು. ಭಯದಿಂದಲಾದರೂ ಜನ ಪರಿಸರ ಸಂರಕ್ಷಣೆಯ ಕಾಳಜಿ ವಹಿಸುತ್ತಾರೆ. ನೀರಿಲ್ಲದ ಕಾರಣ ತಾಜಾ ಹಣ್ಣು, ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಮಾವಿನ ಹಣ್ಣನ್ನು ಈ ಬಾರಿ ತಿನ್ನಲಾಗಲಿಲ್ಲ' ಎಂದಾಗ ಅವರ ಮೊಗದಲ್ಲಿ ಬೇಸರದ ಭಾವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.