ಅಂದು ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. 30 ದೇಶಗಳಿಂದ ಬಂದಿದ್ದ ಸುಮಾರು ಏಳು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಸೇರಿದ್ದರು. ಆಯಾ ದೇಶದ ಸಾಂಸ್ಕೃತಿಕ, ನೆಲದ ಸೊಗಡನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಕಣ್ಣಿಗೆ ಹಬ್ಬದೂಟ ಉಣಬಡಿಸಿದವು.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಫ್ಘಾನಿಸ್ತಾನ್, ಭೂತಾನ್, ಇರಾಕ್, ಸುಡಾನ್, ಶ್ರೀಲಂಕಾ, ನೇಪಾಳ ಹಾಗೂ ಉಗಾಂಡ ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತಮ್ಮ ದೇಶಗಳ ಸಾಂಪ್ರದಾಯಿಕ ಉಡುಪು ಧರಿಸಿ ಹಾಡು ನೃತ್ಯಗಳಿಗೆ ಹೆಜ್ಜೆ ಹಾಕಿ ಕಣ್ಮನ ಸೆಳೆದರು.

ಈ ವರ್ಷ `ಸಾಮರಸ್ಯ~ ವಿಷಯವನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ದಿನ ಆಯೋಜಿಸಲಾಗಿತ್ತು. 30 ತಂಡಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವು. ಹಾಡು ನೃತ್ಯಗಳೇ ಅಲ್ಲದೇ ಅವರ ದೇಶಗಳ ಇತಿಹಾಸ ಮತ್ತು ಸಂಸ್ಕೃತಿ ಸಾರುವ ಸಾಕ್ಷ್ಯಚಿತ್ರಗಳ ಪ್ರದರ್ಶನವನ್ನು ಪ್ರದರ್ಶಿಸಲಾಯಿತು. ಅಲ್ಲದೇ ಇಂಟರ್ನ್ಯಾಷನಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ನಿನ ಬೀಳ್ಕೊಡುಗೆ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು.

ಯಶಸ್ಸಿನ ಹಾದಿಗೆ ಶಿಕ್ಷಣದತ್ತ ಪ್ರಾಮುಖ್ಯತೆ ನೀಡಬೇಕು. ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಮುಖಾಮುಖಿಯಿಂದ ಮಕ್ಕಳ ಮನೋವಿಕಾಸ ವೃದ್ಧಿಯ ಜೊತೆಗೆ ಸಾಮರಸ್ಯವೂ ಬೆಳೆಯುತ್ತದೆ ಎನ್ನುತ್ತಾರೆ ಉದ್ಘಾಟನೆ ನೆರವೇರಿಸಿದ ಅಜರ್ಬೈಜಾನ್ ಬೆಲರೂಸ್ನ ಭಾರತದಲ್ಲಿ ರಾಯಭಾರಿಯಾಗಿದ್ದ ಬಿ.ಆರ್.ಮುತ್ತು ಕುಮಾರ್.

ಅಫ್ಘಾನಿಸ್ತಾನ್, ನೇಪಾಳದ ವಿದ್ಯಾರ್ಥಿಗಳು ನಡೆಸಿಕೊಟ್ಟ ಬುಡಕಟ್ಟು ನೃತ್ಯ ಎಲ್ಲರ ಗಮನ ಸೆಳೆಯಿತು.

700 ವಿದ್ಯಾರ್ಥಿಗಳು 18 ವಿಧದ ಕಾರ್ಯಕ್ರಮಗಳನ್ನು ನೀಡಿ ರಂಜಿಸಿದರು. ಈ ಅಪರೂಪದ ಕಾರ್ಯಕ್ರಮಕ್ಕೆ ಪೋಷಕರು ಸಾಕ್ಷಿಯಾದರು. ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಅಧ್ಯಕ್ಷ ಟಿ. ಸೋಮಶೇಖರ್, ಸಹಾಯಕ ಪ್ರೋಫೆಸರ್ ಜಾಫರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.