ಮಾತೆಂದರೆ ಒಂದು ಪವರ್ಫುಲ್ ಮಾಧ್ಯಮ. ನುಡಿದರೆ ಮುತ್ತಿನ ಹಾರದಂತಿರಬೇಕು. ಮಾತಿನಿಂದ ಏನು ಬೇಕಾದರೂ ಸಾಧಿಸಬಹುದು, ಯಾರನ್ನಾದರೂ ಸೋಲಿಸಬಹುದು. ಇದು ಆರ್.ಜೆ ಕಿರಣ್ ಶ್ರೀಧರ್ ಮಾತು.

ಎಂಜಿನಿಯರ್ ಮುಗಿಸಿ ಆಸ್ಟ್ರೇಲಿಯಾಕ್ಕೆ ಹಾರಲು ಕನಸು ಕಂಡಿದ್ದ ಹುಡುಗ ವೀಸಾ ಸಿಗದೇ ಹತಾಶೆಯಿಂದ ತನ್ನ ಆಂಟಿಯಿದ್ದ ರೇಡಿಯೋ ಸ್ಟೇಷನ್ನತ್ತ ಪಾದಬೆಳಿಸಿದ್ದ. ಮನದ ದುಃಖ ಕಳೆಯಲು ಹೋಗಿದ್ದವನಿಗೆ ಅಲ್ಲಿ ಬಾಳಿನ ದಾರಿ ಸಿಕ್ಕಿತ್ತು. ಅದೇ ಕೊನೆಗೆ ಕೈ ಹಿಡಿದಿತ್ತು. ಸತತ ಹತ್ತು ವರ್ಷ ಅನುಭವ ಹೊಂದಿದರೂ ಮಾತು ನಯ ವಿನಯದಿಂದ ಕೂಡಿತ್ತು.

ನಾನು ಈ ಕ್ಷೇತ್ರಕ್ಕೆ ಬಂದಿದ್ದು ಅಕಸ್ಮಾತ್ತಾಗಿ. ಆದರೆ ಇವತ್ತಿಗೂ ಕೈತಪ್ಪಿಹೋದ ಆಸ್ಟ್ರೇಲಿಯಾದ ಅವಕಾಶಕ್ಕೆ ಪರಿತಪಿಸುತ್ತಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ ರೇಡಿಯೋ ಸಿಟಿಯ `ಚೌಚೌ ಭಾತ್~ ಕಾರ್ಯಕ್ರಮದ ಮೂಲಕ ಪ್ರಸಿದ್ಧಿ ಪಡೆದ ಹುಡುಗ.

ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಲ್ಲಿಯೇ. ಈ ನಗರವೆಂದರೆ ನನಗೆ ತುಂಬಾ ಇಷ್ಟ. ಆದರೆ ಇಲ್ಲಿ ಇರುವ ಪ್ರಕೃತಿ ಸೌಂದರ್ಯವೆಂದರೆ ಮರಗಳು. ಅದನ್ನೇ ಕಡಿದು ಹಾಕಿ ರಸ್ತೆ ಅಗಲೀಕರಣ ಮಾಡಲು ಹೋಗುತ್ತಾರೆ. ನಮ್ಮೂರಿನ ಸೌಂದರ್ಯವೇ ಹಾಳಾಗುತ್ತಿದೆ ಎಂಬ ನೋವು ಅವರದ್ದು.

ಜನವರಿ 1, 2006ರಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿಯವರನ್ನು ಮೊದಲು ಸಂದರ್ಶನ ಮಾಡಿದ ಹುಡುಗ. `ಅವರದು ತುಂಬಾ ಸರಳ ವ್ಯಕ್ತಿತ್ವ. ನನಗೆ ತುಂಬಾನೇ ಖುಷಿ ನೀಡಿದ ಸಂದರ್ಶನ ಅದು. ಯಾರು ಎಷ್ಟೇ ಸಲ ಕೇಳಿದರೂ ಅದು ನನ್ನ ಮೊದಲ ಹಾಗೂ ಮರೆಯಲಾಗದ ಅನುಭವ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ~ ಎಂದು ಖುಷಿಯಿಂದ ಹೇಳುತ್ತಾರೆ.

`ಹಾಗೇಯೇ ಡಾ. ವಿಷ್ಣುವರ್ಧನ್ ಅವರಿಂದ ಒಂದು ಕಾರ್ಯಕ್ರಮ ಸಹ ಮಾಡಿಸಿದ್ದೆ. ನಾನು ಮಾತು ಮರೆತ ಕ್ಷಣವದು. ಅವರೇ ರೇಡಿಯೋ ಜಾಕಿಯಾಗಿ ಮಾತಾಡಿದ್ದರು. ಉಪೇಂದ್ರ ಸಹ ನನ್ನೊಂದಿಗೆ ರೇಡಿಯೋ ಜಾಕಿಯಾಗಿ ಒಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಇವೆಲ್ಲ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ ನೆನಪುಗಳು. ಇಂದಿಗೂ ರಾತ್ರಿ ಕಂಡ ಕನಸಿನ ಬಗ್ಗೆ ನಾಲ್ಕು ಗಂಟೆ ಮಾತನಾಡುವ ಶಕ್ತಿ, ಕೌಶಲ್ಯ ನನ್ನಲ್ಲಿದೆ~ ಎಂದು ವಿಶ್ವಾಸದಿಂದ ಹೇಳುತ್ತಾರೆ. ಓದುವದರೊಂದಿಗೆ ಪ್ರಚಲಿತ ವಿಷಯಗಳ ಬಗ್ಗೆಯೂ ಜಾಸ್ತಿ ಗಮನಹರಿಸುವುದು ತಮ್ಮ ಅಭಿರುಚಿ, ಹವ್ಯಾಸ ಎಂದು ಮಾತು ಸೇರಿಸುತ್ತಾರೆ.

`ಇತ್ತೀಚಿನ ಕಾರ್ಯಕ್ರಮಗಳಲ್ಲಿ ಮಾತನ್ನು ಬಳಸುತ್ತಿರುವ ರೀತಿ ಅಷ್ಟು ಸರಿಯಾಗಿಲ್ಲ. ಕೆಟ್ಟ ಕೆಟ್ಟ ಕನ್ನಡ ಪದ ಬಳಕೆ ಮಾಡುತ್ತಾರೆ. ನಾವೆಲ್ಲ ಮಾತನಾಡುವಾಗ ಯೋಚಿಸಿ ಮಾತನಾಡುತ್ತಿದ್ದೆವು. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ, ಯಾರಿಗೂ ಕೋಪ ಬರಿಸದೇ ಮಾತನಾಡುವ ಶೈಲಿ ಬೆಳೆಸಿಕೊಳ್ಳಬೇಕು ಆಗ ಮಾತ್ರ ಮಾತಿಗೂ ಒಂದು ಬೆಲೆ ಇರುತ್ತದೆ.

ಇಂದು ನಮ್ಮ ಮಕ್ಕಳಿಗೆ ಕನ್ನಡ ಬರುವುದಿಲ್ಲ ಎಂದು ಹೇಳುವುದೇ ಒಂದು ಹೆಮ್ಮೆಯ ವಿಷಯವಾಗಿದೆ. ನಾವಾಗಿಯೇ ಕನ್ನಡ ಮಾತನಾಡಿದರೂ ಇಂಗ್ಲಿಷ್ ಮಾತನಾಡುತ್ತಾರೆ. ಮನಸ್ಸಿಗೆ ತುಂಬಾನೇ ಬೇಜಾರಾಗುತ್ತೆ. ನಮ್ಮ ಮಾತೃ ಭಾಷೆ ಮಾತನಾಡುವುದಕ್ಕೂ ಹಿಂದೆ ಮುಂದೆ ನೋಡಬೇಕಾ...? ಮಕ್ಕಳೇ ತಾಯಿಯನ್ನು ಮರೆತರೇ ಹೇಗೇ? ಭಾಷೆಯನ್ನು ನಾವು ಪ್ರೀತಿಸಿದರೆ ಅದು ಉಳಿಯುತ್ತೆ~ ಎಂಬ ಕಾಳಜಿಯೂ ಅವರ ಮಾತಿನಲ್ಲಿ ಕಾಣಿಸುತ್ತಿತ್ತು.

300ಕ್ಕೂ ಹೆಚ್ಚು ಸೆಲೆಬ್ರಿಟಿಗಳನ್ನು ಮಾತನಾಡಿಸಿದ ಅನುಭವ ಅವರದ್ದು. ರೇಡಿಯೋ ಅಲ್ಲದೆ ಟೀವಿಯಲ್ಲೂ ನಿರೂಪಕರಾಗಿ ಕೆಲಸ ಮಾಡಿರುವ ಇವರು ಕಂಠದಾನ ಕಲಾವಿದರೂ ಹೌದು. ಆಲ್ ಇಂಡಿಯಾ ರೇಡಿಯೋ, ರೇಡಿಯೋ ಸಿಟಿ, ಬಿಗ್ ಎಫ್ಎಂಗಳಲ್ಲಿ ಕೆಲಸ ಮಾಡಿದ ಕರ್ಮಿ.

ಮುಂದೊಂದು ದಿನ ತಮ್ಮದೇ ರೇಡಿಯೋ ಸ್ಟೇಷನ್ ರೂಪಿಸುವ ಕನಸು ಕಂಗಳ ಹುಡುಗನಿಗೆ ಮೋಟಾರ್ ಸ್ಪೋರ್ಟ್ಸ್, ಫ್ಲಯಿಂಗ್ ಎಂದರೆ ತುಂಬಾ ಇಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.