ಯಲಹಂಕದ ಜನಧ್ವನಿ ಸಾಂಸ್ಕೃತಿಕ ಸಂಘಟನೆ ವತಿಯಿಂದ ಅಕ್ಟೋಬರ್ 21ರಿಂದ 25ರವರೆಗೆ ‘ನೆಲದೊಡಲ ಹಾಡು’ ಜನಪದ ಕಲಾ ಜಾಥಾ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಯಲಯದಲ್ಲಿ ಉದ್ಘಾಟನಾಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12.30ಕ್ಕೆ ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ಜಾಥಾ ಕಾರ್ಯಕ್ರಮಕ್ಕೆ ಹಿರಿಯ ಪರಿಸರ ತಜ್ಞ ಡಾ.ಅ.ನ.ಯಲ್ಲಪ್ಪ ರೆಡ್ಡಿ ಚಾಲನೆ ನೀಡಲಿದ್ದಾರೆ.

ಮಂಗಳವಾರ ಬೆಳಿಗ್ಗೆ 11ಕ್ಕೆ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಧ್ಯಾಹ್ನ 1.30ಕ್ಕೆ ಯಲಹಂಕ ಉಪನಗರದ ಜ್ಞಾನಜ್ಯೋತಿ ಪದವಿ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಬುಧವಾರ ಬೆಳಿಗ್ಗೆ 10 ಕ್ಕೆ ನೆಲಮಂಗಲದ ಶ್ರೀ ಬಸವಣ್ಣ ದೇವರ ಮಠ ಮಹಿಳಾ ಪ್ರಥಮದರ್ಜೆ ಕಾಲೇಜು ಹಾಗೂ ಮಧ್ಯಾಹ್ನ 1 ಗಂಟೆಗೆ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.

ಗುರುವಾರ ಬೆಳಿಗ್ಗೆ 10ಕ್ಕೆ ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧ್ಯಾಹ್ನ 1ಕ್ಕೆ ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಶುಕ್ರವಾರ ಬೆಳಿಗ್ಗೆ 10ಕ್ಕೆ ಕೋಡಿಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಧ್ಯಾಹ್ನ 3ಕ್ಕೆ ಕನಕಪುರದ ರೂರಲ್ ಕಾಲೇಜಿನಲ್ಲಿ ಕಲಾಜಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ.

ಭೂಮಿತಾಯಿ ಬಳಗ, ಹಳ್ಳಿ ಜನಪದ ಜಾಗತಿಕ ಟ್ರಸ್ಟ್ ಹಾಡೋನಹಳ್ಳಿ, ಕಾರ್ಲಾಪುರ ಹನುಮಂತರಾಯ ತಮಟೆ ತಂಡ, ಸಿ.ಎಚ್. ಸಿದ್ಧಯ್ಯ ಮತ್ತು ನೆಮ್ಮದಿ ಕಲಾತಂಡ, ಪರಮಶಿವಯ್ಯ, ಚೌಡಿಕೆ; ದೊಡ್ಡೇರಿ ಬೈಲಪ್ಪ ಕಲಾವಿದರ ತಂಡ, ಮಲ್ಲಣ್ಣ, ಲಿಂಗಯ್ಯ ತಂಡ ಹಾಗೂ ಹೊಳಸಾಲಯ್ಯ ತಂಡಗಳು ಜಾಥಾದಲ್ಲಿ ಭಾಗವಹಿಸಲಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನೊಂದಿದೆ ಹಮ್ಮಿಕೊಂಡಿರುವ ‘ನೆಲದೊಡಲ ಹಾಡು’ ಜನಪದ ಕಲಾಜಾಥಾವು ನೆಲ, ಜಲ, ಸಂಬಂಧಗಳ ಕುರಿತ ಮೂಲ ಜನಪದ ಮತ್ತು ವರ್ತಮಾನದ ಜನಪದ ಹಾಡುಗಳನ್ನು ಹಾಡುತ್ತಾ ಸಾಗಲಿದೆ. ಅರ್ಕಾವತಿ ನದಿ ತೀರದಲ್ಲಿ ಸಾಗುವ ಜಾಥಾವು ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಕಾರ್ಯಕ್ರಮ ನೀಡಲಿದೆ ಎಂದು ಸಂಘಟನೆಯ ಅಧ್ಯಕ್ಷ ಕಾಕೋಳು ಲಕ್ಕಪ್ಪ ತಿಳಿಸಿದ್ದಾರೆ.
ಮಾಹಿತಿಗೆ–9880151222.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.