ಭಾನುವಾರ, ಮೇ 16, 2021
22 °C

ಮಕರ ಸಂಕ್ರಾಂತಿ: ಮನೆ ಅಲಂಕರಿಸಲು ಪರಿಸರ ಸ್ನೇಹಿ ಕಲ್ಪನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಗ್ಗಿ ಹಬ್ಬವೆನಿಸಿದ ಮಕರ ಸಂಕ್ರಾಂತಿಯನ್ನು ಆಚರಿಸಲು ಬಹುತೇಕ ನಾವೆಲ್ಲ ಸಜ್ಜಾಗಿದ್ದೇವೆ. ಈ ಹಬ್ಬವನ್ನು ರಸಮಯ ಪಾಕ ವೈವಿಧ್ಯದ ಹಬ್ಬವಾಗಿ, ಬೆಂಕಿ ಹಾರಿಸುವ ಮತ್ತು ಗಾಳಿಪಟ ಹಾರಿಸುವ ಹಬ್ಬವಾಗಿ ಆಚರಿಸುತ್ತೇವೆ. ಭಾರತದ ಆದ್ಯತೆಯ ಗೃಹ ಒಳಾಲಂಕಾರ ಬ್ರಾಂಡ್ ಆಗಿರುವ ಹೋಮ್‍ಲೇನ್, ನಿಮ್ಮ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ ಮತ್ತು ಮಕರ ಸಂಕ್ರಾಂತಿ ಸಡಗರ ಹೆಚ್ಚಿಸಲು ಪರಿಸರ ಸ್ನೇಹಿ ಅಲಂಕಾರ ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.

1. ಎಲೆ & ಹೂವಿನ ಎಸಳಿನ ಸಹಜ ರಂಗೋಲಿಗಳನ್ನು ಬಿಡಿಸಿ, ರಂಗೋಲಿ ಪುಡಿ ಮತ್ತು ಬಣ್ಣಗಳನ್ನು ಬಳಸುವ ಬದಲಾಗಿ, ನೈಸರ್ಗಿಕ ಅಂಶಗಳಾದ ವರ್ಣಮಯ ಎಲೆಗಳು, ಹೂವಿನ ಎಸಳುಗಳು ಹಾಗೂ ಬೇಳೆ ಕಾಳುಗಳನ್ನು ಆಕರ್ಷಕ ರಂಗೋಲಿಗಳಿಗಾಗಿ ಬಳಸಿ. ಹೂ ಹಾಸು ತಾಜಾ ವಾತಾವರಣನ್ನು ನೀಡಲಿದ್ದು, ಸಹಜವಾಗಿಯೇ ನಿಮ್ಮ ಉತ್ಸಾಹವನ್ನು ಚಿಮ್ಮಿಸುತ್ತದೆ. ಇದು ಮುಗಿದ ಬಳಿಕ ಇದನ್ನು ಕಾಂಪೋಸ್ಟ್ ಆಗಿ ಉದ್ಯಾನವನಗಳಿಗೆ ಬಳಸಬಹುದಾಗಿದೆ ಹಾಗೂ ಇದು ಶೂನ್ಯ ತ್ಯಾಜ್ಯವನ್ನು ಖಾತರಿಪಡಿಸುತ್ತದೆ.

2. ನಿಮ್ಮ ಕುಟುಂಬ ಹಾಗೂ ಅತಿಥಿಗಳಿಗೆ ಸಂಕ್ರಾತಿ ವಿಶೇಷ ಖಾದ್ಯಗಳನ್ನು ಬಡಿಸಲು ಬಾಳೆ ಎಲೆ ಬಳಸಿ ಇದು ಅತ್ಯುತ್ತಮ ಪರಿಸರ ಸ್ನೇಹಿ ವಿಧಾನಗಳಲ್ಲೊಂದಾಗಿದ್ದು, ನಿಮ್ಮ ಖಾದ್ಯಗಳಿಗೆ ಹೆಚ್ಚಿನ ರುಚಿ ಹಾಗೂ ಸ್ವಾದವನ್ನೂ  ಒದಗಿಸುತ್ತದೆ.

3. ನಿಮ್ಮ ಮನೆಯ ಅಲಂಕಾರಕ್ಕೆ ಕಾಗದದ ಗೊಂಚಲು ಬಳಸಿ ಕಾಗದದ ಗೊಂಚಲುಗಳು ನಿಮ್ಮ ಮನೆಯ ಅಲಂಕಾರಕ್ಕೆ ಅದ್ಭುತ ಸ್ಪರ್ಶ ನೀಡುತ್ತವೆ. ಕಾಗದದ ಗೊಂಚಲುಗಳನ್ನು ಬಳಸಿಕೊಂಡು ಆಕರ್ಷಕವಾಗಿ ಅಲಂಕರಿಸಲು ವಿಪುಲವಾದ ಅವಕಾಶಗಳಿವೆ.

4. ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಡಿಐವೈ ದೀಪಗಳನ್ನು ಬಳಸಿ ಸಾಂಪ್ರದಾಯಿಕ ದೀಪ ಮತ್ತು ಹಣತೆಗಳ ಹೊರತಾಗಿ ನೀವು, ಪ್ಲಾಸ್ಟಿಕ್ ಬಾಟಲಿ, ಮೊಟ್ಟೆ ಚಿಪ್ಪು, ಕಪ್ಪೆಚಿಪ್ಪು, ಹಳೆಯ ಸಾಸ್ ಹಾಗೂ ಜಾಮ್ ಬಾಟಲಿಗಳಿಂದ ತಯಾರಿಸಿದ ಕೆಲ ಡಿಐವೈ ಹಣತೆಗಳನ್ನು ಕೂಡಾ ಬಳಸಬಹುದು. ಇದು ನಿಮ್ಮ ಅಲಂಕಾರಕ್ಕೆ ವಿಶಿಷ್ಟತೆಯನ್ನು ತಂದುಕೊಡುತ್ತದೆ ಹಾಗೂ ನಿಮ್ಮ ಸುತ್ತಲಿನ ವಿಶ್ವವನ್ನು ಸಂರಕ್ಷಿಸಿದ ತೃಪ್ತಿಯನ್ನು ಕೂಡಾ ನಿಮಗೆ ನೀಡುತ್ತದೆ.

5. ಸೆರಾಮಿಕ್. ಟೆರ್ರಿಕೋಟಾ ಮತ್ತು ಸಾಂಪ್ರದಾಯಿಕ ಅಡುಗೆ ಮೇಜಿನ ಪರಿಕರಗಳನ್ನು ಆಯ್ಕೆ ಮಾಡಿಕೊಳ್ಳಿ
ಈ ಹಬ್ಬದ ಋತುವಿನಲ್ಲಿ ಯೋಚನಾಬದ್ಧವಾಗಿ ಕ್ಯಾಂಡಲ್ ಹೋಲ್ಡರ್‍ಗಳನ್ನು ಸಿದ್ಧಪಡಿಸಲು ಮತ್ತು ಅಡುಗೆ ಬಡಿಸುವ ಪರಿಕರಗಳನ್ನು ತಯಾರಿಸಲು ಸೆರಾಮಿಕ್ ಮತ್ತು ಟೆರ್ರಿಕೋಟಾ ಉತ್ಪನ್ನಗಳನ್ನು ಬಳಸಿ. ಇದು ಆಕರ್ಷಕವಾಗಿರುತ್ತದೆ. ಈ ಪರಿಕಲ್ಪನೆಗೆ ಪೂರಕವಾಗುವಂಥ ಸಾಂಪ್ರದಾಯಿಕ ವಿನ್ಯಾಸ ಬಳಸಬಹುದು.

6. ಗಾಳಿಪಟದ ದಾರ ಹೊಳೆಯುವಂತೆ ಮಾಡಿ ನಿಮ್ಮ ಮನೆಗಳನ್ನು, ಗಾಳಿಪಟದ ದಾರವನ್ನು ಮಿನುಗುವಂತೆ ನೀವು ನಿಮ್ಮ ಕುಟುಂಬದ ಸದಸ್ಯರ ನೆರವಿನಿಂದ ಮನೆಯಲ್ಲೇ ಮಾಡಬಹುದಾಗಿದೆ. ಗಾಳಿಪಟದ ಜೋತುಬಿಡುವ ಭಾಗ ಹಾಗೂ ಗಾಳಿಯ ರೆಕ್ಕೆಗಳನ್ನು ಚಿಟ್ಟೆ ಹಾಗೂ ಹೂವುಗಳಿಂದ ಅಲಂಕರಿಸುವ ಮೂಲಕ ನಿಮ್ಮ ಮನೆಯ ಪ್ರವೇಶದ್ವಾರ ಹಾಗೂ ಗೋಡೆಗಳನ್ನು ಕೂಡಾ ಶೃಂಗರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು