ಮನೆಯಲ್ಲಿರಲಿ ಈ ಸಸ್ಯಗಳು!

7

ಮನೆಯಲ್ಲಿರಲಿ ಈ ಸಸ್ಯಗಳು!

Published:
Updated:

ಮನೆ ಸುತ್ತಮುತ್ತ ಹಾಗೂ ಒಳಗೆ ಕೆಲ ಸಸ್ಯಗಳನ್ನು ಅಲಂಕಾರಿಕವಾಗಿ ಬೆಳೆಸುವುದರಿಂದ ಯಥೇಚ್ಛ ಆಮ್ಲಜನಕ ಸಿಗುವುದಲ್ಲದೇ ಹಸಿರು ಮನಸ್ಸನ್ನು ಮುದಗೊಳಿಸುತ್ತದೆ. ಕೆಲ ಗಿಡಗಳು ಒತ್ತಡ ನಿವಾರಕಗಳಾಗಿ, ಶೀತ, ಕೆಮ್ಮು, ತಲೆನೋವಿನಂತಹ ಕಾಯಿಲೆಯನ್ನು ಗುಣ ಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಮನೆಯಲ್ಲಿ ಬೆಳೆಸಿ, ಅಲಂಕಾರಿಕವಾಗಿಯೂ ಬಳಸಬಹುದಾದ ಸಸ್ಯಗಳು ಅನೇಕ ಇವೆ.

ತುಳಸಿ, ರೋಸ್‌ಮರಿ, ಪುದೀನಾ ಹಾಗೂ ಇನ್ನು ಅನೇಕ ಸಸ್ಯಗಳು ಶಿಲೀಂಧ್ರಸೋಂಕುಗಳು, ತಲೆನೋವು, ಆತಂಕ, ನಿದ್ರಾಹೀನತೆ ಮತ್ತು ಚರ್ಮರೋಗಗಳನ್ನು ಗುಣಪಡಿಸಬಹುದಾದ ಗುಣ ಹೊಂದಿವೆ. 

ಅಲೋವೇರಾ: ಇದು ಗಾಳಿಯನ್ನು ಶುದ್ಧ ಮಾಡುವ ಗುಣ ಹೊಂದಿದೆ. ಇದರ ರಸವನ್ನು ಹಚ್ಚಿಕೊಂಡರೆ ಬಿಸಿಲು, ಮೊಡವೆಗಳಿಂದ ಆಗಿರುವ ಕಲೆಗಳು ಹಾಗೂ ಒಣಚರ್ಮವನ್ನು ದೂರ ಮಾಡುತ್ತದೆ. ಅಲೋವೇರಾದ  ಜ್ಯೂಸ್‌ ಕುಡಿಯುವುದರಿಂದ ಜೀರ್ಣಶಕ್ತಿ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೇ ಗಾಯಗಳನ್ನು ಗುಣಪಡಿಸುವ ಕೆಲಸವನ್ನೂ ಮಾಡುತ್ತದೆ. 

ಪುದೀನಾ: ಇದು ನೈಸರ್ಗಿಕ ನಂಜುನಿರೋಧಕ. ಇದನ್ನು ತಲೆ ನೋವು, ಚರ್ಮದ ತುರಿಕೆ, ಅಜೀರ್ಣವಾಗಿದ್ದಲ್ಲಿ ಔಷಧಿಯಾಗಿ ಬಳಕೆಯಾಗುತ್ತದೆ. ಇದರ ಎಣ್ಣೆಯನ್ನು ಬಳಸುವುದರಿಂದ ಚರ್ಮ ಸಂಬಂಧಿ ಕಾಯಿಲೆಗಳನ್ನು ಗುಣವಾಗುತ್ತದೆ. ಇದಲ್ಲದೇ ತಲೆಹೊಟ್ಟು ಹಾಗೂ ಹೇನು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. 

ರೋಸ್‌ಮರಿ: ಈ ಗಿಡ ಇದ್ದಲ್ಲಿ ಅವರ ಎಲೆಗಳ ಉಪಯೋಗದಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಮಾಂಸಖಂಡಗಳ ನೋವು ಕಡಿಮೆ ಮಾಡುವ ಗುಣ ಹೊಂದಿರುವ ಈ ಸಸ್ಯ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಲ್ಯಾವೆಂಡರ್‌: ಈ ಗಿಡವು ಒತ್ತಡ ನಿವಾರಣೆ ಮಾಡಿ, ಚಿತ್ತ ಬದಲಾವಣೆ ಮಾಡಿ ಮನಶಾಂತಿ ಒದಗಿಸುತ್ತದೆ. ಇದರ ಎಣ್ಣೆಯನ್ನು ಬಳಸುವುದರಿಂದ ಉತ್ತಮ ನಿದ್ದೆಯಾಗುತ್ತದೆ, ತಲೆಹೊಟ್ಟು ಕಡಿಮೆಯಾಗುತ್ತದೆ. ಚರ್ಮಕ್ಕೆ ಹಚ್ಚಿದರೆ ಹೊಳಪಾಗುತ್ತದೆ.

ತುಳಸಿ: ಆಯುರ್ವೇದದಲ್ಲಿ ತುಳಸಿಯನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಮನೆಯಲ್ಲಿ ತುಳಸಿಗೆ ಪೂಜ್ಯ ಸ್ಥಾನ. ಜ್ವರ, ಶೀತ, ಕೆಮ್ಮು ಇದ್ದಾಗ ಚಹಾಕ್ಕೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ, ಕುಡಿದರೆ ಅವು ಕಡಿಮೆಯಾಗುತ್ತವೆ. ಗಂಧ ಹಾಗೂ ತುಳಸಿ ರಸವನ್ನು ಮಿಶ್ರ ಮಾಡಿ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ಕುಡಿದರೆ ಅಥವಾ ತುಳಸಿ ರಸವನ್ನು ಚರ್ಮಕ್ಕೆ ಹಚ್ಚಿಕೊಂಡರೆ ಚರ್ಮ ಕಾಂತಿಯಾಗುತ್ತದೆ. ಇದಲ್ಲದೇ ಬಹುಪಯೋಗಿಯಾಗಿ ತುಳಸಿಯನ್ನು ಬಳಸಲಾಗುತ್ತದೆ. 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !