ಶನಿವಾರ, ಆಗಸ್ಟ್ 13, 2022
22 °C
ಯೋಜನೆಯ ಪ್ರಗತಿ ವಿವರ ಸಲ್ಲಿಸದ ಬಿಲ್ಡರ್‌ಗಳ ವಿರುದ್ಧ ಕ್ರಮ

ಯೋಜನೆ ವರದಿ ವಿಳಂಬವಾದರೆ ರೇರಾ ಅಡಿ ಬಿಲ್ಡರ್‌ಗಳಿಗೆ ತಿಂಗಳಿಗೆ ₹20 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸತಿ ಯೋಜನೆ ಅಥವಾ ಅಪಾರ್ಟ್‌ಮೆಂಟ್ ಸಮುಚ್ಚಯದ ಪ್ರಗತಿಯ ಕುರಿತು ನಿಯಮಿತವಾಗಿ ವರದಿ ನೀಡದ ಬಿಲ್ಡರ್‌ಗಳು ಅಥವಾ ಡೆವಲಪರ್‌ಗಳಿಗೆ ಭಾರಿ ಮೊತ್ತದ ದಂಡ ವಿಧಿಸಲು ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಮುಂದಾಗಿದೆ. 

ರೇರಾ ಅಡಿ ನೋಂದಣಿ ಮಾಡಿಸಿಕೊಂಡ ಬಿಲ್ಡರ್‌ಗಳು ಪ್ರತಿ ತ್ರೈಮಾಸಿಕಕ್ಕೆ ತಮ್ಮ ಯೋಜನೆಗಳ ಪ್ರಗತಿಯ ವಿವರವನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ನಿರ್ದಿಷ್ಟ ಅವಧಿ ಮುಗಿದ 15 ದಿನಗಳ ನಂತರವೂ ವಿವರವನ್ನು ದಾಖಲಿಸದಿದ್ದರೆ ದಂಡ ಪಾವತಿಸಬೇಕಾಗುತ್ತದೆ.

ತ್ರೈಮಾಸಿಕ ಅವಧಿಯ 15 ದಿನಗಳ ನಂತರ, ಮೊದಲ ತಿಂಗಳಿಗೆ ₹10 ಸಾವಿರದವರೆಗೆ ದಂಡವನ್ನು ವಿಧಿಸಲಾಗುತ್ತದೆ. ನಂತರವೂ ವಿವರವನ್ನು ದಾಖಲಿಸದಿದ್ದರೆ ತಿಂಗಳಿಗೆ ₹20,000 ದಂಡವನ್ನು ವಿಧಿಸಲಾಗುತ್ತದೆ ಎಂದು ರೇರಾ ಹೇಳಿದೆ.

ರೇರಾ ಅಡಿ 3,800 ಬಿಲ್ಡರ್‌ಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ, 1,700 ಬಿಲ್ಡರ್‌ಗಳು ತ್ರೈಮಾಸಿಕವಾಗಿ ಯೋಜನೆಯ ಪ್ರಗತಿಯ ವಿವರ ಸಲ್ಲಿಸಿಲ್ಲ ಎಂದು ರೇರಾ ಅಧಿಕಾರಿಗಳು ಹೇಳುತ್ತಾರೆ. 

ಹಣ ಪಾವತಿಸಿಕೊಂಡ ಬಿಲ್ಡರ್‌ಗಳು ಅವಧಿ ಮುಗಿದು ವರ್ಷಗಳೇ ಕಳೆದರೂ ಮನೆ ನೀಡದೆ ಸತಾಯಿಸುತ್ತಿರುವ ಕುರಿತು ಖರೀದಿದಾರರು ದೂರು ದಾಖಲಿಸಿದ್ದರು. ಬಹಳಷ್ಟು ಗ್ರಾಹಕರು ಬಿಲ್ಡರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ತಪ್ಪಿಸಲು ಬಿಲ್ಡರ್‌ಗಳ ಮೇಲೆ ದಂಡ ವಿಧಿಸಲು ರೇರಾ ಮುಂದಾಗಿದೆ.

ಈ ಬಗ್ಗೆ ‘ಹಣವೂ ಇಲ್ಲ, ಮನೆಯೂ ಇಲ್ಲ’  ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು