ಡ್ರೈ ಫ್ರೂಟ್ಸ್ ಶ್ಯಾವಿಗೆ ಖೀರ್

ಬೇಕಾಗುವ ಸಾಮಗ್ರಿಗಳು: ಹಾಲು – 1 ಲೀಟರ್, ಶ್ಯಾವಿಗೆ – 70 ಗ್ರಾಂ, ಗೋಡಂಬಿ – 20 ಗ್ರಾಂ, ಬಾದಾಮಿ – 20 ಗ್ರಾಂ, ಪಿಸ್ತಾ – 15 ಗ್ರಾಂ, ಒಣ ಖರ್ಜೂರ – 5-10, ದ್ರಾಕ್ಷಿ – 20 ಗ್ರಾಂ, ತುಪ್ಪ – 3 ಟೇಬಲ್ ಚಮಚ, ಕಂಡೆನ್ಸ್ಡ್ ಮಿಲ್ಕ್ – 200 ಗ್ರಾಂ, ಸಕ್ಕರೆ – 2 ಟೇಬಲ್ ಚಮಚ, ಕೇಸರಿ ದಳಗಳು – ಸ್ವಲ್ಪ, ಏಲಕ್ಕಿ ಪುಡಿ – 1/2 ಟೀ ಚಮಚ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಹಾಲನ್ನು ಹಾಕಿ ಮುಕ್ಕಾಲು ಭಾಗ ಆಗುವವರೆಗೆ ಕುದಿಸಿ. ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಒಂದೇ ರೀತಿಯಲ್ಲಿ ಕತ್ತರಿಸಿ. ಹಾಗೆ ಒಣ ಖರ್ಜೂರವನ್ನು ಕತ್ತರಿಸಿಕೊಳ್ಳಿ.

ನಂತರ ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಹಾಕಿ ಕತ್ತರಿಸಿಕೊಂಡ ಗೋಡಂಬಿ, ಪಿಸ್ತಾ, ಬಾದಾಮಿಯನ್ನು ಹಾಕಿ ಹುರಿದುಕೊಳ್ಳಿ. ನಂತರ ಇನ್ನೊಂದು ಚಮಚ ತುಪ್ಪವನ್ನು ಹಾಕಿ ದ್ರಾಕ್ಷಿ, ಖರ್ಜೂರವನ್ನು ಹುರಿದುಕೊಳ್ಳಿ.

ಬಾಣಲೆಯಲ್ಲಿ ಮತ್ತೊಂದು ಚಮಚ ತುಪ್ಪವನ್ನು ಹಾಕಿ ಶ್ಯಾವಿಗೆಯನ್ನು ಹುರಿದುಕೊಳ್ಳಿ. ಬಿಸಿ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿ ಐದು ನಿಮಿಷಗಳ ನಂತರ ಅದನ್ನು ಕುದಿಯುವ ಹಾಲಿಗೆ ಬೆರೆಸಿ. ನಂತರ ಕುದಿಯುತ್ತಿರುವ ಹಾಲಿಗೆ ಹುರಿದ ಶ್ಯಾವಿಗೆಯನ್ನು ಹಾಕಿ. ಶ್ಯಾವಿಗೆಯು ಐದು ನಿಮಿಷಗಳ ಕಾಲ ಚೆನ್ನಾಗಿ ಹಾಲಿನಲ್ಲಿ ಬೆಂದ ನಂತರ ಸಕ್ಕರೆಯನ್ನು ಹಾಕಿ ಕುದಿಸಿ. ಸಕ್ಕರೆ ಕರಗಿದ ನಂತರ ಹುರಿದ ಒಣ ಹಣ್ಣುಗಳನ್ನು ಹಾಕಿ ಮಿಶ್ರಣ ಮಾಡಿ.ಈಗ ಕಂಡೆನ್ಸ್ಡ್ ಮಿಲ್ಕ್ ಹಾಕಿ ಮಿಶ್ರಣ ಮಾಡಿ.ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ.

ಶೇಂಗಾ ಎಳ್ಳಿನ ಉಂಡೆ

ಬೇಕಾಗುವ ಸಾಮಗ್ರಿಗಳು

ಶೇಂಗಾ – ಅರ್ಧ ಕಪ್

ಎಳ್ಳು – ಅರ್ಧ ಕಪ್

ಬೆಲ್ಲದ ಪುಡಿ – ಅರ್ಧ ಕಪ್

ನೀರು – ಕಾಲು ಕಪ್

ತುಪ್ಪ – ಅರ್ಧ ಚಮಚ

ಏಲಕ್ಕಿ ಪುಡಿ – ಅರ್ಧ ಚಮಚ

ತಯಾರಿಸುವ ವಿಧಾನ: ಶೇಂಗಾವನ್ನು ಹುರಿದು ಸಿಪ್ಪೆ ತೆಗೆದುಕೊಳ್ಳಿ. ಎಳ್ಳು ಸಿಡಿಯುವವರೆಗೆ ಹುರಿಯಿರಿ. ಎರಡನ್ನೂ ಬೇರೆ ಬೇರೆಯಾಗಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.

ಬಾಣಲೆಯಲ್ಲಿ ಬೆಲ್ಲ ಮತ್ತು ಕಾಲು ಕಪ್ ನೀರು ಹಾಕಿ ಉಂಡೆ ಪಾಕ ಮಾಡಿಕೊಳ್ಳಿ. ಒಲೆಯಿಂದ ಇಳಿಸಿ. ನಂತರ ಪುಡಿ ಮಾಡಿಕೊಂಡ ಶೇಂಗಾ ಮತ್ತು ಎಳ್ಳನ್ನು ಹಾಕಿ. ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಆರಿದ ನಂತರ ಬೇಕಿದ್ದರೆ ತುಪ್ಪವನ್ನು ಕೈಗೆ ಮುಟ್ಟಿಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಉಂಡೆಗಳನ್ನು ಕಟ್ಟಿ.

ಕಾಯಿ ಕಡುಬು (ಹೂರಣದ ಕಡುಬು)

ಬೇಕಾಗುವ ಸಾಮಗ್ರಿಗಳು: ಅಕ್ಕಿ –ಒಂದು ಪಾವು,ತೆಂಗಿನ ಕಾಯಿ ತುರಿ –ಒಂದು ಕಪ್, ಬೆಲ್ಲ –ಒಂದು ಕಪ್, ಏಲಕ್ಕಿ ಪುಡಿ –ಎರಡು ಟೀ ಚಮಚ, ಕಾಯಿ ಹಾಲು ಅಥವಾ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಹೂರಣವನ್ನು ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ತೆಂಗಿನಕಾಯಿ, ಬೆಲ್ಲ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಂದು ಎಳೆ ಪಾಕ ಬಂದ ಬಳಿಕ ಒಲೆಯಿಂದ ಇಳಿಸಿ.

ತಯಾರಿಸುವ ವಿಧಾನ: ಅಕ್ಕಿಯನ್ನು ಒಂದರಿಂದ ಎರಡು ಗಂಟೆ ನೀರಿನಲ್ಲಿ ನೆನೆಸಿ.
ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಒಂದು ಬಾಣಲೆಯಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ. ದೋಸೆ ಹಿಟ್ಟಿಗಿಂತ ನೀರಾಗಿ ಇರಬೇಕು. ಹಿಟ್ಟನ್ನು ಮಧ್ಯಮ ಉರಿಯಲ್ಲಿ ಗೊಟಾಯಿಸುತ್ತಾ ಇರಿ. ಹಿಟ್ಟು ಗಟ್ಟಿಯಾದ ನಂತರ ಐದು ನಿಮಿಷ ಮುಚ್ಚಿಡಿ. ಒಲೆಯಿಂದ ಇಳಿಸಿ. ತುಪ್ಪ ಅಥವಾ ಕಾಯಿ ಹಾಲು ಹಾಕಿ ಚೆನ್ನಾಗಿ ನಾದಿಕೊಳ್ಳಿ. ನಾದಿಕೊಂಡ ಹಿಟ್ಟಿನಿಂದ ಸಣ್ಣ ಸಣ್ಣ ಒಂದೊಂದು ಉಂಡೆಗಳನ್ನು ಮಾಡಿ. ಉಂಡೆಯ ತುದಿಯಿಂದ ಸುತ್ತಲೂ ಒತ್ತುತ್ತಾ ಮಧ್ಯ ಭಾಗಕ್ಕೆ ಬನ್ನಿ. ಅದು ಒಂದು ಬಟ್ಟಲಿನ ಆಕಾರಕ್ಕೆ ಬರುತ್ತದೆ. ಅದರಲ್ಲಿ ತಯಾರು ಮಾಡಿಕೊಂಡ ಹೂರಣವನ್ನು ಹಾಕಿ.
ನಿಧಾನವಾಗಿ ಕೊನೆಯಲ್ಲಿ ಬಿಟ್ಟುಕೊಳ್ಳದ ರೀತಿ ಎರಡೂ ಕಡೆ ಒತ್ತಿ.ಇದನ್ನು ಹಬೆ ಮಡಿಕೆ ಅಥವಾ ಇಡ್ಲಿ ಕುಕ್ಕರ್ನಲ್ಲಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ.

ತಂಬಿಟ್ಟು

ಬೇಕಾಗುವ ಸಾಮಗ್ರಿಗಳು: ಅಕ್ಕಿ – ಒಂದು ಕಪ್ ಅಥವಾ ಒಂದು ಪಾವು, ತೆಂಗಿನಕಾಯಿ ತುರಿ – ಒಂದು ಕಪ್, ಬೆಲ್ಲ – ಅರ್ಧ ಕಪ್, ಏಲಕ್ಕಿ ಪುಡಿ – ಒಂದು ಟೀ ಚಮಚ, ತುಪ್ಪ – ಎರಡು ಚಮಚ, ನೀರು – ಕಾಲು ಬಟ್ಟಲು, ಎಳ್ಳು – ಐದರಿಂದ ಆರು ಟೀ ಚಮಚ

ತಯಾರಿಸುವ ವಿಧಾನ: ಅಕ್ಕಿಯನ್ನು ಒಂದರಿಂದ ಎರಡು ಗಂಟೆ ನೀರಿನಲ್ಲಿ ನೆನೆಸಿ ನೀರನ್ನು ಬಸಿಯಿರಿ.ಒಂದು ಸ್ವಚ್ಛವಾದ ಬಟ್ಟೆಯಲ್ಲಿ ನೀರು ಆರುವ ತನಕ ಒಣಗಿಸಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿಯಿರಿ. ನುಣ್ಣಗೆ ಇರಬೇಕು. ನಿಮಗೆ ಬೇಕು ಎನಿಸಿದರೆ ಅಕ್ಕಿಹಿಟ್ಟನ್ನು ಸ್ವಲ್ಪ ಬೆಚ್ಚಗೆ ಮಾಡಿ. ಜಾಸ್ತಿ ಮಾಡಿದರೆ ಉಂಡೆ ಸರಿ ಬರುವುದಿಲ್ಲ.
ತೆಂಗಿನಕಾಯಿ ತುರಿಯನ್ನು ಪರಿಮಳ ಬರುವವರೆಗೆ ಹುರಿಯಬೇಕು.ಬಾಣಲೆಯಲ್ಲಿ ಬೆಲ್ಲವನ್ನು ಹಾಕಿ, ಜೊತೆಯಲ್ಲೇ ಎರಡು ಟೀ ಚಮಚ ತುಪ್ಪ ಹಾಕಿನೂಲು ಪಾಕ ತಯಾರಿಸಿ.
ಎಳ್ಳು, ಏಲಕ್ಕಿ ಪುಡಿ, ಹುರಿದ ತೆಂಗಿನಕಾಯಿ ತುರಿ, ಅಕ್ಕಿಹಿಟ್ಟನ್ನು ಹಾಕಿ.
ಬಿಸಿ ಆರುವ ಮೊದಲೇ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ.

ಹಾಲು ಪೂರಿ

ಬೇಕಾಗುವ ಸಾಮಗ್ರಿಗಳು: ಬಾದಾಮಿ – 15-20, ಗೋಡಂಬಿ – 15-20, ಕೇಸರಿ ದಳಗಳು – 1/4 ಟೀ ಚಮಚ, ಗಸಗಸೆ – 2 ಟೇಬಲ್ ಚಮಚ, ಆಗಲೇ ತುರಿದ ತೆಂಗಿನಕಾಯಿ – 1/2 ಕಪ್, ಹಾಲು – 1 ಲೀಟರ್, ಸಕ್ಕರೆ – 6 ಟೇಬಲ್ ಚಮಚ/ನಿಮ್ಮ ಸಿಹಿಗೆ ಅನುಗುಣವಾಗಿ ಹಾಕಿ, ಕತ್ತರಿಸಿದ ಬಾದಾಮಿ, ಪಿಸ್ತಾ ಚೂರುಗಳು ಸ್ವಲ್ಪ, ಏಲಕ್ಕಿ ಪುಡಿ 1/2 ಟೀ ಚಮಚ

ಪೂರಿ ತಯಾರಿಸಲು: ಮೈದಾಹಿಟ್ಟು – 1ಕಪ್, ಚಿರೋಟಿ ರವೆ – 1/4 ಕಪ್, ಉಪ್ಪು – ಚಿಟಿಕೆ, ಕಲಸಿಕೊಳ್ಳಲು ನೀರು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಚಿಕ್ಕ ಚಿಕ್ಕ ಬಟ್ಟಲಿನಲ್ಲಿ ಗೋಡಂಬಿಯನ್ನು ಬಿಸಿ ಹಾಲಿನಲ್ಲಿ, ಬಾದಾಮಿಯನ್ನು ಬಿಸಿ ನೀರಿನಲ್ಲಿ ಮತ್ತು ಕೇಸರಿ ದಳಗಳನ್ನು ಬಿಸಿ ಹಾಲಿನಲ್ಲಿ ಅರ್ಧ ಗಂಟೆ ನೆನೆಸಿಡಿ. ಗಸಗಸೆಯನ್ನು ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
ಮಿಕ್ಸಿಯಲ್ಲಿ ಹುರಿದ ಗಸಗಸೆ, ತೆಂಗಿನತುರಿ, ಸಿಪ್ಪೆ ತೆಗೆದ ಬಾದಾಮಿ ಮತ್ತು ಗೋಡಂಬಿಯನ್ನು ಜೊತೆಗೆ ಸ್ವಲ್ಪ ಹಾಲು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಹಾಲನ್ನು ಹಾಕಿ ಅದರೊಂದಿಗೆ ರುಬ್ಬಿ ಕೊಂಡ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣವು ಕುದಿಯುತ್ತಾ ಬರುವಾಗ ಸಕ್ಕರೆಯನ್ನು ಸೇರಿಸಿ. ಸಕ್ಕರೆಯು ಕರಗಿದ ನಂತರ ಹಾಲಿನಲ್ಲಿ ನೆನೆಸಿದ ಕೇಸರಿದಳ, ಪಿಸ್ತಾ, ಬಾದಾಮಿ ಚೂರುಗಳನ್ನು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಒಂದು ಕುದಿ ಬಂದ ನಂತರ ಒಲೆಯಿಂದ ಇಳಿಸಿ. ಒಂದು ಬಟ್ಟಲಿನಲ್ಲಿ ಮೈದಾಹಿಟ್ಟು ಮತ್ತು ಚಿರೋಟಿ ರವೆಯನ್ನು ಜೊತೆಗೆ ಸ್ವಲ್ಪ ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ.
ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಪೂರಿ ಹಿಟ್ಟನ್ನು ತಯಾರಿಸಿಕೊಳ್ಳಿ.
ನಂತರ ದೊಡ್ಡ ಉಂಡೆಗಳನ್ನು ತಯಾರಿಸಿಕೊಂಡು ಲಟ್ಟಣಿಗೆಯಲ್ಲಿ ದೊಡ್ಡದಾಗಿ ಲಟ್ಟಿಸಿ ಒಂದು ಚಿಕ್ಕ ಡಬ್ಬಿಯ ಮುಚ್ಚಳದಲ್ಲಿ ಅದನ್ನು ಕತ್ತರಿಸಿ ಒಂದೇ ಅಳತೆಯ ಪೂರಿಗಳನ್ನು ತಯಾರಿಸಿಕೊಳ್ಳಿ. ತಯಾರಿಸಿದ ಪೂರಿಗಳನ್ನು ಮಧ್ಯಮ ಉರಿಯಲ್ಲಿ ಎರಡೂ ಬದಿಯಲ್ಲಿ ಬೇಯಿಸಿಕೊಳ್ಳಿ. ನಂತರ ಒಂದು ಪ್ಲೇಟಿನಲ್ಲಿ ಪೂರಿಗಳನ್ನು ಹಾಕಿ ಅದರ ಮೇಲೆ ತಯಾರಿಸಿಕೊಂಡ ಹಾಲನ್ನು ಹಾಕಿ ಸವಿಯಿರಿ. ರುಚಿಕರವಾದ ಮತ್ತು ಆರೋಗ್ಯಕರವಾದ ಹಾಲು ಪೂರಿಯನ್ನು ತಯಾರಿಸಿ ಸವಿಯಿರಿ.

ಪಾಲಕ್ ಸೊಪ್ಪಿನ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 ಕಪ್,
ಕಡಲೆಹಿಟ್ಟು – 1/2ಕಪ್, ಹುರಿಗಡಲೆ – 2 ಚಮಚ/ಪುಡಿ ಮಾಡಿ ಹಾಕಿ, ಜೀರಿಗೆ – 1/2 ಚಮಚ, ಚಿಟಿಕೆ – ಇಂಗು, ಉಪ್ಪು – ರುಚಿಗೆ ತಕ್ಕಷ್ಟು, ಬೆಣ್ಣೆ – 1 ಚಮಚ, ಎಳ್ಳು – ಒಂದು ಚಮಚ,
ನೀರು – 1/4 ಕಪ್, ಕರಿಯಲು ಎಣ್ಣೆ.

ರುಬ್ಬಿಕೊಳ್ಳಲು: ಪಾಲಕ್ ಸೊಪ್ಪು ಒಂದು ಹಿಡಿ, ಹಸಿಮೆಣಸು ಎರಡು, ನೀರು ಕಾಲು ಕಪ್.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟು, ಕಡಲೆಹಿಟ್ಟು, ಹುರಿಗಡಲೆ ಪುಡಿ, ಜೀರಿಗೆ, ಎಳ್ಳು, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ನಂತರ ಬೆಣ್ಣೆಯನ್ನು ಬಿಸಿ ಮಾಡಿ ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ರುಬ್ಬಿಕೊಂಡ ಪಾಲಕ್ ಸೊಪ್ಪುನ್ನು ಹಾಕಿ ಕಲಸಿಕೊಳ್ಳಿ. ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಚೆನ್ನಾಗಿ ನಾದಿಕೊಳ್ಳಿ. ನಂತರ ಚಕ್ಕುಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ ಒಂದು ತಟ್ಟೆ ಅಥವಾ ಪ್ಲಾಸ್ಟಿಕ್ ಶೀಟ್ನಲ್ಲಿ ಚಕ್ಕುಲಿ ಹಿಟ್ಟನ್ನು ಒತ್ತಿಕೊಳ್ಳಿ. ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿಕೊಳ್ಳಿ. ಒತ್ತಿಕೊಂಡ ಚಕ್ಕುಲಿಯನ್ನು ಹಾಕಿ ಎರಡೂ ಬದಿಯಲ್ಲಿ ಗರಿ ಗರಿಯಾಗಿ ಕರಿಯಿರಿ. ರುಚಿಯಾದ ಪಾಲಕ್ ಸೊಪ್ಪಿನ ಚಕ್ಕುಲಿ ತಯಾರಿಸಿ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.