ಸೋಮವಾರ, ಏಪ್ರಿಲ್ 19, 2021
32 °C

ನಾಲ್ವಡಿ ನೆನಪು, ನಿತ್ಯ ನಿರಂತರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹರಿಯುವ ಕಾವೇರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಂಬಾಡಿ ಅಣೆಕಟ್ಟೆ ಕಟ್ಟದಿದ್ದರೆ, ಮಂಡ್ಯ, ಮೈಸೂರು, ಬೆಂಗಳೂರಿಗರು ಸಂಕಷ್ಟಗಳ ಸರಮಾಲೆಯಲ್ಲಿ ಮುಳುಗಬೇಕಿತ್ತು’ ಎಂದು ಚಾಮರಾಜನಗರದ ನಳಂದಾ ವಿ.ವಿ.ಯ ಬಂತೆ ಬೋಧಿದತ್ತ ತಿಳಿಸಿದರು.

‘ಪಡೆದ ಸಹಾಯ ನೆನೆಯುವವರು ವಿರಳ. ಪಡೆದ ಸಹಕಾರವನ್ನು ಹೇಳಿಕೊಳ್ಳುವವರು ಸಹ ಬಹಳ ವಿರಳ. ಕಾವೇರಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ನಿತ್ಯವೂ ಕುಡಿಯುತ್ತಿರುವ ಬೆಂಗಳೂರಿಗರು ಸದಾ ನಾಲ್ವಡಿಯವರನ್ನು ಸ್ಮರಿಸಬೇಕು’ ಎಂದು ಶುಕ್ರವಾರ ರಾತ್ರಿ ನಗರದ ಕಿರುರಂಗಮಂದಿರದಲ್ಲಿ ನಾಲ್ವಡಿ ಸೋಷಿಯಲ್ ಕಲ್ಚರಲ್ ಆ್ಯಂಡ್ ಎಜುಕೇಷನಲ್‌ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ‘ಮಧುವನದಲ್ಲಿ ನಾಲ್ವಡಿ’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಬಂತೆ ಹೇಳಿದರು.

ರಂಗಕರ್ಮಿ ಬಿ.ಎಂ.ರಾಮಚಂದ್ರು ಮಾತನಾಡಿ ‘ಉಪ್ಪಿಟ್ಟವರನ್ನು ಮುಪ್ಪಿನಲ್ಲೂ ನೆನೆಯಬೇಕು ಎಂಬ ಮಾತೊಂದಿದೆ. ನಾಲ್ವಡಿ ಅವರನ್ನು ನೆನೆಯದವರು ಪಾಪಿಗಳಿದ್ದಂತೆ. ಇಂದಿನ ರಾಜಕಾರಣ ಗಮನಿಸಿದರೆ, ನಾಲ್ವಡಿ ನಮ್ಮ ಪಾಲಿಗೆ ದೇವರಿದ್ದಂತೆ’ ಎಂದರು.

‘ಜನಮಾನಸಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಕರೆದೊಯ್ಯುವ ಕೆಲಸವನ್ನು ನಮ್ಮ ಟ್ರಸ್ಟ್‌ ಮಾಡುತ್ತಿದೆ. ಯುವ ಪೀಳಿಗೆಗೆ ನಾಲ್ವಡಿ ಕೊಡುಗೆಯನ್ನು ಮನನ ಮಾಡಿಕೊಡುವ ಯತ್ನ ನಡೆಸಿದ್ದೇವೆ’ ಎಂದು ಸೋಸಲೆ ಸಿದ್ದರಾಜು ತಿಳಿಸಿದರು.

ಮಧುವನದಲ್ಲಿ ನಾಲ್ವಡಿ ನಾಟಕದ ನಿರ್ದೇಶಕ ದಿನೇಶ್‌ ಚಮ್ಮಾಳಿಗೆ ಅವರ ಒಂದು ವರ್ಷದ ಮಗುವಿಗೆ ‘ಬುದ್ದಿತಾ’ ಎಂದು ನಾಮಕರಣ ಮಾಡುವ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ನಂದಾ ಹಳೆಮನಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.