ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೋ ಮಾತು

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

2008ರಲ್ಲಿ ಮುಂಬೈ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿಯನ್ನು ಎದುರಿಸಿತು. ಹಲವು ಶಸ್ತ್ರಾಸ್ತ್ರಗಳನ್ನು ಹೊಂದಿದ ಹತ್ತು ಮಂದಿ ಭಯೋತ್ಪಾದಕರು ನಗರದ ವಿವಿಧೆಡೆ ಮೂರು ದಿನಗಳ ಕಾಲ ಆತಂಕ ಮೂಡಿಸಿದರು. ಆ ಪೈಕಿ ಇಬ್ಬರು ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಲ್‌ಗಳ ಮೇಲೆ ದಾಳಿ ಇಟ್ಟರು.

ಮನಸೋಇಚ್ಛೆ ಗುಂಡು ಹಾರಿಸಿ ಅಮಾಯಕರನ್ನು ಕೊಂದರು. ‘ಮುಂಬೈ ಮಿರರ್‌’ ಪತ್ರಿಕೆಯ ಫೋಟೊ ಸಂಪಾದಕ ಡಿಸೋಜ ಅವರ ಕಿವಿಯಮೇಲೆ ಗುಂಡಿನ ಶಬ್ದ ಬಿತ್ತು. ಆಗ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ತಕ್ಷಣವೇ ನಿಕಾನ್‌ ಕ್ಯಾಮೆರಾ ಎತ್ತಿಕೊಂಡು ರೈಲ್ವೆ ಸ್ಟೇಷನ್‌ನತ್ತ ಹೊರಟರು.

ಯುವ ಬಂದೂಕುಧಾರಿ ನಿರ್ಭಿಡೆಯಿಂದ ಅಮಾಯಕ ಜನರನ್ನು ಕೊಲ್ಲುವುದನ್ನು ಕಂಡು ಡಿಸೋಜ ಮನಸ್ಸು ಕಂಪಿಸಿತು. ಕಂಬಗಳ ಹಿಂದೆ ಅವಿತು, ಖಾಲಿ ರೈಲು ಕಂಪಾರ್ಟ್‌ಮೆಂಟ್‌ಗಳಲ್ಲಿ ತಲೆಮರೆಸಿಕೊಂಡು ಡಿಸೋಜ ಕೆಲವು ಫೋಟೊಗಳನ್ನು ಧೈರ್ಯವಾಗಿ ಕ್ಲಿಕ್ಕಿಸಿದರು.

ಅಜ್ಮಲ್‌ ಕಸಬ್‌ ಹಾಗೂ ಅವರ ಸಹಚರರ ಸ್ಪಷ್ಟ ಫೋಟೊಗಳನ್ನು ಡಿಸೋಜ ತೆಗೆದರು. ಅವರು ಮಾಡಿದ್ದ ರಕ್ತಪಾತಕ್ಕೂ ಅವು ಕನ್ನಡಿ ಹಿಡಿಯುವಂತಿದ್ದವು. ಕಸಬ್ ಇರುವ ಈ ಫೋಟೊ ಎಲ್ಲಾ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಟಿ.ವಿ. ವಾಹಿನಿಗಳೂ ಅದನ್ನು ತೋರಿದವು.

ಈ ಘಟನೆಗೆ ಕಾರಣರಾದವರಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಭಯೋತ್ಪಾದಕ ಕಸಬ್‌. ಅವನ ವಿಚಾರಣೆಗೂ ಡಿಸೋಜ ತೆಗೆದಿದ್ದ ಫೋಟೊಗಳು ನೆರವಿಗೆ ಬಂದವು. ‘ವಿರ್ಲ್ಡ್‌ ಪ್ರೆಸ್‌ ಫೋಟೊ ಸ್ಪರ್ಧೆ’ಯಲ್ಲಿ ಡಿಸೋಜ ಅವರಿಗೆ ವಿಶೇಷ ಗೌರವ ಪ್ರಕಟಿಸಲಾಯಿತು. ತಮ್ಮ ಜೀವವನ್ನು ಪಣಕ್ಕಿಟ್ಟು ಅವರು ಫೋಟೊಗಳನ್ನು ತೆಗೆದಿದ್ದಕ್ಕೆ ಸಂದ ಫಲ ಅದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT