ತಮಿಳುನಾಡಿನಲ್ಲಿ ಕೊಳ್ಳೇಗಾಲ ಲಾರಿ ಚಾಲಕನಿಗೆ ಬೆಂಕಿ

ಕೊಳ್ಳೇಗಾಲ: ತಮಿಳುನಾಡಿಗೆ ಮಾರಾಟಕ್ಕೆ ಮುಸುಕಿನ ಜೋಳ ಒಯ್ದಿದ್ದ ಲಾರಿ ಚಾಲಕ, ಕನ್ನಡಿಗ ಮಹೇಶ್ ಮೇಲೆ ಹಲ್ಲೆ ನಡೆದಿದೆ. ಆರು ಜನರಿದ್ದ ತಂಡ ಪೆಟ್ರೊಲ್ ಎರಚಿ ಬೆಂಕಿ ಹಚ್ಚಿದೆ.
ಗಾಯಗೊಂಡಿರುವ ಕೊಳ್ಳೇಗಾಲ ತಾಲ್ಲೂಕು ರಾಮಾಪುರ ಬಳಿಯ ಗೋಪಿಶೆಟ್ಟಿಯೂರು ನಿವಾಸಿ ಮಹೇಶ್ (28) ಈಗ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡಿನ ಅಂದಿಯೂರು ಬಳಿ ಸೋಮವಾರ 6 ಜನರ ತಂಡ ಲಾರಿ ಅಡ್ಡಗಟ್ಟಿದೆ. ಲಾರಿಗೆ ಚೆಂಕಿಹಚ್ಚಿದ್ದು, ಮಹೇಶ್ ಮೇಲೂ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದೆ. ಸಕಾಲಕ್ಕೆ ಸ್ಥಳಕ್ಕೆ ಬಂದ ಪೊಲೀಸರು ರಕ್ಷಣೆ ಮಾಡಿದ್ದಾರೆ. ಚಾಲಕನ ಕಾಲು, ಕೈ ಹಾಗೂ ಎದೆಭಾಗದಲ್ಲಿ ಸುಟ್ಟ ಗಾಯಗಳಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.